ಪ್ರೇಮಿಗಳ ದಿನಕ್ಕಾಗಿ ಮಾರುಕಟ್ಟೆ

7

ಪ್ರೇಮಿಗಳ ದಿನಕ್ಕಾಗಿ ಮಾರುಕಟ್ಟೆ

Published:
Updated:
ಪ್ರೇಮಿಗಳ ದಿನಕ್ಕಾಗಿ ಮಾರುಕಟ್ಟೆ

ಪ್ರೇಮಿಗಳಿಗಾಗಿ ಸ್ಯಾಕ್ಸೋಫೋನ್: ಸಂಗೀತದ ರಸದೌತಣವನ್ನು ಸವಿಯುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸುವ ಬಯಕೆ ನಿಮ್ಮದೇ? ಹಾಗಿದ್ದರೆ ನಿಮಗಾಗಿ ಒಂದು ವೇದಿಕೆ ಸಿದ್ಧವಾಗಿದೆ. ಹೌದು, ಬೆಂಗಳೂರು ಸ್ಯಾಕ್ಸೋಫೋನ್ ಕ್ಲಬ್ ಹಾಗೂ ಸೋನಿಡೊ ಮ್ಯೂಸಿಕಲ್ಸ್ ಜಂಟಿಯಾಗಿ ಪ್ರೇಮಿಗಳ ದಿನಕ್ಕಾಗಿ ಗುರುವಾರ `ಸ್ಯಾಕ್ಸೋಫೋನ್ ಜಾಮ್' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹೊಸ ಮಾದರಿಯ ಕಾರ್ಯಕ್ರಮ ಇದಾಗಿದ್ದು ಗುರುವಾರ ಸಂಜೆ 6.30ರಿಂದ ಆರಂಭವಾಗಲಿದೆ. ಸ್ಥಳ: ಸೋನಿಡೊ ಮ್ಯೂಸಿಕಲ್ಸ್, ಬ್ರಿಗೇಡ್ ರಸ್ತೆ, ಕೆಥೊಲಿಕ್ ಕ್ಲಬ್‌ನ ಮುಂಭಾಗ. ಮಾಹಿತಿಗೆ ಸಂಪರ್ಕಿಸಿ: 99452 11014.ಆಕರ್ಷಕ ಆಭರಣ: ಆಭರಣ ಮೋಹಿಗಳಿಗಾಗಿ `ಟಿಬಿಝಡ್ ಜ್ಯುವೆಲ್ಸ್' ಆಕರ್ಷಕ ಆಭರಣ ಸಂಗ್ರಹವನ್ನು ಹೊರತಂದಿದೆ. ಚಿನ್ನ ಮತ್ತು ವಜ್ರದ ಕಿವಿಯೋಲೆ, ನೆಕ್ಲೇಸ್, ಉಂಗುರಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಹುದು.ಚಾನ್ಸರಿಯಲ್ಲಿ: ರಿಚ್ಮಂಡ್ ವೃತ್ತದ ಬಳಿಯಿರುವ ಚಾನ್ಸರಿ ಪೆವಿಲಿಯನ್ ಹೋಟೆಲ್ ಪ್ರೇಮಿಗಳ ದಿನದ ಸಂಜೆಯನ್ನು ವಿಶೇಷ ಭೋಜನ, ಪಾರ್ಟಿ ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ಆನಂದಿಸಿ ಎಂದು ಆಹ್ವಾನವಿತ್ತಿದೆ.

ಗುರುವಾರ ರಾತ್ರಿ 7.30ರ ನಂತರ ಮೇಣದ ಬತ್ತಿ ಬೆಳಕಿನಲ್ಲಿ ನಡೆಯುವ ರಾತ್ರಿ ಭೋಜನದಲ್ಲಿ ಅನಿಯಮಿತವಾದ ವೈನ್ ಮತ್ತಿತರ ಪೇಯಗಳು, ಲೈವ್ ಗ್ರಿಲ್‌ಗಳು, ಆಟೋಟ, ಉಡುಗೊರೆ ಇರುತ್ತದೆ. ಈ ದಿನಕ್ಕೆಂದೇ ವಿಶೇಷ ಮೆನುವನ್ನೂ ಸಿದ್ಧಪಡಿಸಲಾಗಿದೆ. ಮುಂಗಡ ಆಸನ ಕಾದಿರಿಸಲು ಸಂಪರ್ಕಿಸಿ: 4141 4141.ಅಜ್ಜ ಅಜ್ಜಿಯರ ದಿನ: ಟ್ರೀ ಹೌಸ್ ಅಂಡ್ ಆಕ್ಸಸರಿ ಲಿಮಿಟೆಡ್‌ನ ಮಕ್ಕಳು ಪ್ರೇಮಿಗಳ ದಿನವನ್ನು `ಅಜ್ಜ ಅಜ್ಜಿಯರ ದಿನ'ವನ್ನಾಗಿ ಆಚರಿಸುವ ಸಿದ್ಧತೆಯಲ್ಲಿದ್ದಾರೆ. ಪ್ರೇಮಿಗಳ ದಿನದಂದು ಹಿರಿಯ ನಾಗರಿಕರನ್ನು ಪ್ರೀತಿಯಿಂದ ಕಾಣುವುದು ಅವರ ಉದ್ದೇಶವಂತೆ. ಈ ವೇಳೆ ಅಂತ್ಯಾಕ್ಷರಿ, ಹಾಡು, ನೃತ್ಯ ಮೊದಲಾದ ಕಾರ್ಯಕ್ರಮಗಳ ಮೂಲಕ ಹಿರಿ ಜೀವಗಳನ್ನು ಖುಷಿಪಡಿಸುವುದು ಈ ಮಕ್ಕಳ ಉದ್ದೇಶ.ಮಜ್ನು ಕನ್ನಡಕ: ಒಪಿಯಮ್ ಕನ್ನಡಕ ಮಾರಾಟ ಮಳಿಗೆ ಪ್ರೀತಿಯ ದಿನವನ್ನು ರೋಮಿಯೊ- ಜೂಲಿಯಟ್ ಮತ್ತು ಲೈಲಾ-ಮಜ್ನು ಶ್ರೇಣಿಯ ಕನ್ನಡಕ ಧರಿಸಿ ಆಚರಿಸಿಕೊಳ್ಳಿ ಎಂದು ಕರೆಯುತ್ತಿದೆ. ಪ್ರೀತಿಸುವವರಿಗೆ ರೆಟ್ರೋ ಶೈಲಿಯಲ್ಲಿ `ಐ ಲವ್ ಯೂ ಎಂದು ಪ್ರೇಮ ನಿವೇದನೆ ಮಾಡಿ' ಎಂಬ ಆಕರ್ಷಣೆ ಒಡ್ಡಿದೆ ಆಲಿಲಾ ಬೆಂಗಳೂರು ಹೋಟೆಲ್‌ನಲ್ಲಿರುವ `ಪಾಷಾ ಬಾರ್ ಅಂಡ್ ಗ್ರಿಲ್'. ರೆಟ್ರೋ ಶೈಲಿಯ ಉಡುಪು ಧರಿಸಿ, 70ರ ದಶಕದ ಸುಮಧುರ ಹಾಡುಗಳನ್ನು ಆಲಿಸುತ್ತಾ, ವೈನ್ ಗುಟುಕರಿಸುತ್ತಾ, ಆ ಕಾಲದ ಊಟವನ್ನು ಸವಿಯುತ್ತಾ ನಿಮ್ಮ ಮನಕದ್ದವರಿಗೆ ಐ ಲವ್ ಯೂ ಎನ್ನಿ ಎನ್ನುತ್ತಿದೆ ಹೋಟೆಲ್. ಟೇಬಲ್ ಕಾದಿರಿಸಲು: 2854 4444, 7154 4444.ಪ್ಲಾಟಿನಂ ಆಭರಣಗಳ ಸಂಗ್ರಹ: ಖನ್ನಾ ಜ್ಯುವೆಲರ್ಸ್‌, ಜೋಯಾಲುಕ್ಕಾಸ್, ಓರಾ ಹಾಗೂ ಇತರೆ ಆಭರಣ ಮಳಿಗೆಗಳು ಪ್ಲಾಟಿನಂ ಆಭರಣಗಳ ದೊಡ್ಡ ಸಂಗ್ರಹವನ್ನು ಹೊರತಂದಿವೆ. ಪ್ಲಾಟಿನಂನಿಂದ ತಯಾರಾದ ಪೆಂಡೆಂಟ್, ಇಯರ್ ರಿಂಗ್ಸ್, ಕಿವಿಯೋಲೆ, ಸರ ಮೊದಲಾದ ಆಭರಣಗಳು ಇಲ್ಲಿ ಲಭ್ಯ. ಬೆಲೆ ರೂ.12 ಸಾವಿರದಿಂದ ಪ್ರಾರಂಭ. ಗೀತಾಂಜಲಿ ಜ್ಯುವೆಲ್ಸ್‌ನವರು 18ರಿಂದ 80ವರ್ಷ ವಯಸ್ಸಿನ ಪ್ರೇಮಿಗಳಿಗಾಗಿ ಆಕರ್ಷಕ ನಮೂನೆಯ ಚಿನ್ನದ ಆಭರಣಗಳ ಸಂಗ್ರಹವನ್ನು ಹೊರತಂದಿದೆ.ವಿಶೇಷ ಭೋಜನ: ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಲೀ ಕ್ರಿಸ್ಟಲ್ ಹೋಟೆಲ್ ಕೂಡ ವಿಶೇಷ ಮೆನು ಸಿದ್ಧಪಡಿಸಿದೆ. ಲೀ ಕ್ರಿಸ್ಟಲ್‌ನ ಮುಖ್ಯ ಬಾಣಸಿಗ ಸುಬ್ರತೋ ತಯಾರಿಸಿರುವ ಸಿಗ್ನೇಚರ್ ಡಿಶ್ ಜೊತೆ ವೈನ್ ಅಥವಾ ಮೊಯ್ಟ ರೋಸ್ ಸವಿಯುವ ಅವಕಾಶವಿದೆ. ಜತೆಗೆ ರೊಮ್ಯಾಂಟಿಕ್ ಸಂಗೀತ ಕೇಳಿಸಲು ಹೋಟೆಲ್ ಸಜ್ಜುಗೊಂಡಿದೆ. ಪ್ರತಿ ಜೋಡಿಗೆ ರೂ. 2000 ಮತ್ತು 3350 ಬೆಲೆಯ ಪ್ಯಾಕೇಜ್ ಲಭ್ಯ. ಮಾಹಿತಿಗೆ: 4146 2747.ಚಾಕೊಲೇಟ್ ಫೆಸ್ಟ್: ಚಾಕೊಲೇಟ್‌ನಿಂದ ಗ್ರೀಟಿಂಗ್ಸ್‌ವರೆಗೆ ವಿವಿಧ ಉತ್ಪನ್ನಗಳನ್ನು ಹೊಂದಿರುವ ಹೈಪರ್ ಸಿಟಿ ಮಾರ್ಕೆಟ್ ಪ್ರೇಮಿಗಳ ದಿನದ ಅಂಗವಾಗಿ `ಚಾಕೊಲೇಟ್ ಫೆಸ್ಟ್' ಆಯೋಜಿಸಿದೆ. ಗ್ರಾಹಕರು ಇಲ್ಲಿ ತಮಗಿಷ್ಟವಾದ ಬ್ರಾಂಡ್‌ನ ಚಾಕೊಲೇಟ್ ಸವಿಯಬಹುದು. ರೂ. 200 ಮೌಲ್ಯದ ಟೋಬ್ಲೆರೋನ್ ಬಾರ್ ಖರೀಸುವ ಒಬ್ಬ ಅದೃಷ್ಟಶಾಲಿ ಗ್ರಾಹಕ 4.5ಕೇಜಿಯ ಟೋಬ್ಲೆರೋನ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.ಮಾವಿನ ಮರದ ಕೆಳಗೆ...: ರಿಚ್ಮಂಡ್ ಟೌನ್‌ನಲ್ಲಿರುವ `ಅಂಡರ್ ದ ಮ್ಯಾಂಗೋ ಟ್ರೀ' ರೆಸ್ಟೋರೆಂಟ್‌ನಲ್ಲಿ ಪ್ರೇಮಿಗಳಿಗೆ 5 ಕೋರ್ಸ್‌ನ ವಿಶೇಷ ಭೋಜನವನ್ನು ಫೆ. 14ರಿಂದ 17ರವರೆಗೂ ಏರ್ಪಡಿಸಲಾಗಿದೆ. ಹಳೆಯ ಮಾವಿನ ಮರದ ಕೆಳಗೆ ವಿನ್ಯಾಸ ಮಾಡಿರುವ ಈ ರೆಸ್ಟೋರೆಂಟ್‌ನಲ್ಲಿ ಕಾಂಟಿನೆಂಟಲ್ ಮೆನುವಿನ ಜತೆಗೆ ಪೀಜಾ, ಸ್ಟೀಕ್ಸ್, ಪಾಸ್ತಾಗಳೂ ಸಿಗುತ್ತವೆ. 5 ಕೋರ್ಸ್ ಊಟದ ದರ ಎಲ್ಲಾ ತೆರಿಗೆಗಳೂ ಸೇರಿ 599. ಸಮಯ: ಮಧ್ಯಾಹ್ನ 12ರಿಂದ 3.30 ಹಾಗೂ ರಾತ್ರಿ 7.30ರಿಂದ 10.30ರವರೆಗೆ. ಆಸನ ಕಾದಿರಿಸಲು: ಅಂದ ಹಾಗೆ, ಪ್ರೇಮಿಗಳ ಸಪ್ತಾಹದ ಮೆನು 22111 112/3; 96360 96369; 96866 01021.ಆಕರ್ಷಕ ವಾಚ್: ಪ್ರೇಮಿಗಳ ದಿನಕ್ಕಾಗಿ ಟೈಟಾನ್ ಟ್ಯಾಗ್ಡ್ ಸರಣಿಯ ಆಕರ್ಷಕ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವಾರು ಬಣ್ಣಗಳಲ್ಲಿ ಲಭ್ಯವಿರುವ ಈ ವಾಚ್‌ಗಳು ಯುವಕರ ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ. ರೂ. 1495ರಿಂದ ಪ್ರಾರಂಭ. ಜಪಾನ್‌ನ ಪ್ರಸಿದ್ಧ ವಾಚು ತಯಾರಿಕಾ ಕಂಪೆನಿ ಆಲ್ಬಾ ಕೂಡ ವಿಭಿನ್ನ ಶ್ರೇಣಿಯ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಪ್ರೇಮಿಗಳ ದಿನದಂದು ಪ್ರೇಮಿಗಳು ಸುಂದರವಾಗಿ ಕಾಣಲು ನೆರವಾಗುವಂತೆ ನೇಚರ್ಸ್‌ ಕೋ. ಶೇ 100 ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಪ್ರಸಾದನಗಳನ್ನು ಮಾರುಕಟ್ಟೆಗೆ ತಂದಿದೆ. ಮಹದೇವಪುರದಲ್ಲಿರುವ ಫೀನಿಕ್ಸ್ ಮಾಲ್‌ನಲ್ಲಿ ಈ ಉತ್ಪನ್ನಗಳು ಲಭ್ಯವಿದೆ. ಬೆಲೆ ರೂ. 245ರಿಂದ ಪ್ರಾರಂಭ.ರತ್ನಾಭರಣದ ಕೊಡುಗೆ: ನಿಮ್ಮ ಪ್ರೇಮಿಗೆ ರತ್ನಾಭರಣಗಳ ಉಡುಗೊರೆ ನೀಡಿ ಮೆಚ್ಚಿಸುವುದು ನಿಮ್ಮ ಯೋಜನೆಯಾಗಿದ್ದರೆ ಇಂದಿರಾನಗರದಲ್ಲಿರುವ `ಜೆಮ್‌ಸ್ಟೋನ್ ಯೂನಿವರ್ಸ್' ಮಳಿಗೆಗೆ ಭೇಟಿ ಕೊಡಬಹುದು.ಪರಿಶುದ್ಧವಾದ, ಅತ್ಯುತ್ತಮ ಗುಣಮಟ್ಟದ ರತ್ನಗಳನ್ನು ಮಾರಾಟ ಮಾಡುವ ಮತ್ತು ಪ್ರಮಾಣಪತ್ರ ಕೊಡುವ ಅಧಿಕೃತ ಸಂಸ್ಥೆಯೂ ಆಗಿರುವ ಜೆಮ್‌ಸ್ಟೋನ್ ಯೂನಿವರ್ಸ್‌ನಲ್ಲಿ ಕೃತಕ ರತ್ನಗಳನ್ನು ಮಾರಾಟ ಮಾಡುವುದಿಲ್ಲ. ಧರಿಸಲು ಸಲಹೆ ನೀಡುವುದೂ ಇಲ್ಲ ಎಂದಿದೆ.ರತ್ನಗಳನ್ನು ಧರಿಸುವುದರಿಂದ ವಿಶೇಷ ಶಕ್ತಿಯ ಸಂಚಯನವಾಗುತ್ತದೆ. ರೋಸ್ ಕ್ವಾರ್ಟ್ಜ್, ಅಕ್ವಾಮರೈನ್ ಎಮರಾಲ್ಡ್, ಸಫೈರ್ ಪ್ರೇಮದ ದ್ಯೋತಕವಾಗಿ ಬಳಸಲಾಗುತ್ತದೆ ಎಂದಿದ್ದಾರೆ, ಸಂಸ್ಥೆಯ ಸ್ಥಾಪಕರಲ್ಲೊಬ್ಬರು ಹಾಗೂ ಹಿರಿಯ ರತ್ನಶಾಸ್ತ್ರಜ್ಞರಾದ ಅಭಿಜೀತಾ ಕುಲಶ್ರೇಷ್ಠ. ಮಾಹಿತಿಗೆ: www.gemstoneuniverse.com`ಆಭರಣ'ದಲ್ಲಿ ಪ್ರೇಮದಾಭರಣ: ಒಡವೆಯ ಉಡುಗೊರೆ ನೀಡುವ ಪ್ರೇಮಿಗಳಿಗೆ ನಮ್ಮಲ್ಲಿ ವಿಭಿನ್ನ ಮತ್ತು ವಿಶಿಷ್ಟವಾದ ಸಂಗ್ರಹಗಳಿವೆ ಎಂದು ಆಹ್ವಾನಿಸಿದೆ, `ಆಭರಣ' ಮಳಿಗೆ. ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ `ಆಭರಣ' ಮಳಿಗೆಯಲ್ಲಿ ಪ್ರೇಮಿಗಳ ದಿನದ ಸಂಗ್ರಹಗಳ ಆರಂಭಿಕ ಬೆಲೆ  ರೂ.15ಸಾವಿರ.ವಿಶೇಷವೆಂದರೆ, `ಪ್ರೇಮಿಗಳ ದಿನವು ಕೇವಲ ಗಂಡು-ಹೆಣ್ಣಿನ ಪ್ರೇಮಕ್ಕಷ್ಟೇ ಸೀಮಿತವಲ್ಲ, ತಾಯಿ, ಮಗಳು, ಅಕ್ಕ, ತಂಗಿ, ಗೆಳತಿ ಹೀಗೆ ಪ್ರೀತಿಪಾತ್ರರು ಯಾರೇ ಆಗಿದ್ದರೂ ಪ್ರೇಮಿಗಳ ದಿನ ಅವರಿಗೆ ಉಡುಗೊರೆ ಕೊಡಬಹುದು ಎಂಬುದು `ಆಭರಣ'ದ  ವ್ಯಾಖ್ಯಾನ. ಅದೇನೇ ಇದ್ದರೂ ಪ್ರೇಮ ಸಂಕೇತವನ್ನೊಳಗೊಂಡ ವಿವಿಧ ಬಗೆಯ ಆಭರಣಗಳು `ಆಭರಣ'ದ ಸಂಗ್ರಹದಲ್ಲಿವೆ.ಪೀಜಾ ಹಟ್‌ನಲ್ಲಿ...: ಪ್ರೇಮಿಗಳ ದಿನವನ್ನು ಒಂದು ವಾರವಿಡೀ ಸಪ್ತಾಹವಾಗಿ ಆಚರಿಸಿ, ಹೃದಯದಾಕಾರದ ಪೀಜಾಗಳನ್ನು ನಾವು ಪೂರೈಸುತ್ತೇವೆ ಎನ್ನುತ್ತಿದೆ, ಪೀಜಾ ಹಟ್. ಇದಕ್ಕಾಗಿ ವೆಜ್ಜಿ ಲವರ್ಸ್‌, ಪನೀರ್ ಮಖಾನಿ, ಚಿಕನ್ ಟಿಕ್ಕಾ, ಕಡಾಯ್ ಚಿಕನ್ ಅಂಡ್ ಚಿಕನ್ ಸುಪ್ರೀಮ್, ಜೊತೆಗೆ ಹಾರ್ಟ್ ಪೀಜಾಸ್ ಪ್ರೇಮಿಗಳ ದಿನದ ಮೆನುವಿನಲ್ಲಿರುತ್ತವೆ. ಪೀಜಾ, ಪೇಯವನ್ನೊಳಗೊಂಡ ಮೀಡಿಯಮ್ ಮೀಲ್ ಕೂಡಾ ಲಭ್ಯ ಎಂದು ಪೀಜಾ ಹಟ್ ತಿಳಿಸಿದೆ.ವಿಶೇಷ ಮೆನು: ಯುಬಿ ಸಿಟಿಯಲ್ಲಿರುವ `ದಿ ಟವರ್ ಕಿಚನ್' ರೆಸ್ಟೋರಾ ಪ್ರೇಮಿಗಳ ದಿನಕ್ಕಾಗಿ ವಿಶೇಷ ಮೆನು ಸಿದ್ಧಪಡಿಸಿದೆ. ರೆಡ್/ ವೈಟ್ ವೈನ್‌ನೊಂದಿಗೆ ಪ್ರಾರಂಭಗೊಳ್ಳುವ ಊಟದ ಜತೆಗೆ ವಿಶೇಷ ಕಾಕ್‌ಟೇಲ್‌ನ್ನು ಕಾಂಪ್ಲಿಮೆಂಟರಿಯಾಗಿ ನೀಡಲಾಗುತ್ತದೆ. ಪ್ರತಿ ಜೋಡಿಗೆ ಬೆಲೆ ರೂ.1900 (ತೆರಿಗೆ ಹೊರತುಪಡಿಸಿ).ಐಷಾರಾಮಿ ಹೋಟೆಲ್ ಐಟಿಸಿ ವಿಂಡ್ಸರ್ ಪ್ರೇಮಿಗಳ ದಿನಕ್ಕೆ ಐಷಾರಾಮಿ ಕೊಡುಗೆಯನ್ನೇ ಪ್ರಕಟಿಸಿದೆ. ವಿಂಡ್ಸರ್ ಪ್ರೇಮಿಗಳ ದಿನಕ್ಕೆಂದು ವಿಶೇಷವಾಗಿ ಸಿದ್ಧಪಡಿಸಿರುವ ಲವ್‌ಟೇಬಲ್‌ನಲ್ಲಿ ಕುಳಿತು ಪ್ರೇಮಿಗಳು ತಮ್ಮ ಪ್ರೀತಿ ವ್ಯಕ್ತಪಡಿಸಬಹುದು. ಪ್ರತಿ ಜೋಡಿಗೆ ರೂ.40,000, ರೂ.12,000 ರೂ. 5,500ರ ಕೊಡುಗೆ ಪ್ರಕಟಿಸಿದೆ. ಟೇಬಲ್ ಕಾಯ್ದಿರಿಸಲು: 080 4140 1205.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry