ಪ್ರೇಮಪತ್ರ ಸ್ಪರ್ಧೆ

7
ಪ್ರಜಾವಾಣಿ

ಪ್ರೇಮಪತ್ರ ಸ್ಪರ್ಧೆ

Published:
Updated:

ಜನವರಿಯ ಕರಳು ಕೊರೆಯುವ ಚಳಿಯಿಂದ ಪಾರಾಗಲು ದಾರಿ ಹುಡುಕುತ್ತಿದ್ದೀರಾ? ಇದೋ ನಾವು ನೀಡುತ್ತಿದ್ದೇವೆ ಪ್ರೇಮದ ಅಗ್ಗಿಷ್ಟಿಕೆ. ಪ್ರಿಯತಮೆಯನ್ನೋ ಪ್ರಿಯತಮನನ್ನೋ ನೆನಪಿಸಿಕೊಂಡು ಒಂದು ಪತ್ರ ಬರೆಯಿರಿ. ಆ ಪ್ರೇಮಪತ್ರ ನಿಮ್ಮೊಳಗನ್ನು ಮಾತ್ರವಲ್ಲದೆ, ಓದುವವರ ಮನಸ್ಸನ್ನೂ ಬೆಚ್ಚಗಾಗಿಸುವಂತಿರಲಿ. ಫೆಬ್ರುವರಿ 14ರ ‘ಪ್ರೇಮಿಗಳ ದಿನ’ವನ್ನು ರಂಗೇರಿಸುವುದು ‘ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ’ಯ ಉದ್ದೇಶ. ಬಹುಮಾನ ವಿಜೇತ ಪತ್ರಗಳು ಫೆ.13ರಂದು ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾಗುತ್ತವೆ.ಪ್ರೇಮಪತ್ರ 600 ಪದಗಳನ್ನು ಮೀರಬಾರದು. ಪತ್ರದ ಜೊತೆಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಫೋಟೊ ಇರುವುದು ಕಡ್ಡಾಯ. ಪತ್ರಗಳು ಜನವರಿ 30ಕ್ಕೆ ಮೊದಲು ಪ್ರಜಾವಾಣಿ ಕಚೇರಿ ತಲುಪಬೇಕು. ಈ ಪತ್ರಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ‘ಪ್ರಜಾವಾಣಿಗೆ’ ಇರುತ್ತದೆಮೊದಲ ಬಹುಮಾನ :  ರೂ. 3000

ಎರಡನೇ ಬಹುಮಾನ :  ರೂ. 2000

​ಮೂರನೇ ಬಹುಮಾನ :  ರೂ. 1000
ಇ-ಮೇಲ್‌ನಲ್ಲಿ ಕಳುಹಿಸುವ ಪತ್ರಗಳು ನುಡಿ/ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿರಲಿ.

ಕಳುಹಿಸಬೇಕಾದ ವಿಳಾಸ: ಪ್ರೇಮ ಪತ್ರ ಸ್ಪರ್ಧೆ, ‘ಕಾಮನಬಿಲ್ಲು’ ವಿಭಾಗ, ಪ್ರಜಾವಾಣಿ, ನಂ.75,

ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01. ಇ-ಮೇಲ್: premapathra@prajavani.co.in

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry