ಪ್ರೀತಿ ನಿವೇದನೆಗೆ ತರಾವರಿ ಉಡುಗೊರೆ

7

ಪ್ರೀತಿ ನಿವೇದನೆಗೆ ತರಾವರಿ ಉಡುಗೊರೆ

Published:
Updated:

ಎರಡು ಮನಸ್ಸುಗಳ ಪಿಸುಮಾತಿಗಷ್ಟೇ ಸೀಮಿತವಾಗಿದ್ದ ಪ್ರೀತಿ ಇದೀಗ ತನ್ನ ಹರವು ಹೆಚ್ಚಿಸಿಕೊಂಡಿದೆ. ಪ್ರೀತಿಯನ್ನು ದುಬಾರಿ ಉಡುಗೊರೆ ಕೊಟ್ಟು ಮತ್ತಷ್ಟು `ಗಟ್ಟಿ~ಯಾಗಿಸುವ ತುಡಿತ ಬಹುತೇಕರಿಗೆ. ಪ್ರೇಮಿಗಳ ನಾಡಿಮಿಡಿತವನ್ನು ಅರ್ಥೈಸಿಕೊಂಡಿರುವ ಉದ್ಯಮಿಗಳು ಇದನ್ನೇ ಬಂಡವಾಳವನ್ನಾಗಿಸಿ ಹತ್ತು ಹಲವು ಹೊಸ ಉತ್ಪನ್ನ, ಆಕರ್ಷಕ ತಿನಿಸುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ.

ನಿಮ್ಮ ಪ್ರೀತಿಪಾತ್ರರು ಅಚ್ಚರಿ ಪಡುವಂತಹ ಯಾವ ಉಡುಗೊರೆ ನೀಡಬೇಕು ಎಂಬ ಯೋಚನೆಯೇ? ಅದಕ್ಕೆಂದೇ ಆಕರ್ಷಕ ಗಿಫ್ಟ್‌ಗಳನ್ನು `ದೊಟ್ಟೇಡಿ~ ಬಿಡುಗಡೆ ಮಾಡಿದೆ. ಇಲ್ಲಿ ಉಡುಗೊರೆಯೊಂದಿಗೆ ನೂತನ ಐಡಿಯಾ ಕೂಡ ದೊರೆಯಲಿದೆ. ಮ್ಯಾಗಝಿನ್ ಮುಖಪುಟದಲ್ಲಿ ಪ್ರಿಯತಮೆ ಚಿತ್ರ ಇಲ್ಲವೇ ಕುಶನ್ ಇನ್‌ಪ್ರಿಂಟ್‌ನಲ್ಲಿ ಫೋಟೊ ಇವೇ ಮೊದಲಾದ ಮನಸೆಳೆವ ಉಡುಗೊರೆಗಳು ಇಲ್ಲಿ ದೊರೆಯಲಿವೆ. ಈ ಮೂಲಕ ನಿಮ್ಮವರನ್ನು ಮತ್ತಷ್ಟು ಖುಷಿಗೊಳಿಸಬಹುದು. ಇದರೊಂದಿಗೆ ಫ್ರಿಜ್ ಮ್ಯಾಗ್ನೆಟ್, ಕೂಪನ್ ಟಿನ್ಸ್ ಹಾಗೂ ಶಾಟ್ ಗ್ಲಾಸಸ್, ಬಲೂನ್ ಬಕೆಟ್ಸ್, ಫಂಕೀ ಲವ್ ಪೇಲ್ಸ್‌ಗಳಿವೆ. ನಿಮ್ಮ ಹುಡುಗಿ ಕನಸಿನ ರಾಜಕುಮಾರಿಯಂತೆ ಕಂಗೊಳಿಸಬೇಕು ಎಂಬ ಹಂಬಲವಿದ್ದರೆ ತನಿಷ್ಕ್ ಆಭರಣ ಮಳಿಗೆಗೆ ಒಮ್ಮೆ ಭೇಟಿ ನೀಡಬಹುದು. ಪ್ರೇಮಿಗಳಿಗಾಗಿಯೇ ತಯಾರಿಸಿದ ಓಲೆ, ಉಂಗುರ, ವಿವಿಧ ವಿನ್ಯಾಸದ ನೆಕ್ಲೆಸ್, ಬಳೆಗಳು ನಿಮ್ಮನ್ನು ಖುಷಿಪಡಿಸಲಿವೆ.

ಪ್ರೇಮಿಗಳಿಗಾಗಿ ಇಂಡಿಯಾ ಪ್ಲಾಜಾ 2000ಕ್ಕೂ ಅಧಿಕ ಗಿಫ್ಟ್ ಐಟಂಗಳನ್ನು ಶೇಖರಿಸಿ ಗ್ರಾಹಕರಿಗಾಗಿ ಕಾಯುತ್ತಿವೆ. ಕಾಮಾ ಜ್ಯುವೆಲರ್ಸ್‌ `ಲವ್ ಅ ಥಾನ್~ ಹೆಸರಿನಲ್ಲಿ ಆಕರ್ಷಕ ಆಭರಣಗಳನ್ನು ಕೊಡುಗೆಯಾಗಿ ನೀಡಿದೆ.

ಕ್ಯಾಂಡಲ್‌ಲೈಟ್ ಬೆಳಕು, ಕೆಂಪಗಿನ ಗುಲಾಬಿ, ತಂಪಾದ ತಂಗಾಳಿಯೊಂದಿಗೆ ಬೆರೆತ ಸುಗಂಧದ್ರವ್ಯ, ವಜ್ರದ ಉಂಗುರ, ಜತೆಗೊಂದು ಗ್ರೀಟಿಂಗ್ ಕಾರ್ಡ್...ಪ್ರತಿ ಬಾರಿಯೂ ಪ್ರೇಮಿಗಳ ದಿನದಲ್ಲಿ ಹುಡುಗಿಯರಿಗೆ ಏಕೆ ಪ್ರಾಶಸ್ತ್ಯವಾಗಬೇಕು ಎಂಬ ಕಾರಣ ಮುಂದಿಟ್ಟುಕೊಂಡು ಮೊದಲ ಬಾರಿಗೆ ಈ ದಿನವನ್ನು ಹುಡುಗರ ದಿನವನ್ನಾಗಿಸಲು ಮೈಕ್ರೋಸಾಫ್ಟ್ ಹೊರಟಿದೆ. ಎಕ್ಸ್‌ಬಾಕ್ಸ್ 360+ ಕಿನೆಕ್ಟ್, ನೋಕಿಯಾ ಲೂಮಿಯಾ 800, ಮೈಕ್ರೋಸಾಫ್ಟ್ ಲೈಫ್‌ಕ್ಯಾಮ್ ಸ್ಟುಡಿಯೋಗಳ ವಿಶೇಷ ಕಡಿತ ಪ್ರಕಟಿಸಿದೆ. ಈ ಮೂಲಕ ಹುಡುಗರ ಮೊಗದಲ್ಲೂ ನಗು ಮೂಡಿಸೋಣ ಎಂಬುದು ಮೈಕ್ರೋಸಾಫ್ಟ್‌ನ ಹೇಳಿಕೆ.

ಕನಸಿನ ತಾರೆ ಅಮೃತಾ ರಾವ್ ಅವರೊಂದಿಗೆ ಪ್ರೇಮಿಗಳ ದಿನವನ್ನು ಕಳೆಯುವ ಅಪೂರ್ವ ಅವಕಾಶವನ್ನು ರೆಡಿಫ್ ನೀಡುತ್ತಿದೆ. ಬೆಂಗಳೂರು ಸೇರಿದಂತೆ ಏಳು ಮೆಟ್ರೊ ನಗರಗಳಿಂದ ಆಯ್ಕೆಯಾದ 5 ಅದೃಷ್ಟಶಾಲಿಗಳು ಫೆ.14ರಂದು ವಿಲಾಸಿಯಾಕ್ಟ್‌ನಲ್ಲಿ ಸಮುದ್ರ ಪ್ರಯಾಣ ಬೆಳೆಸುವ ಅವಕಾಶ ಪಡೆಯಲಿದ್ದಾರೆ. ನನ್ನ ಅಭಿಮಾನಿಗಳೊಂದಿಗೆ ಆಸಕ್ತಕರ ರೀತಿಯಲ್ಲಿ ಸಂವಾದ ನಡೆಸುವ ಮೂಲಕ ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವುದು ನನ್ನ ಉದ್ದೇಶ ಎಂದಿದ್ದಾರೆ ಅಮೃತಾ. 

ಕುಕ್ಕೀಸ್ ಮ್ಯಾನ್ ಹೃದಯ ಆಕಾರದ ಬಿಸ್ಕೆಟ್, ಚಾಕಲೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದು ಪ್ರೇಮಿಗಳ ಹೃದಯವನ್ನು ಆಕರ್ಷಿಸಲಿದೆ.  150 ಗ್ರಾಂ.ತೂಕದ ಪ್ಯಾಕ್‌ನ ಬೆಲೆ ರೂ.105. ಇಟಾಲಿಯನ್ ಸ್ಟೈಲ್‌ನಲ್ಲಿ ನಿಮ್ಮ ಪ್ರೀತಿಯನ್ನು ಆಚರಿಸಿಕೊಳ್ಳಲು ಬಾರಿಸ್ತಾ ಲವಾಝಾ ಅತ್ಯುತ್ತಮ ಅವಕಾಶ ನೀಡಿದೆ. ರಾಸ್ಪಬರ‌್ರಿ ಸ್ಮೂತಿ, ರಾಸ್ಪಬರ‌್ರಿ ಇಡಲ್ಜೆನ್ಸ್, ಸ್ಪಾರ್ಕ್‌ಲಿಂಗ್‌ಲವ್, ಕಾಫಿ ರೋಸ್, ಚಾಕೊಲೇಟ್ ಟಾರ್ಟ್, ಸ್ಟ್ರಾಬೆರ‌್ರಿ ಟಾರ್ಟ್ ನೀಡಿ ನಿಮ್ಮ ಪ್ರೀತಿಯ ನಿವೇದನೆ ಮಾಡಿಕೊಳ್ಳಬಹುದು. ಮೃದು ಐಸ್‌ಕ್ರೀಂ ತಿಂದ ಬೆಡಗಿಯ ಮನಸ್ಸು ಕರಗಿ ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡಿದರೂ ಅಚ್ಚರಿಯಿಲ್ಲ.

ನಿಮ್ಮ ಪ್ರಿಯೆ ದಿನವಿಡೀ ನಿಮ್ಮನ್ನು ನೆನೆಸಿಕೊಳ್ಳುತ್ತಿರಬೇಕೆಂಬ ಬಯಕೆಯೇ? ಅದಕ್ಕಾಗಿಯೇ ಟಿಸ್ಸೋಟ್-ಟಿ ಟಚ್ ಮಹಿಳೆಯರಿಗಾಗಿ ವಿನೂತನ ವಿನ್ಯಾಸದ ಡೈಮಂಡ್ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹವಾಮಾನ ಹೇಳುವ ಲಕ್ಷಣವನ್ನೂ ಒಳಗೊಂಡಿರುವ ಈ ವಾಚ್ ವಾಟರ್, ಸ್ಕ್ರಾಚ್ ರೆಸಿಸ್ಟೆಂಟ್ ಶಕ್ತಿಯನ್ನೂ ಪಡೆದಿದೆ. 

ಬಿಬಿಕ್ಯು ವರ್ಲ್ಡ್ ತನ್ನ ಮೊದಲ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರೇಮಿಗಳಿಗಾಗಿ `ಹಾರ್ಟ್ ಟು ಹಾರ್ಟ್ ವ್ಯಾಲೆಂಟೈನ್ಸ್ ಆಫರ್~ ನೀಡಿದೆ. ಇದರಲ್ಲಿ ನಿಮ್ಮಿಷ್ಟದ ಸಂಗೀತ, ಅಲಂಕೃತ ಟೇಬಲ್, ಗಿಫ್ಟ್, ರೋಸ್, ಪಾನೀಯ, ಹಾಗೂ ಟೇಬಲ್ ಮೀಲ್‌ಗಳನ್ನು ಒಳಗೊಂಡಿದೆ. ಇದರ ಆರಂಭಿಕ ಬೆಲೆ ಶನಿವಾರದಿಂದ ಆರಂಭಗೊಳ್ಳುವ ಈ ಪ್ಯಾಕೇಜ್‌ನ ಬೆಲೆ 1499.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry