ಪ್ರೀತಿ ಹುಟ್ಟುವುದು ಹೃದಯದಿಂದಲ್ಲ...

7

ಪ್ರೀತಿ ಹುಟ್ಟುವುದು ಹೃದಯದಿಂದಲ್ಲ...

Published:
Updated:

ವಾಷಿಂಗ್ಟನ್ (ಪಿಟಿಐ): ಪ್ರೀತಿ ಪ್ರಣಯದ ಭಾವನೆಗಳು ಹೃದಯದಿಂದಲ್ಲ, ಮೆದುಳಿನಿಂದ ಒಡಮೂಡುತ್ತವೆ ಎಂಬುದನ್ನು ನಾವೀಗ ನಂಬಲೇಬೇಕು! ಪ್ರೀತಿ ಮೂಡುವಲ್ಲಿ ಹೃದಯಕ್ಕಿಂತ ಮೆದುಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂಗತಿಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈಗ ಕಂಡುಕೊಂಡಿದೆ.ಆಳವಾದ ಪ್ರೀತಿಗೆ ಒಳಗಾದ ಹತ್ತು ಮಹಿಳೆಯರು ಮತ್ತು ಏಳು ಪುರುಷರ ಮೆದುಳಿನ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ.ಯಾರಿಗಾದರೂ ಪ್ರಶಸ್ತಿ ಅಥವಾ ಇನ್ನೇನೋ ಖುಷಿಯಾದುದು ಸಿಕ್ಕಾಗ ಮೆದುಳಿನಲ್ಲಿ ಆಗುವ ಕ್ರಿಯೆಯ ರೀತಿಯಲ್ಲೇ, ಈ ಎಲ್ಲರೂ ಅವರು ಪ್ರೀತಿಸುತ್ತಿರುವ ವ್ಯಕ್ತಿಗಳ ಭಾವಚಿತ್ರ ನೋಡಿದ ಕೂಡಲೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ತಂಡ  ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry