ಪ್ರೀತಿ ಕುಂಚ

7

ಪ್ರೀತಿ ಕುಂಚ

Published:
Updated:

ಪ್ರೇಮಿಗಳ ದಿನ ಈಗ ಸಪ್ತಾಹವಾಗಿ ಮಾರ್ಪಟ್ಟಿದೆ. ಅದಕ್ಕೆಂದೇ ಪ್ರತಿಮಾ ಆರ್ಟ್  ಗ್ಯಾಲರಿ ಪ್ರೀತಿ, ಸಂವೇದನೆಯನ್ನೇ ವಸ್ತುವನ್ನಾಗಿಸಿಕೊಂಡ ಕಲಾಕೃತಿಗಳ ಪ್ರದರ್ಶನ ಈಗ ಏರ್ಪಡಿಸಿದೆ.ಮುಂಬೈ ಮೂಲದ ಮೂವರು ಕಲಾವಿದೆಯರು ತಮ್ಮ ಅಪೂರ್ವ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ.ಮಹಾನ್ ಕಲಾವಿದರಾದ ಲಿಯೋನಾರ್ಡೊ ಡ ವಿಂಚಿ, ಇಂಗ್ರೆಸ್, ಡೇವಿಡ್, ಟಿಟಿಯನ್, ರ್ಯಾಫೆಲ್ ರಿಂದ ಪ್ರೇರಣೆ ಪಡೆದಿರುವ ದಕ್ಸಾ ಖಂಡ್ವಾಲಾ ವಿಕ್ಟೋರಿಯನ್ ಶೈಲಿಯಲ್ಲಿ  ಸಮಕಾಲೀನ ವಸ್ತುಗಳನ್ನು ಚಿತ್ರಿಸುತ್ತಾರೆ.ಹಲವು ಅಂತರ್‌ರಾಷ್ಟ್ರೀಯ ಪ್ರದರ್ಶನಗಳಲ್ಲೂ ಪಾಲ್ಗೊಂಡಿರುವ ದೇವಯಾನಿ ಪಾರೇಖ್ ಕಲಾಕೃತಿಗಳು ಶಾಂತಿ, ಸಂಯಮವನ್ನು ಪ್ರತಿಬಿಂಬಿಸುತ್ತಿವೆ.ಆಭರಣ ವಿನ್ಯಾಸಕಾರ್ತಿಯೂ ಆಗಿರುವ ಗುಂಜನ್ ಕೌಲಗಿ ಬಹುಮುಖ ಪ್ರತಿಭೆ. ಶಬ್ದಗಳನ್ನು ಹೇಳಲಾಗದ್ದನ್ನು ಕುಂಚದಲ್ಲಿ ಹೇಳುತ್ತೇನೆ. ಹೃದಯದ ಭಾವನೆಗಳನ್ನು ಅಲ್ಲಿ ಬಿಂಬಿಸುತ್ತೇನೆ ಎನ್ನುತ್ತಾರೆ.ಸ್ಥಳ: ಪ್ರತಿಮಾಸ್ ಆರ್ಟ್ ಗ್ಯಾಲರಿ, ಎಂ.ಜಿ. ರಸ್ತೆ. 

ಬೆಳಿಗ್ಗೆ 11ರಿಂದ ಸಂಜೆ 8. ಪ್ರದರ್ಶನ 

ಶುಕ್ರವಾರ ಮುಕ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry