ಪ್ರಿಯಾಂಕಾಗೆ ಮೇರಿ ಬಾಕ್ಸಿಂಗ್ ಪಾಠ

7

ಪ್ರಿಯಾಂಕಾಗೆ ಮೇರಿ ಬಾಕ್ಸಿಂಗ್ ಪಾಠ

Published:
Updated:
ಪ್ರಿಯಾಂಕಾಗೆ ಮೇರಿ ಬಾಕ್ಸಿಂಗ್ ಪಾಠ

ಮೇರಿ ಕೋಮ್, ಪ್ರಿಯಾಂಕಾ ಚೋಪ್ರಾ ಅವರನ್ನು ಕರೆದುಕೊಂಡು ಮಣಿಪುರ ರಾಜ್ಯವನ್ನು ಸುತ್ತಾಡಬೇಕು ಎಂದು ಆಸೆ ಪಟ್ಟಿದ್ದಾರೆ. ಬಾಕ್ಸಿಂಗ್ ಗ್ಲೌಸುಗಳನ್ನು ತೊಡುವುದು ಹೇಗೆಂದು ಮೇರಿ ಕೋಮ್ ಬಳಿಯೇ ಕಲಿಯಬೇಕು ಎಂಬ  ತಮ್ಮಾಸೆಯನ್ನು ಪ್ರಿಯಾಂಕಾ ಟ್ವಿಟರ್‌ನಲ್ಲಿ ತೇಲಿ ಬಿಟ್ಟಿದ್ದಾರೆ.ಮಣಿಪುರದ ಮೇರಿ ಕೋಮ್ ಹಾಗೂ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ ಹೀಗೆ ಪರಸ್ಪರ ಹೆಸರು ಜಪಿಸಲು ಕಾರಣ, ಸಂಜಯ್‌ಲೀಲಾ ಬನ್ಸಾಲಿ. ಅವರ ನಿರ್ಮಾಣದ ಮೇರಿ ಕೋಮ್ ಜೀವನ ಆಧಾರಿತ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದಾರೆ. ಮೇರಿ ಕೋಮ್ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.ಆದರೆ ಇದಕ್ಕೆ ಮೇರಿ ಕೋಮ್ ಮಾತ್ರ ಉತ್ತರಿಸುವ ಗೋಜಿಗೆ ಹೋಗದೆ, `ನಟನೆ ಕಷ್ಟದ ಕೆಲಸ. ರಿಂಗಿನೊಳಗೆ, ಯಾವ ಶೈಲಿಯ ಬಾಕ್ಸಿಂಗ್ ಆದರೂ ಮಾಡಬಹುದು. ಆದರೆ ಬಾಕ್ಸಿಂಗ್ ಮಾಡಿದಂತೆ ಮಾಡುವುದು ಅತಿ ಕಷ್ಟದ ಕೆಲಸ' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಓಮಂಗ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೇರಿ ಕೋಮ್, ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವ ಪ್ರಿಯಾಂಕಾಗೆ ಮಣಿಪುರ ಸಂಸ್ಕೃತಿಯನ್ನು ಪರಿಚಯಿಸಲೇಬೇಕು ಎಂದು ತೀರ್ಮಾನಿಸಿದ್ದಾರಂತೆ. `ಮಣಿಪುರದ ಜೀವನ ಅರಿಯದ ಹೊರತು ಅಲ್ಲಿಯ ಮಹಿಳೆಯ ಮುಂದಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಅರಿಯುವುದು ಅಸಾಧ್ಯ' ಎಂದು ಅವರು ಹೇಳಿದ್ದಾರೆ.ಈ ಪಾತ್ರವನ್ನು ಯಾವ ನಟಿಯಾದರೂ ನಿರ್ವಹಿಸಬಹುದು. ಎಲ್ಲರೂ ಪ್ರತಿಭಾವಂತರೇ ಆಗಿದ್ದಾರೆ. ಪ್ರಿಯಾಂಕಾ ಈ ಪಾತ್ರಕ್ಕೆ ಒಪ್ಪಿರುವುದು ಖುಷಿ ತಂದಿದೆ ಎಂದೂ ಮೇರಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ನೀವೇ ಯಾಕೆ ಆ ಪಾತ್ರವನ್ನು ನಿರ್ವಹಿಸಬಾರದು ಎಂಬ ಪ್ರಶ್ನೆಗೆ, `ನಟನೆ ಮಹಾ ಕಷ್ಟದ ಕೆಲಸ. ನಾನೇ ನಟನೆಗಿಳಿದರೆ ಬಹುಶಃ ಈ ಚಿತ್ರ ಐದಾರು ವರ್ಷಗಳಾದರೂ ಮುಗಿಯದೇನೋ' ಎಂದು ನಗುತ್ತಾರೆ ಮೇರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry