ಗುರುವಾರ , ಮಾರ್ಚ್ 4, 2021
30 °C

ಪ್ರೇಕ್ಷಕರ ಮನ ರಂಜಿಸಿದ ಸ್ಪಿಕ್ ಮೆಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೇಕ್ಷಕರ ಮನ ರಂಜಿಸಿದ ಸ್ಪಿಕ್ ಮೆಕೆ

ಚಿಕ್ಕಮಗಳೂರು: ನಗರದ ಆದಿಚುಂಚ ನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಸ್ಪಿಕ್ ಮೆಕೆ ರಾಷ್ಟ್ರೀಯ ಸಮ್ಮೇಳನ ಮುಕ್ತಾಯದ ಹಂತ ತಲುಪಿದೆ.ಸಂಗೀತ, ಸಂಸ್ಕೃತಿ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ವಿಭಾಗದಲ್ಲಿ ತರಬೇತಿ ಪಡೆದವರು ಗುರುಗಳಿಗೆ ಧನ್ಯವಾದ ಅರ್ಪಿಸಿದರು. ರೋಣು ಮುಜುಂದಾರ್ ಬಳಿ  ಕಲಿತ ಹಿಂದೂ ಸ್ತಾನಿ ಸಂಗೀತ ಪ್ರೇಕ್ಷಕರ ಮನ ಮುಟ್ಟು ವಲ್ಲಿ ಯಶಸ್ವಿಯಾಗಿತು. ವೀಣಾವಾದಕ ಬಾಲ ಕೃಷ್ಣಭಟ್‌ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ  ವಿದ್ಯಾರ್ಥಿ ಗಳು, ಮುತ್ತುಸ್ವಾಮಿ ದೀಕ್ಷಿತರ ತ್ಯಾಗರಾಜರ ಮತ್ತು ಅಣ್ಣಮ ಚಾರ್ಯರ ಕೃತಿಗಳನ್ನು  ವಿವಿಧ ತಾಳಗಳಲ್ಲಿ  ಪ್ರೇಕ್ಷಕರನ್ನು ರಂಜಿಸಿದರು.ಬಾಲಕೃಷ್ಣಭಟ್ ಗೌರವ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಯು ಪ್ರತಿನಿತ್ಯ 15 ನಿಮಿಷ  ಶಾಸ್ತ್ರೀಯ ಸಂಗೀತ ಕೇಳಿದರೆ ಮನಸ್ಸು ಉಲ್ಲಾಸವಾಗಿ ನಿರ್ವಹಿಸುವ ಕೆಲಸ ದಲ್ಲಿ ಶ್ರದ್ಧೆ ಬರುತ್ತದೆ.  ಸಂಗೀತ ಕಲಿಯಲು ಸಾಧ್ಯವಾಗದವರು ಕೇಳುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರು.ಸಂಸ್ಕೃತ ಕಲಿಸಿದ ಶಿವಮೊಗ್ಗದ ನರಸಿಂಹಮೂರ್ತಿ, ಎಲ್ಲಾ ಭಾಷೆಗಳ ಜನನಿ ಸಂಸ್ಕೃತ.  ಈ ಭಾಷೆಯ ಹೆಚ್ಚಿನ ಶಬ್ಧಗಳು ಎಲ್ಲಾ ಭಾಷೆಯಲ್ಲಿಯೂ  ಇದ್ದು, ಸಂಸ್ಕೃತಕ್ಕೆ ಹೆಚ್ಚಿನ ಮಹತ್ವಇದೆ. ಇದನ್ನು ಸುಲಭವಾಗಿ ಕಲಿಯಬಹುದು ಎಂದು ಹೇಳಿದರು.ಭರತನಾಟ್ಯ ತರಬೇತಿ ನೀಡಿದ ಬೆಂಗಳೂರಿನ ಪ್ರವೀಣ್ ಕುಮಾರ್ ಮಾತನಾಡಿ, ಈ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದ್ದು, ಭಾರತೀಯ ಕಲೆ ಭರತನಾಟ್ಯ ಕಲಿಸಲು ಸಂತಸ ವಾಗುತ್ತಿದೆ ಎಂದು ತಿಳಿಸಿದರು. ಆಂಧ್ರಮೂಲ ಕಲೆಯಾದ ಕೂಚುಪುಡಿ ಯಲ್ಲಿ ಕೇವಲ ಕೂತೇಳಲು ವಿದ್ಯಾರ್ಥಿಗಳು ಒಂದು ತಿಂಗಳು ತೆಗೆದುಕೊಳ್ಳುತ್ತಿದ್ದರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಮೂರು ದಿನದಲ್ಲಿ ಸ್ವಲ್ಪಮಟ್ಟಿನ ಕೂಚುಪುಡಿ ನೃತ್ಯ ಕಲಿತ್ತಿದ್ದಾರೆಂದು ವೈಜಯಂತಿಕಾಶಿ ತಿಳಿಸಿದರು.ಮೋಹಿನಿ ಆಟ್ಟಂ ಕಲಿಸಿದ  ಮಂಜುಳಾಮೂರ್ತಿ,ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಇದೆ ಎಂದರು. ಸ್ಪಿಕ್ ಮೆಕೆಯ ಕಿರಣ್ ಸೇಠಿ, ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಕೆ. ಸುಬ್ಬರಾಯ, ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.