ಗುರುವಾರ , ಜನವರಿ 23, 2020
22 °C

ಪ್ರೇಮದ ಮಾತು ಬೇಡ: ರಣಬೀರ್ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಜತೆ ಮತ್ತೆ ಸಂಬಂಧ ಮುಂದುವರಿಯುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಲು ರಣಬೀರ್ ಕಪೂರ್ ನಿರಾಕರಿಸುತ್ತಿದ್ದಾರೆ.`ಯೇ ಜವಾನಿ ಹೈ ದಿವಾನಿ' ಚಿತ್ರದಲ್ಲಿ ಡ್ಯುಯೆಟ್ ಹಾಡಿರುವ ಈ ಜೋಡಿ ನಿಜ ಜೀವನದಲ್ಲೂ ಒಂದಾಗುವ ಕುರಿತು ಎಲ್ಲೆಡೆ ಗಾಸಿಪ್ ಹರಡುತ್ತಿದೆ. ಪ್ರಮುಖ ನಗರಗಳಲ್ಲಿ ಈ ಚಿತ್ರದ ಪ್ರಚಾರಕಾರ್ಯದಲ್ಲಿ ಇಬ್ಬರೂ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವದೆಹಲಿಯಲ್ಲಿ ನಡೆದ ಪ್ರಚಾರ ಗೋಷ್ಠಿಯಲ್ಲಿಯೂ ಚಿತ್ರಕ್ಕಿಂತ ಹೆಚ್ಚಿನ ಪ್ರಶ್ನೆಗಳು ತಮ್ಮಿಬ್ಬರ ಸಂಬಂಧದ ಬಗೆಗೇ ಎದುರಾದಾಗ ರಣಬೀರ್ ತೀವ್ರ ಅಸಮಾಧಾನಗೊಂಡರು.`ನಾವಿಬ್ಬರೂ ಜತೆಯಾಗಿ ನಟಿಸಿದೆವು. ಅಲ್ಲಿಗೆ ಮುಗಿಯಿತು. ಸಂಬಂಧದ ಬಗ್ಗೆ ಮಾತನಾಡುವುದಕ್ಕಿಂತ ಚಿತ್ರದ ಬಗ್ಗೆ ಹೆಚ್ಚು ಚರ್ಚೆ ಮಾಡೋಣ. ಇಬ್ಬರೂ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದೆವು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ನಮ್ಮನ್ನು ಗೆಲ್ಲಿಸುತ್ತಾರೆ ಎಂದು ನಂಬುತ್ತೇನೆ' ಎಂದು 30 ವರ್ಷದ ಈ ಚೆಲುವ  ಪ್ರತಿಕ್ರಿಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)