ಭಾನುವಾರ, ಏಪ್ರಿಲ್ 18, 2021
24 °C

ಪ್ರೆಸ್ ಕ್ಲಬ್ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸ್ಥಳೀಯ ಮಾಧ್ಯಮ ಮಿತ್ರರ ಸಂಘವು ‘ಎನ್‌ನ್ಯೂಸ್’ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೆಸ್‌ಕ್ಲಬ್ ಕಚೇರಿಯನ್ನು ರಾಜ್ಯ ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲನ್ ಅವರುಉದ್ಘಾಟಿಸಿದರು. ‘ಎನ್‌ನ್ಯೂಸ್’ ಸುದ್ದಿ ವಾಹಿನಿಗೆ  ತಹಶೀಲ್ದಾರ್ ಆರ್.ಅನಿಲ್‌ಕುಮಾರ್ ಚಾಲನೆ ನೀಡಿದರು. ಖಾಸಗಿ ಸುದ್ದಿವಾಹಿನಿ ಸಂಪಾದಕ ಚನ್ನವೀರ ಸಗರ್ನಾಳ್ ಮಾತನಾಡಿದರು.  ಕ್ಯಾಮರಾ ಕೊಠಡಿಯನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಪಿ.ಹೇಮಂತಕುಮಾರ್ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ನಾಮಫಲಕವನ್ನು ಪುರಸಭಾ ಅಧ್ಯಕ್ಷ ಎ.ಪಿಳ್ಳಪ್ಪ ಅನಾವರಣ ಮಾಡಿದರು. ತಾ.ಪಂ. ಅಧ್ಯಕ್ಷ ಲಕ್ಷ್ಮೀನಾರಾಯಣ್,  ಡಿವೈಎಸ್ಪಿ ಚಿನ್ನಸ್ವಾಮಿ, ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್‌ಕುಮಾರ್ ರೈ, ಸಂಚಾಲಕ ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್, ಎಇಇ ಚಂದ್ರಶೇಖರಪ್ಪ, ರೋಟರಿ ಅಧ್ಯಕ್ಷ ಎಚ್.ಜಿ. ರಾಜು, ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಇಟಿಕೇರ್ ರಾಜು ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.