ಗುರುವಾರ , ಏಪ್ರಿಲ್ 15, 2021
27 °C

ಪ್ರೇಕ್ಷಕರ ಮನಗೆದ್ದ ಮಹಿಳೆಯರ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮಹಿಳೆಯರೇ ಅಭಿನಯಿಸಿದ `ಶ್ರೀಕೃಷ್ಣ ಸಂಧಾನ ವಿಫಲ~ ನಾಟಕವನ್ನು ವೀಕ್ಷಿಸಲು ಕಲಾ ಮಂದಿರ ಕಿಕ್ಕಿರಿದು ತುಂಬಿತ್ತು. ಆಸನಗಳ ಪಕ್ಕ, ಬಾಗಿಲುಗಳಲ್ಲಿ ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದರು. ಶಿಳ್ಳೆ ಹೊಡೆಯುವ ಮೂಲಕ ಪ್ರೋತ್ಸಾಹಿಸಿದರು.ನಗರದ ಕಲಾ ಮಂದಿರದಲ್ಲಿ ಗುರುವಾರ ಕಾಲಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ  `ಶ್ರೀಕೃಷ್ಣ ಸಂಧಾನ ವಿಫಲ~ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕಂಡ ಚಿತ್ರಣವಿದು.ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ ಭಾರತ ಇಂದು ಜಗತ್ತಿನಲ್ಲಿಯೇ ಬಲಿಷ್ಠ ರಾಷ್ಟ್ರವಾಗಲು ಮಹಾಭಾರತ ಹಾಗೂ ರಾಮಾಯಣದಂತಹ ಸಾಂಸ್ಕೃತಿಕ ಹಿನ್ನೆಲೆಗಳುಳ್ಳ ಮಹಾಕೃತಿಗಳ ಕೊಡುಗೆಯೂ ಸೇರಿದೆ ಎಂದು ಹೇಳಿದರು.ಮಂಡ್ಯದಲ್ಲಿ ಹಿಂದೆ ಶಾಲೆಗಳು ಇರಲಿಲ್ಲ, ಆದರೆ ರಂಗಶಾಲೆಗಳಿದ್ದವು. ಅಲ್ಲಿಯೇ ಅಕ್ಷರ ಕಲಿಸುವ ಕೆಲಸವನ್ನೂ ಮಾಡಲಾಗುತ್ತಿತ್ತು.ಈ ಶಾಲೆಗಳು ಜನರಲ್ಲಿ ಮೌಲ್ಯಗಳನ್ನೂ ಬಿತ್ತುವ ಕೆಲಸವನ್ನು ಮಾಡುತ್ತಿದ್ದವು. ಆದರೆ, ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದಿಸಿದರು. ಪ್ರದರ್ಶನ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರೂ ನಾಟಕದ ಅಭಿನಯಕ್ಕೂ ಮುಂದಾಗಿರುವುದು ಸ್ವಾಗತಾರ್ಹ ಎಂದರು. ಯಶೋದಾ, ಪದ್ಮಮೋಹನ್, ಹೊಸಹಳ್ಳಿ ಬೋರೇಗೌಡ, ಬಿ.ಎಂ. ಅಪ್ಪಾಜಪ್ಪ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.