ಭಾನುವಾರ, ಜನವರಿ 26, 2020
23 °C

ಪ್ರೀತಿಗೇ ಪ್ರಾಧಾನ್ಯ: ಬಿಪಾಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನಂತೂ ಜೀವನದಲ್ಲಿ ಈಗಲೂ ಪ್ರೀತಿಗೇ ಆದ್ಯತೆ ನೀಡುತ್ತೇನೆ. ಬೇಕಿದ್ದರೆ ಪ್ರೀತಿಯ ಪಾಠಗಳನ್ನೂ ಹೇಳಿಕೊಡಬಲ್ಲೆ ಎಂದು ಮಾದಕ ಕೃಷ್ಣ ಸುಂದರಿ ಬಿಪಾಶಾ ಬಸು ಹೇಳಿದ್ದಾರೆ.

ಪ್ರೀತಿ ಎಂದ ತಕ್ಷಣ ಕೇವಲ ಗಂಡು-ಹೆಣ್ಣುಗಳ ಬಗ್ಗೆ ಮಾತ್ರ ಯಾಕೆ ಯೋಚಿಸುತ್ತೀರಿ? ಪ್ರೀತಿ ಸಾರ್ವತ್ರಿಕ. ಪ್ರೀತಿಯಲ್ಲಿ ಪ್ರಾಮಾಣಿಕರಾಗಿರೇಕು. ವಿಶ್ವಾಸವಿರಬೇಕು ಎಂದು ಪ್ರೀತಿ ಪಾಠವನ್ನು ಮಾಧ್ಯಮದವರಿಗೆ ಹೇಳಿದ್ದಾರೆ.

ಜಾನ್ ಮತ್ತು ಬಿಪ್ಸ್ ಜೋಡಿಯ 8 ವರ್ಷಗಳ ಬಾಂಧವ್ಯ ಕಳೆದ ವರ್ಷವೇ ಕಳಚಿಕೊಂಡಿದೆ. ಈಗಲೂ ಗಟ್ಟಿಯಾದ ಸಂಬಂಧಕ್ಕೆ ಸತ್ಯ ಮತ್ತು ವಿಶ್ವಾಸವೇ ಬುನಾದಿ ಎಂದು ಹೇಳುತ್ತಿರುವ ಬಿಪ್ಸ್ ತಮ್ಮ ಜೀವನದಲ್ಲಿ ಪ್ರೀತಿಗೇ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)