ಪ್ರಾರ್ಥನೆ

7

ಪ್ರಾರ್ಥನೆ

Published:
Updated:
ಪ್ರಾರ್ಥನೆ

            

 ಶಾಂತವೆಂಬಂತೆ ಭಾಸವಾಗುವ ಸಂದೇಹವಾದವು

               ನನ್ನ ಹೃದಯವನ್ನೆಂದೂ ಒಗಟಾಗಿಸದಿರಲಿ

               ತಪ್ಪಿಸಿಕೊಳ್ಳುವಂತಾಗಲಿ ನಾನು

               ಜಡ ಸಿನಿಕತೆಯಿಂದ

               ನಿಷ್ಪಕ್ಷಪಾತದಿಂದ ಭುಜಕೊಡವಿ

               ಬದುಕನ್ನು ಸದಾ ನಂಬುವಂತಾಗಲಿ

               ನಂಬುವಂತಾಗಲಿ ಎಂದೆಂದು

               ಅಪರಿಮಿತ ಸಾಧ್ಯತೆಗಳ

             ಸೈರನ್* ದೇವತೆಗಳೇ ನಿಮ್ಮ ಹಾಡುಗಳಿಂದ

               ಮೋಸಗೊಳಿಸಿ ಈ ನನ್ನನ್ನು

             ಮುಗ್ಧತೆಯ ಬೆಳಕಿನಭಯ ನೀಡಿ ಕಾಪಾಡಿ

             ಎಷ್ಟಾದರೂ ಹೊರಚರ್ಮ  

               ಹಿಮಗಟ್ಟಿದಂತಿರುವ ತೃಪ್ತಿ

               ದಕ್ಕದ ಕನಸುಗಳಿಗಾಗಿ

               ನಿರ್ಬಂಧಿತ ಪ್ರೇಮಗಳಿಗಾಗಿ

               ಕನ್ನೆಸಹಜ ಕಲ್ಪನೆಗಳಿಗಾಗಿ

               ನಾನು ಸದಾ ಅಳುವಂತಾಗಲಿ

               ಅವು ಮುರಿದು ಚಕ್ಕೆ ಚೂರಾಗಿದ್ದಕ್ಕೆ

            

               ತೋರ ವಾಸ್ತವತೆಯ ಅಂಗಿಯಿಂದ

               ನಾನು ಪಾರಾಗಬೇಕಿದೆ

               ನನ್ನ ತುಟಿ ಮೇಲಿನ ಹಾಡುಗಳ ಕಾಪಾಡಲು

 ಅವು ಅಸಂಖ್ಯವಾಗಲಿ

               ಗದ್ದಲ ಎಬ್ಬಿಸಲಿ

     ಮತ್ತೆ ಅವು ತಂತಿಗಳಲಿ ಭರ್ತಿಯಾಗಲಿ.                 

    ಮೌನಕಾಲಗಳ ಭಯವನ್ನು ಕುರಿತು ಹಾಡಿಯೇ ಬಿಡಲು

                        --

ಸೈರನ್ ದೇವತೆಗಳು*-ಮುಗ್ಧ ನಾವಿಕರನ್ನು ತಮ್ಮ ಮೋಹಕ ಸಂಗೀತ ಹಾಗೂ ಸುಂದರ ದೇಹದಿಂದ ಆಕರ್ಷಿಸಿ ತಮ್ಮ ಶಿಲಾದ್ವೀಪಕ್ಕೆ ಸೆಳೆದೊಯ್ದು ಅಲ್ಲಿಂದ ಹೋಗಲಾರದಂತೆ ಮಾಡುತ್ತಿದ್ದ ಅರ್ಧನಾರಿ-ಅರ್ಧಪಕ್ಷಿ ದೇಹವುಳ್ಳ ಜಲದೇವತೆ.         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry