ಪ್ರೀತಿ, ವಿಶ್ವಾಸ ದೊಡ್ಡ ಆಸ್ತಿ: ಶಿವರಾಜ್ ಪಾಟೀಲ್

7

ಪ್ರೀತಿ, ವಿಶ್ವಾಸ ದೊಡ್ಡ ಆಸ್ತಿ: ಶಿವರಾಜ್ ಪಾಟೀಲ್

Published:
Updated:
ಪ್ರೀತಿ, ವಿಶ್ವಾಸ ದೊಡ್ಡ ಆಸ್ತಿ: ಶಿವರಾಜ್ ಪಾಟೀಲ್

ದಾವಣಗೆರೆ: ಜನರ ಪ್ರೀತಿ, ವಿಶ್ವಾಸವೇ ಬದುಕಿನಲ್ಲಿ ಗಳಿಸುವ ಬಹುದೊಡ್ಡ ಆಸ್ತಿ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ. ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದ ದಶಮಾನೋತ್ಸವ ಹಾಗೂ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಕೀಲರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು, ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಬೇಕು. ಹೆಚ್ಚು ವೃತ್ತಿಪರತೆ ಹೊಂದಬೇಕು ಎಂದು ನುಡಿದರು.2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ನಿಗದಿತ ಅವಧಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ತೃಪ್ತಿ ತಂದಿದೆ. ಹೀಗೆ ಯಾವುದೇ ಜವಾಬ್ದಾರಿ ವಹಿಸಿಕೊಂಡಾಗ ಕಾಲಮಿತಿಯಲ್ಲಿ, ಗುಣಮಟ್ಟದಲ್ಲಿ ಮುಗಿಸಬೇಕು ಎಂದು ಕಿವಿಮಾತು ಹೇಳಿದರು. ಮೂಕ ಪ್ರಜೆ, ಕಿವುಡು ಸರ್ಕಾರ ಇದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗದು. ಜನರು ಗಟ್ಟಿಯಾಗಿ ಧ್ವನಿಯೆತ್ತಿದಾಗ ಸರ್ಕಾರವೂ ಕಿವುಡುತನ ಪ್ರದರ್ಶಿಸಲು ಅಸಾಧ್ಯ. ನಿಸ್ವಾರ್ಥವಾದ ಜನಪರ ಧ್ವನಿಗೆ ವ್ಯವಸ್ಥೆ ಖಂಡಿತ ಸ್ಪಂದಿಸುತ್ತದೆ ಎನ್ನುವುದಕ್ಕೆ ಅಣ್ಣಾ ಹಜಾರೆ ಅವರ ಹೋರಾಟ ಉತ್ತಮ ಉದಾಹರಣೆ ಎಂದರು.ದಶಮಾನೋತ್ಸವದ ಸಂದರ್ಭದಲ್ಲಿ ನಾವು ಮಾಡಿದ, ಮಾಡಬೇಕಾದ ಸಾಧನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಮಾಜ ನಂಬಿಕೆ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಕಾಲ ಮೀರುವ ಮುನ್ನ ನಾವು ಎಚ್ಚರ ವಹಿಸಬೇಕಿದೆ ಎಂದು ನುಡಿದರು. ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಬಸವರಾಜ್ ಎಸ್ ತಡಹಾಳ್, ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಕಲಾಲ್, ಪ್ರೊ.ಎಸ್.ಎಚ್. ಪಟೇಲ್ ಉಪಸ್ಥಿತರಿದ್ದರು. ಟಿ.ಆರ್. ಗುರುಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry