ಗುರುವಾರ , ಆಗಸ್ಟ್ 22, 2019
27 °C
ಕವಿತೆ

ಪ್ರೀ-ಗು ತಿ-ಗು ನಡುವಿನ ಕಂದರ

Published:
Updated:

ಯಾಕೆ ಹೀಗೆ?

ಕೇವಲ ವಾದ ಹೊರತು

ನನಗೂ ನಿನಗೂ

ಸಂವಾದವೇ ಸಾಧ್ಯವಾಗುತ್ತಿಲ್ಲ,

ಇಂದಿನ ಸಾಹಿತಿಗಳ ಹಾಗೆ!

ಹಿಂದೆ-

ಮಾತು ಮಾತಿಗೂ ಮುತ್ತು

ಹೆಜ್ಜೆ ಹೆಜ್ಜೆಗೂ ನಗು

ತುಳುಕಿಸುತ್ತಿದ್ದೆಯಲ್ಲ,

ಎಲ್ಲಿ ಹೋಯಿತೆ

ಆ ನಿನ್ನ ಸೊಗಸುಗಾರಿಕೆ?

ಬಲ್ಲೆ-

ನನ್ನ ಮನಸ್ಸು ಬದಲಾಯಿತು

ದೃಷ್ಟಿ ಬೇರೊಬ್ಬಳತ್ತ ಹರಿಯಿತು

ಎಂದು ಮತ್ತೆ ವಾದಕ್ಕೆ ಇಳಿಯಬೇಡ.

ನನ್ನದೂ-

ತಪ್ಪಿಲ್ಲವೆಂದಲ್ಲ

ವೈಯಾರದ ಒಂದು ನಡಿಗೆ

ತೇಲಿ ಬರುವ ಒಂದು ವಾರೆ ನೋಟ

ಇಂದೂ ನನ್ನ ಕಣ್ಣಿಗೆ

ಸಹಜ ಸೂಜಿಗಲ್ಲು; ದಿಟ

ಅಷ್ಟಕ್ಕೆ-

ಸಂಘ ಜೀವಿಗಳಂತೆ

ಸಂಪು ಹೂಡಿ

ನನ್ನೆದೆ ಬಿರಿಯಬೇಡ

ಬದುಕನ್ನು

ಚಿಲ್ಲರೆ ಮಾಡಬೇಡ.

Post Comments (+)