ಬುಧವಾರ, ಜೂನ್ 23, 2021
22 °C

ಪ್ರಾಯೋಗಿಕವಾಗಿ ಹರಿದ ಕುಡಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಇಲ್ಲಿಗೆ ಸಮೀಪದ ಬೀಳಗಿ ಗ್ರಾಮದ ಬಳಿ ಬೋರ್‌ವೆಲ್‌ಗಳನ್ನು ಕೊರೆಯಿಸಿ, ಅಲ್ಲಿ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿ ಅಲ್ಲಿಂದ ಹನುಮಸಾಗರ ಗ್ರಾಮಕ್ಕೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಮಹತ್ತರ ಯೋಜನೆ ಇದೀಗ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಗುರುವಾರ ಇಲ್ಲಿನ ನೆಲಮಟ್ಟದ ನೀರು ಸಂಗ್ರಹಾಕಾರಕ್ಕೆ ಪ್ರಾಯೋಗಿಕವಾಗಿ ಹರಿಯಿತು.ಸುಮಾರು 63 ಲಕ್ಷ ರೂ. ವೆಚ್ಚದಲ್ಲಿ ನಡೆದ ಈ ಯೋಜನೆ ಕೆಲ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳಿಂದ ಅಲ್ಪ ವಿಳಂಬವಾಗಿದ್ದರಿಂದ ವೃಥಾ ಆರೋಪಗಳು ಬಂದಿದ್ದವು. ಆದರೆ ಈಗ ಕೆಲಸ ಮುಗಿದಿದೆ, ಸಣ್ಣಪುಟ್ಟ ಕೆಲಸಗಳಿದ್ದು, ಇನ್ನೊಂದೆರಡು ದಿನಗಳಲ್ಲಿ ಮುಗಿಸಿ ಗ್ರಾಮ ಪಂಚಾಯಿತಿಯವರಿಗೆ ಹಸ್ತಾಂತರಿಸುತ್ತೇವೆ ಎಂದು ಗುತ್ತಿಗೆದಾರ ಬಸವರಾಜ ಹಳ್ಳೂರ ಹೇಳಿದರು.ಗ್ರಾ.ಪಂ. ಉಪಾಧ್ಯಕ್ಷ ಬಸವರಾಜ ದ್ಯಾವಣ್ಣವರ ಹಾಗೂ ಗ್ರಾ.ಪಂ.ಸದಸ್ಯರು ಬೀಳಗಿಯಿಂದ ಬಂದಿರುವ ನೀರನ್ನು ಪ್ರಾಯೋಗಿಕವಾಗಿ ಹರಿಸಿ ತೃಪ್ತಿ ವ್ಯಕ್ತಪಡಿಸಿದರು.ಗ್ರಾಮದ 1, 6 ಹಾಗೂ 7ನೇ ವಾರ್ಡುಗಳಲ್ಲಿ ಕುಡಿಯುವ ನೀರಿನ ಹೆಚ್ಚಿನ ತೊಂದರೆ ಇದೆ. ಆ ವಾರ್ಡುಗಳಿಗೆ ಮೊದಲ ಆದ್ಯತೆ ನೀಡಿ ಅಲ್ಲಿಗೆ ಪೂರೈಸಿದ ಮೇಲೆ ತೊಟ್ಟಿಯಲ್ಲಿ ಸಂಗ್ರಹಿಸಿ ಬೇರೆ ವಾರ್ಡುಗಳಿಗೆ ಪೂರೈಸಲಾಗುವದು.

 

ಈ ನೀರು ಬಂದಿದ್ದರಿಂದ ಇನ್ನು ಮುಂದೆ ನೀರಿನ ತೊಂದರೆ ತಪ್ಪಬಹುದು. ಸಾರ್ವಜನಿಕ ನಳಗಳ ಬದಲಾಗಿ ಸ್ವಂತ ನಳಗಳನ್ನು ಹೊಂದಿ ನೀರನ್ನು ವ್ಯರ್ಥ ಮಾಡದಂತೆ ನೋಡಿಕೊಳ್ಳಬೇಕು. ಎಂದ ಅವರು ಮುಂದಿನ ದಿನಗಳಲ್ಲಿ ಸ್ವಂತ ನಲ್ಲಿ ಹೊಂದುವಂತೆ ಕಡ್ಡಾಯ ಮಾಡುವ ವಿಚಾರವಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪುತ್ರಪ್ಪ ಕೋಳೂರ, ಈರಪ್ಪ ಪತ್ತಾರ, ಶಿವು ಸಂಗಮದ, ಭವಾನಿಸಾ ಪಾಟೀಲ, ಕಳಕಪ್ಪ ಲಂಗಟದ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.