ಭಾನುವಾರ, ಏಪ್ರಿಲ್ 18, 2021
33 °C

ಪ್ರಾಯಶ್ಚಿತ್ತಕ್ಕಿಂತ ಶಿಕ್ಷೆ ಮತ್ತೊಂದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಬದುಕಿನಲ್ಲಿ ತಪ್ಪುಗಳು ಘಟಿಸುವುದು ಸಹಜ. ಅವುಗಳನ್ನು ಮನಃಪರಿವರ್ತನೆಯಿಂದ ಸರಿಪಡಿಸಿ ಕೊಂಡು ಮುನ್ನಡೆಯಬೇಕು. ಪ್ರಾಯಶ್ಚಿ ತ್ತಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪರಿವರ್ತನೆ ಎನ್ನುವುದು ಈ ಜಗದ ನಿಯಮ. ಅದೇ ನಿಜವಾದ ಜೀವನ ಎಂದು ರಾಜ್ಯ ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಹೇಳಿದರು.ಜಿಲ್ಲಾ ಉಪಕಾರಾಗೃಹದಲ್ಲಿ ಬು ವಾರ ರಾಜ್ಯ ತೆಂಗು ನಾರು ಅಭಿವೃದ್ಧಿ ಮಂಡಳಿ ಮತ್ತು ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರ ವಿಚಾರಣಾಧೀನ ಕೈದಿಗಳಿಗೆ ಏರ್ಪಡಿಸಿದ್ದ ನಾರು ಉತ್ಪನ್ನ ಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತೆಂಗು ನಾರು ಮಂಡಳಿ ನೀಡುತ್ತಿರುವ ತರಬೇತಿಯಿಂದ ವಿಚಾರಣಾಧೀನ ಕೈದಿಗಳು ಶಿಕ್ಷೆ ಮುಗಿಸಿ ಹೊರಬಂದ ನಂತರ, ಆರ್ಥಿಕ ಸ್ವಾವಲಂಬನೆಯಿಂದ ಬದುಕು ನಡೆಸಬಹುದು. ತಮ್ಮ ಕುಟುಂಬ ನಿಭಾಯಿಸಬಹುದು ಎಂದು ಹೇಳಿದರು.ಕಾರ್ಪೋರೇಷನ್ ಬ್ಯಾಂಕ್ ತರಬೇತಿ ಸಂಸ್ಥೆ ನಿರ್ದೇಶಕ ಸತೀಶ್ ಮಾತನಾಡಿ, ಸಂಸ್ಥೆಯಿಂದ ತರಬೇತಿ ಪಡೆದವರಲ್ಲಿ ಬಹಳಷ್ಟು ಮಂದಿ ಸ್ವಉದ್ಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. 6 ದಿನಗಳಿಂದ 45 ದಿನಗಳವರೆಗೆ ತರಬೇತಿ ನೀಡಲಾಗು ವುದು. ಈಗಾಗಲೇ ಸಂಸ್ಥೆಯಿಂದ 22 ಸಾವಿರ ಮಂದಿ ನಿರುದ್ಯೋಗಿ ಯು ವಕರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.ಪ್ರಾದೇಶಿಕ ವ್ಯವ ಸ್ಥಾಪಕ ಕುಮಾರಸ್ವಾಮಿ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.