ಭಾನುವಾರ, ಮೇ 16, 2021
22 °C
ಬ್ಯಾಡ್ಮಿಂಟನ್: ಪ್ರಣೀತ್, ಜಯರಾಮ್, ಪ್ರಣಯ್, ಪವಾರ್‌ಗೆ ಜಯ

ಪ್ರೀ ಕ್ವಾರ್ಟರ್ ಫೈನಲ್‌ಗೆ ಸೈನಾ ನೆಹ್ವಾಲ್, ಅರುಂಧತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಹಾಗೂ ಅರುಂಧತಿ ಪಂತ್ವಾನೆ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪಂದ್ಯದಲ್ಲಿ ಸೈನಾ 21-11, 21-16ರಲ್ಲಿ ಚೀನಾ ತೈಪೆಯ ಶಿಯಾ ಹನ್ ಹಂಗ್ ಅವರನ್ನು ಪರಾಭವಗೊಳಿಸಿದರು. ಈ ಗೆಲುವಿಗಾಗಿ ವಿಶ್ವ ಎರಡನೇ ರ‍್ಯಾಂಕ್‌ನ ಆಟಗಾರ್ತಿ ನೆಹ್ವಾಲ್ ಕೇವಲ 29 ನಿಮಿಷ ತೆಗೆದುಕೊಂಡರು. ಭಾರತದ ಈ ಆಟಗಾರ್ತಿ ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾದ ಫೆಬಿ ಅಂಗುನಿ ಎದುರು ಪೈಪೋಟಿ ನಡೆಸಲಿದ್ದಾರೆ.ಮತ್ತೊಂದು ಪಂದ್ಯದಲ್ಲಿ ಅರುಂಧತಿ 14-21, 21-9, 21-15ರಲ್ಲಿ ಕೊರಿಯಾದ ಮಿನ್ ಜಿ ಲೀ ಎದುರು ಜಯ ಗಳಿಸಿದರು. 45 ನಿಮಿಷಗಳ ಈ ಹೋರಾಟದಲ್ಲಿ ನಾಗಪುರದ ಅರುಂಧತಿ ಮೊದಲ ಗೇಮ್ ಸೋತರು. ಆದರೆ ತಿರುಗೇಟು ನೀಡಿದ ಅವರು ಮುಂದಿನ ಎರಡೂ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.ಆದರೆ ಪಿ.ಸಿ.ತುಳಸಿ 14-21, 17-21ರಲ್ಲಿ ಥಾಯ್ಲೆಂಡ್‌ನ ಪಾರ್ನಿಟಿಪ್ ಎದುರು ಪರಾಭವಗೊಂಡರು. ಪುರುಷರ ವಿಭಾಗದ ಪಂದ್ಯಗಳಲ್ಲಿ ಸಾಯಿ ಪ್ರಣೀತ್ 21-12, 9-21, 22-20ರಲ್ಲಿ ಮಲೇಷ್ಯಾದ ಮುಹಮ್ಮದ್ ಹಫೀಜ್ ಎದುರೂ, ಅಜಯ್ ಜಯರಾಮ್ 21-11, 19-21, 21-9 ರಲ್ಲಿ ಇಂಡೊನೇಷ್ಯಾದ ಶೇಸಾರ್ ಹಿರೆನ್ ವಿರುದ್ಧವೂ ಗೆದ್ದು ಎರಡನೇ ಸುತ್ತು ತಲುಪಿದರು.ಎಚ್.ಎಸ್.ಪ್ರಣಯ್ 21-11, 21-19ರಲ್ಲಿ ಸ್ಥಳೀಯ ಆಟಗಾರ ನಾನ್‌ಪಕೋರ್ನ್ ಎದುರೂ. ಸೌರವ್ ವರ್ಮ 21-16, 21-18ರಲ್ಲಿ ಥಾಯ್ಲೆಂಡ್‌ನ ಕೋಸಿತ್ ಫೆಟ್‌ಪ್ರದಾಬ್ ವಿರುದ್ಧವೂ, ಆನಂದ್ ಪವಾರ್ 21-15, 9-21, 21-14ರಲ್ಲಿ ಇಂಡೊನೇಷ್ಯಾದ ರಿಯಾಂಟೊ ಮೇಲೂ, ಕೆ.ಶ್ರೀಕಾಂತ್ 21-17, 21-12ರಲ್ಲಿ ಕೊರಿಯಾದ ಹ್ಯೂಕ್ ಜಿನ್ ಜಿಯೋನ್ ಎದುರು ಜಯ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.