ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ

ಭಾನುವಾರ, ಜೂಲೈ 21, 2019
26 °C

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ

Published:
Updated:

ವಿಜಾಪುರ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ  ತನ್ನ ಪತಿಯನ್ನೇ ಕೊಲೆ ಮಾಡಿದ ಘಟನೆ ಇಂಡಿ ತಾಲ್ಲೂಕು ಸಾಲೋಟಗಿಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತನನ್ನು ಸೈಫನ್ ಅಮೀನ್‌ಸಾಬ ಅಪರಾಧಿ (45) ಎಂದು ಗುರುತಿಸಲಾಗಿದೆ. ಆತನ ಪತ್ನಿ ಜುಲೇಖಾ ಮತ್ತು ಶಬ್ಬೀರ್‌ಗೌಸ್ ವಾಲಿಕಾರ (ತಂಬೋಲಿ) ಹಾಗೂ ಇನ್ನೊಬ್ಬ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಫನ್‌ನ ಗೆಳೆಯ ಶಬ್ಬೀರನೊಂದಿಗೆ ಜುಲೇಖಾ ಅನೈತಿಕ ಸಂಬಂಧ ಹೊಂದಿದ್ದಳು.

ಇದು ಗೊತ್ತಾಗಿ ಸೈಫನ್ ತನ್ನ ಪತ್ನಿಗೆ ಬೈಯ್ದನಂತೆ. ಆಗ ಜುಲೇಖಾ ತನ್ನ ಪ್ರಿಯಕರ ಹಾಗೂ ಆತನ ಮಿತ್ರನನ್ನು ಕರೆಯಿಸಿಕೊಂಡಳು. ಮೂವರೂ ಸೇರಿ ಸೈಫನ್‌ನಿಗೆ ಕೈಕಾಲು ಕೈಟ್ಟಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry