ಪ್ರಿನ್ಸ್ ನರೂಲಾ ಬಿಗ್ಬಾಸ್ 9ನೇ ಆವೃತ್ತಿ ವಿಜೇತ

ಮುಂಬೈ (ಪಿಟಿಐ): ‘ರೋಡಿಸ್’ ಮತ್ತು ‘ಸ್ಪ್ಲಿಟ್ಸ್ವಿಲ್ಲಾ’ ಖ್ಯಾತಿಯ ಪ್ರಿನ್ಸ್ ನರೂಲಾ ನಿರೀಕ್ಷೆಯಂತೆ ಬಿಗ್ಬಾಸ್ 9ನೇ ಆವೃತ್ತಿಯ ವಿಜೇತರಾಗಿದ್ದಾರೆ.
ಬಿಗ್ಬಾಸ್ ಫೈನಲ್ ತಲುಪಿದ್ದ ಮಂದನಾ ಕರಿಮಿ, ರಿಷಬ್ ಸಿನ್ಹಾ ಹಾಗೂ ರಷೆಲ್ ರಾವ್ ಅವರನ್ನು ಹಿಂದಿಕ್ಕಿ ಪ್ರಿನ್ಸ್ ಈ ರಿಯಾಲಿಟಿ ಷೋ ಗೆಲ್ಲುವ ಮೂಲಕ 35 ಲಕ್ಷದ ಮನೆಯನ್ನು ಬಹುಮಾನವಾಗಿ ಪಡೆದಿದ್ದಾರೆ.
ಎರಡು ರಿಯಾಲಿಟಿ ಷೋ ವಿಜೇತರಾದ ಪ್ರಿನ್ಸ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರಿಂದ ಬಿಗ್ಬಾಸ್ ಆರಂಭವಾದಗಿನಿಂದಲೂ ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಅದರಂತೆಯೇ ಅವರು ಬಿಗ್ಬಾಸ್ ಟ್ರೋಫಿ ಪಡೆದಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆ ಸೇರಿದ್ದ ರಿಷಬ್ ಸಿನ್ಹಾ ಮೊದಲ ರನ್ನರ್ ಅಪ್ ಪ್ರಶಸ್ತಿ ಗೆದ್ದರೆ ಇರಾನಿ ಮೂಲದ ನಟಿ ಮಂದನ ಕರಿಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ಆದಿತ್ಯ ರಾಯ್ ಅತಿಥಿಗಳಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.