ಪ್ರಿಯಕರನಿಗೆ ಬೆದರಿಕೆ ಒಡ್ಡಿ ನೀರಿನ ಟ್ಯಾಂಕ್ ಏರಿದ ಬ್ರೆಜಿಲ್ ಯುವತಿ

7

ಪ್ರಿಯಕರನಿಗೆ ಬೆದರಿಕೆ ಒಡ್ಡಿ ನೀರಿನ ಟ್ಯಾಂಕ್ ಏರಿದ ಬ್ರೆಜಿಲ್ ಯುವತಿ

Published:
Updated:

ಜೈಸಲ್ಮೇರ್, (ಪಿಟಿಐ): ತನ್ನ ಪ್ರಿಯಕರ ತನ್ನ ಜೊತೆ ಬ್ರೆಜಿಲ್‌ಗೆ ಬರದಿದ್ದರೆ ನೀರಿನ ಟ್ಯಾಂಕ್ ಮೇಲಿಂದ ಕೆಳಕ್ಕೆ ಜಿಗಿಯುವುದಾಗಿ ‘ಶೋಲೆ’ ಸಿನಿಮಾ ಮಾದರಿಯಲ್ಲಿ ಬ್ರೆಜಿಲ್ ಯುವತಿಯೊಬ್ಬಳು ಬೆದರಿಕೆ ಹಾಕಿದ ಘಟನೆ ಇಲ್ಲಿ ನಡೆದಿದೆ.ಒಂದೆರಡು ದಿನಗಳೊಳಗಾಗಿ ತನ್ನ ಪ್ರಿಯಕರ ತನ್ನೊಡನೆ ಬ್ರೆಜಿಲ್‌ಗೆ ಬರಬೇಕೆಂದು ಬೇಡಿಕೆ ಒಡ್ಡಿ ಬ್ರೆಜಿಲ್ ಯುವತಿ ಆ್ಯಂಡ್ರಿನಾ ನೀರಿನ ಟ್ಯಾಂಕ್ ಏರಿ ಕುಳಿತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಾಯಿ ತೀರಿಕೊಂಡ ಕಾರಣ ತನಗೆ ಕೂಡಲೇ ಬರಲು ಸಾಧ್ಯವಾಗುವುದಿಲ್ಲ ಎಂದು ಪ್ರಿಯಕರ ಕಾರಣ ನೀಡಿದ್ದರಿಂದಾಗಿ ಆಕೆ ಈ ಸಾಹಸಕ್ಕೆ ಧುಮುಕಿದಳು ಎಂದೂ ಪೊಲೀಸರು ತಿಳಿಸಿದರು.ಅಂತೂ ಕೊನೆಗೆ ಅಮೆರಿಕದ ಪ್ರವಾಸಿಗರೊಬ್ಬರು ಆಕೆಯನ್ನು ಸಮಾಧಾನಪಡಿಸಿದ ಬಳಿಕ ಮತ್ತು ಆಕೆಯ ಪ್ರಿಯಕರ ಮುಂದಿನ ತಿಂಗಳು ಬ್ರೆಜಿಲ್‌ಗೆ ಬರುವುದಾಗಿ ಭರವಸೆ ನೀಡಿದ ಬಳಿಕ ಆಕೆ  ಕೆಳಗಿಳಿಯಲು ಸಮ್ಮತಿಸಿದಳು ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry