ಶನಿವಾರ, ನವೆಂಬರ್ 23, 2019
18 °C

ಪ್ರಾಯಶ್ಚಿತ ಮಾಡಿಕೊಂಡ ಪವಾರ್‌

Published:
Updated:
ಪ್ರಾಯಶ್ಚಿತ ಮಾಡಿಕೊಂಡ ಪವಾರ್‌

ಸತಾರಾ (ಪಿಟಿಐ): ಉಜನಿ ಜಲಾಶಯದಿಂದ ನೀರು ಬಿಡುಗಡೆಗಾಗಿ ಆಗ್ರಹಿಸಿ ನಡೆಸಿದ ಸತ್ಯಾಗ್ರಹ ಕುರಿತಂತೆ `ಜಲಾಶಯದಲ್ಲಿ ನೀರಿಲ್ಲದಿದ್ದರೆ ಮೂತ್ರ ಮಾಡಿ ನೀರು ತುಂಬಿಸಲೇ?' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ  ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾನುವಾರ ತಮ್ಮ ಹೇಳಿಕೆಯ ಪ್ರಾಯಶ್ಚಿತಕ್ಕಾಗಿ `ಆತ್ಮ - ಕ್ಲೇಶ' ಉಪವಾಸ ವ್ರತ ನಡೆಸಿದರು.ಎನ್‌ಸಿಪಿ ಮುಖಂಡರಾದ ಅಜಿತ್ ಅವರು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿಯಾದ ದಿವಂಗತ ಯಶವಂತರಾವ್ ಚೌವ್ಹಾಣ್ ಅವರ ಸ್ಮರಣಾರ್ಥವಾಗಿ ತಮ್ಮ ಉಪವಾಸ ವ್ರತವನ್ನು ಆಚರಿಸಿದರು.ತಮ್ಮ ವಿವಾದಾತ್ಮಕ ಹೇಳಿಕೆಗಾಗಿ ಅಜಿತ್ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ. ಆದರೆ ಇದಕ್ಕೆ ತೃಪ್ತಗೊಳ್ಳದ ಶಿವಸೇನಾ, ಬಿಜೆಪಿ ಹಾಗೂ ಎಮ್‌ಎನ್‌ಎಸ್‌ನ ಸದಸ್ಯರು ಅಜಿತ್ ರಾಜೀನಾಮೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ವಿಧಾನಸಭೆಯ ಸದನ ಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಅವರು ಇದು ಹೇಳಿಕೆಗಾಗಿ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತದ ಪ್ರಯತ್ನವಾಗಿದ್ದು, ಯಾವುದೇ ತಂತ್ರವಲ್ಲ ಎಂದು ಹೇಳಿದರು.ಅಜಿತ್ ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ಶನಿವಾರ ಅಜಿತ್ ಹೇಳಿಕೆ ಅನುಚಿತವಾಗಿದೆ ಎಂದು ಹೇಳಿದ್ದರು.

ಪ್ರತಿಕ್ರಿಯಿಸಿ (+)