ಭಾನುವಾರ, ಡಿಸೆಂಬರ್ 8, 2019
21 °C

ಪ್ರಿಯಾಮಣಿಯ ಕ್ಷೇತ್ರಪ್ರೇಮ

Published:
Updated:
ಪ್ರಿಯಾಮಣಿಯ ಕ್ಷೇತ್ರಪ್ರೇಮ

ಕೆ.ಆರ್.ಸರ್ಕಲ್‌ನಲ್ಲಿ ಮನೆ ಇದ್ದರೂ ಪ್ರಿಯಾಮಣಿ ಮನಸ್ಸು ಈಗಲೂ ಪದೇಪದೇ ತೆಲುಗು ಧ್ಯಾನ ಮಾಡಲು ಕಾರಣವಿದೆ. ಕನ್ನಡದಲ್ಲಿ ಅವರು ಅಭಿನಯಿಸಿರುವ `ಕೋ... ಕೋ...~ ಸಿದ್ಧವಾಗಿದೆ. `ಅಣ್ಣಾ ಬಾಂಡ್~ ಚಿತ್ರೀಕರಣಕ್ಕೆ ಈಗ ಸಣ್ಣ ವಿರಾಮ.ಈ ಚಿತ್ರಗಳಿಗೆ ಬಣ್ಣಹಚ್ಚಿದ ಯಾವ ಅನುಭವವನ್ನು ಪ್ರಿಯಾಮಣಿ ಹಂಚಿಕೊಳ್ಳುತ್ತಿಲ್ಲ. ಅವರ ತಲೆತುಂಬಾ ಕಾಡುತ್ತಿರುವುದು `ಕ್ಷೇತ್ರಂ~ ತೆಲುಗು ಚಿತ್ರ. ಯಾರೇ ಅವರಿಗೆ ಫೋನಾಯಿಸಿದರೂ ಪಟಪಟನೆ ಹೊಮ್ಮುವ ಮಾತುಗಳಲ್ಲಿ ಅದೇ ಚಿತ್ರದ ಜಪ.`ಕ್ಷೇತ್ರಂ~ನಲ್ಲಿ ಪ್ರಿಯಾಮಣಿ ಮೂರು ರೀತಿಯ ಧೋರಣೆ ಇರುವ ಒಂದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲರ್ಧದಲ್ಲಿ ಸಾಂಪ್ರದಾಯಿಕ ಹುಡುಗಿ. ಎರಡನೇ ಅರ್ಧದಲ್ಲಿ ಕಡ್ಡಿ ಹಿಡಿದು ಹೊಡೆದಾಡುವ ಇನ್ನೊಂದು ಮುಖ. ಹೀಗೆ ಪಾತ್ರದಲ್ಲಿ ವಿಚಿತ್ರ ಏರಿಳಿತಗಳಿರುವುದರಿಂದ ಪ್ರಿಯಾಮಣಿ ಆಪ್ತೇಷ್ಟರಲ್ಲಿ `ಕ್ಷೇತ್ರಂ~ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು.ಹಿಂದೊಮ್ಮೆ ಕನ್ನಡದಲ್ಲೇ ಅವಕಾಶಕ್ಕೆ ಯತ್ನಿಸಿ, ಅದು ಸಿಗದೇಹೋದಾಗ ಮಲಯಾಳಂ ಚಿತ್ರರಂಗದಲ್ಲಿ ನಟನಾಕೌಶಲ್ಯ ತೋರಿ, ಅಲ್ಲಿಂದ ಟಾಲಿವುಡ್‌ನಲ್ಲಿ ಛಾಪು ಮೂಡಿಸಿದ ಪ್ರಿಯಾಮಣಿಗೆ ಈಗ ಕನ್ನಡದಲ್ಲೂ ಸಾಕಷ್ಟು ಬೇಡಿಕೆ ಇದೆ. `ಸ್ಕ್ರಿಪ್ಟ್‌ನಲ್ಲಿ ಧಮ್ ಇರಬೇಕು.ನನ್ನ ಪಾತ್ರಕ್ಕೆ ತೂಕವಿರಬೇಕು. ನನ್ನ ಜೊತೆ ಯಾರ‌್ಯಾರು ಅಭಿನಯಿಸುತ್ತಾರೆ ಎಂಬುದೂ ತುಂಬಾ ಮುಖ್ಯ. ಅವನ್ನೆಲ್ಲಾ ಅಳೆದು ತೂಗಿದ ನಂತರವಷ್ಟೆ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವುದು~ ಎನ್ನುವ ಪ್ರಿಯಾಮಣಿ `ದಿ ಡರ್ಟಿ ಪಿಕ್ಚರ್~ ಚಿತ್ರದಲ್ಲಿ ವಿದ್ಯಾ ಬಾಲನ್ ಮಾಡಿರುವ ಪಾತ್ರ ನೋಡಿ ದಂಗಾಗಿದ್ದಾರಂತೆ. ನಟಿಯೊಬ್ಬಳಿಗೆ ಅಷ್ಟರ ಮಟ್ಟಿಗೆ ಕಮಿಟ್‌ಮೆಂಟ್ ಇರಬೇಕು ಎನ್ನುವುದು ಅವರ ಕಾಮೆಂಟು. 

ಪ್ರತಿಕ್ರಿಯಿಸಿ (+)