ಶನಿವಾರ, ಮೇ 15, 2021
25 °C

ಪ್ರೇಕ್ಷಕರ ರಂಜಿಸಿದ ಸುಮಧುರ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಲ್ಲಿ ನೆರೆದಿದ್ದವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದ ನಟ, ನಿರ್ದೇಶಕ ರವಿಚಂದ್ರನ್ ಹಾಡುಗಳನ್ನು ಮೆಲುಕು ಹಾಕಿದರು... ಕ್ಷಣಕಾಲ ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೆ ಜಾರಿದರು... ಪ್ರೀತಿ- ಪ್ರೇಮದ ವಿಷಯಗಳನ್ನು ನವೀನ ರೀತಿಯಲ್ಲಿ ತೆರೆಯ ಮೇಲೆ ತಂದ ವಿಷಯಗಳನ್ನು ಒಂದಷ್ಟು ಮೆಲುಕು ಹಾಕಿದರು...- ಇದು ಸಾಧ್ಯವಾಗಿದ್ದು ಭಾನುವಾರ ನಗರದ ಬಾಪೂಜಿ ಸಭಾಂಗಣದಲ್ಲಿ.

`ಪ್ರಜಾವಾಣಿ~ ಸಹಯೋಗದಲ್ಲಿ ನಡೆದ ಎಕ್ಸೋ ಸ್ವರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಜನರು ಮೊದಲಾರ್ಧ ಭಾಗದಲ್ಲಿ ರವಿಚಂದ್ರನ್ ಅಭಿನಯಿಸಿರುವ ಚಿತ್ರದ ಹಾಡುಗಳನ್ನು ಕೇಳಿ ಪುಳಕಿತರಾದರು.

ಕನ್ನಡದ ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಸುಮಧುರ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ಭಾನುವಾರ ರಜೆಯ ಕಾರಣ ಇಡೀ ಸಭಾಂಗಣ ತುಂಬಿತ್ತು.`ಹೇಗಿದ್ದೀರಾ~ ಎನ್ನುವ ಮೂಲಕ ವೇದಿಕೆಗೆ ಆಗಮಿಸಿದ ರಾಜೇಶ್, ದಾವಣಗೆರೆಯ ಬೆಣ್ಣೆದೋಸೆಯನ್ನು ನೆನಪು ಮಾಡಿಕೊಂಡರು. ಬೆಣ್ಣೆದೋಸೆ ತಿಂದೇ ವಾಪಸ್ ಹೋಗುತ್ತೇನೆ. ನಿಮ್ಮ ಮುಂದೆ ಬಂದಿರುವುದು ತುಂಬಾ ಸಂತೋಷ ಎಂದರು.`ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯಭೂಮಿ ನಮ್ಮ ದೇವಾಲಯ...~ ಎಂದು ಹಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದರು.ಮುಂದೆ ರವಿಚಂದ್ರನ್ ನಟಿಸಿರುವ, `ಚಲುವೆ ಒಂದು ಕೇಳ್ತೀನಿ ...~, ಪ್ರೇಮ ಲೋಕದ ಪಾರಿಜಾತವೇ...~, `ಕುಶಲವೇ ಕ್ಷೇಮವೇ ಸೌಖ್ಯವೇ...~, ಯಾರಿವಳು ಯಾರಿವಳು ಸೂಜಿಮಲಿ ಕಣ್ಣವಳು...~, `ದೂರದ ಊರಿಂದ ಹಮ್ಮೀರಾ ಬಂದ...~, `ಯಾರೇ ನೀನು ರೋಜಾ ಹೂವೇ...~ ಇತ್ಯಾದಿ  ಹಾಡುಗಳು ಕೇಳುಗರ ಮನಸೂರೆಗೊಂಡವು.ಇನ್ನು ರಾಜೇಶ್ ಹಾಡಿಗೆ ಕುಳಿತಲ್ಲೇ ಪ್ರೇಕ್ಷಕರು ದನಿಯಾದರು. `ಲೋಕವೇ ಹೇಳಿದ ಮಾತಿದು...~ ಹಾಡಿಗಂತೂ ಚಪ್ಪಾಳೆಗಳ ಸುರಿಮಳೆಯಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.