ಭಾನುವಾರ, ಮಾರ್ಚ್ 7, 2021
22 °C

ಪ್ರೇಮಾ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೇಮಾ ಯೋಗ

ನಗರದ ‘ಮಮದೇವ ಅಕ್ಷರ ಪವರ್ ಯೋಗ ಕೇಂದ್ರ’ ಇತ್ತೀಚೆಗೆ ವಾರ್ಷಿಕೋತ್ಸವ ಆಚರಿಸಿಕೊಂಡಿತು. ನಟಿ ಪ್ರೇಮಾ, ನಟ ಧರ್ಮ ಕೀರ್ತಿರಾಜ್, ಮಾಯಾ, ಬಿಬಿಎಂಪಿ ಸದಸ್ಯ ಆರ್.ವಿ. ಯುವರಾಜ್ ಎಲ್ಲರೂ ಪ್ರಾಣಾಯಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯೋಗ ಹಾಗೂ ಪ್ರಾಣಾಯಾಮದ ಹಲವಾರು ಆಸನಗಳನ್ನು ಕಲಿತುಕೊಳ್ಳುವ ಆಸಕ್ತಿಯನ್ನು ತೋರಿಸಿದರು.‘ನಟ ವಿಷ್ಣುವರ್ಧನ್ ಅವರ ಬಳುವಳಿಯಂತೆ ನಾನೂ ಯೋಗದ ಆರಾಧಕಿ. ಹಲವಾರು ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿದ್ದೇನೆ’ ಎಂದು ಪ್ರೇಮಾ ಹೇಳಿದಲ್ಲೇ ಕೆಲವು ಆಸನಗಳನ್ನು ಪ್ರದರ್ಶಿಸಿದರು. ‘ಮಮದೇವ ಅಕ್ಷರ ಪವರ್ ಯೋಗ’ದ ಮಾಲೀಕರಾದ ಆರ್.ವಿ ಮಮತಾರಾಜ್ ಮಾತನಾಡಿ, ‘ಕಳೆದೊಂದು ವರ್ಷದಿಂದ ಈ ಕೇಂದ್ರದಲ್ಲಿ ಸಾವಿರಾರು ಜನರಿಗೆ ಯೋಗ ತರಬೇತಿಯನ್ನು ನೀಡುತ್ತಾ ಬಂದಿದ್ದೇವೆ. ಯೋಗದ ಬಗ್ಗೆ ಇತ್ತೀಚೆಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ನಮ್ಮ ಕೇಂದ್ರಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜನರ ಬೇಡಿಕೆಯಂತೆ ಪ್ರಾಣಾಯಾಮದ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.