ಪ್ರೀತಿ, ಜಗಳ ಸಹಜ; ಡೈವೋರ್ಸ್ ಇಲ್ಲ

7

ಪ್ರೀತಿ, ಜಗಳ ಸಹಜ; ಡೈವೋರ್ಸ್ ಇಲ್ಲ

Published:
Updated:
ಪ್ರೀತಿ, ಜಗಳ ಸಹಜ; ಡೈವೋರ್ಸ್ ಇಲ್ಲ

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪಕ್ಷದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪತ್ರಕರ್ತರ ಮೇಲೆಯೇ ಹರಿಹಾಯ್ದ ಘಟನೆ ಬುಧವಾರ ಬೆಳಿಗ್ಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಿತು.`ನಿನ್ ಹೆಂಡ್ತಿ ಜಗಳ ಆಡಿದ್ರೆ, ಅವಳನ್ನ ಬಿಟ್ ಹೋಗ್ತೀಯಾ?~ ಎಂದು ಪತ್ರಕರ್ತರ ಮೇಲೆ ಸಿಟ್ಟಿನಿಂದ ಹರಿಹಾಯ್ದ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುರಿತ ಪ್ರಶ್ನೆ ಎದುರಾಗುತ್ತಿದ್ದಂತೆಯೇ ತೀವ್ರ ಅಸಮಾಧಾನಗೊಂಡು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು. `ಯಡಿಯೂರಪ್ಪ ಪಕ್ಷ ಬಿಡುವುದಿಲ್ಲ. ಅವರು ಬಿಜೆಪಿಯಲ್ಲೇ ಇರುತ್ತಾರೆ. ಅವರು ಪಕ್ಷ ಬಿಡುತ್ತೇನೆ ಎಂದು ನಿಮಗೇನಾದರೂ ಹೇಳಿದ್ದಾರಾ?~ ಎಂದು ಮರುಪ್ರಶ್ನಿಸಿದ ಈಶ್ವರಪ್ಪ, ಪ್ರೀತಿಸುವುದು ಮತ್ತು ಜಗಳವಾಡುವುದು ಪಕ್ಷದಲ್ಲಿ ಸಹಜ. ಆದರೆ, ಅದು ಡೈವೋರ್ಸ್ ಹಂತಕ್ಕೆ ಹೋಗುವುದಿಲ್ಲ~ ಎಂದು ತಮ್ಮ ಮತ್ತು ಬಿಎಸ್‌ವೈ ನಡುವಿನ ಸಂಬಂಧ ಕುರಿತು ಸಮಜಾಯಿಷಿ ನೀಡಿದರು. ಮಂಗಳೂರಿನ ಯುವ ಸಮಾವೇಶದಲ್ಲಿನ ಬ್ಯಾನರ್-ಕಟೌಟ್‌ಗಳಲ್ಲಿ ಯಡಿಯೂರಪ್ಪ ಭಾವಚಿತ್ರ ಇಲ್ಲದ ಕುರಿತು ಪತ್ರಕರ್ತರು ಗಮನ ಸೆಳೆದಾಗ, ಇನ್ನಷ್ಟು ಕೋಪಗೊಂಡ ಈಶ್ವರಪ್ಪ, `ಯಡಿಯೂರಪ್ಪ ಭಾವಚಿತ್ರ ಇರಲಿಲ್ಲ ಎಂಬುದನ್ನು ನೀವೇನಾದರೂ ಮಂಗಳೂರಿಗೆ ಬಂದು ನೋಡಿದ್ದೀರಾ? ಮಾಧ್ಯಮಗಳಲ್ಲಿ ಬಂದ ವರದಿ ಸುಳ್ಳು~ ಎಂದು ಖಂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry