ಪ್ರೇಮಿಗಳ ದಿನವೇ ಯುವ ಜೋಡಿ ಆತ್ಮಹತ್ಯೆ

7

ಪ್ರೇಮಿಗಳ ದಿನವೇ ಯುವ ಜೋಡಿ ಆತ್ಮಹತ್ಯೆ

Published:
Updated:

ಗುಲ್ಬರ್ಗ: ಪ್ರೇಮಿಗಳ ದಿನವಾದ ಫೆ.14ರಂದು ನಸುಕಿನ ಜಾವ ಪ್ರೇಮಿಗಳಿಬ್ಬರು ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶರಣಸಿರಸಗಿ ರೈಲ್ವೆ ಗೇಟ್ ಬಳಿ ನಡೆದಿದೆ.ಸಿದ್ಧಾರ್ಥ ನಗರದ ಯಲ್ಲಾಲಿಂಗ ಹೊನ್ನಪ್ಪ ನಾಟೀಕಾರ (31) ಮತ್ತು ಶರಣಸಿರಸಗಿ ಮಡ್ಡಿಯ ಅಂಬೇಡ್ಕರ್ ನಗರದ ಭಾರತಿ ಹೊಸಮನಿ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.ಆಟೊ ಚಾಲಕನಾದ ಯಲ್ಲಾಲಿಂಗ  ಹಾಗೂ ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿ ಭಾರತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯಲ್ಲಾಲಿಂಗ ತನ್ನ ಆಟೊದಲ್ಲಿಯೇ ಭಾರತಿಯನ್ನು ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದ. ಅಂತರ್ಜಾತಿಯ ಹಿನ್ನೆಲೆಯಲ್ಲಿ ಮದುವೆಗೆ ಮನೆಯವರ ವಿರೋಧವಿತ್ತು. ಬೇಸರಗೊಂಡ ಇಬ್ಬರೂ ಆತ್ಮಹತ್ಯೆಗೆ ಮಾಡಿದ್ದಾರೆ~  ಎಂದು ಸ್ಥಳೀಯರು ತಿಳಿಸಿದ್ದಾರೆ.`ನಸುಕಿನ ಜಾವ ಈ ಘಟನೆ ನಡೆದಿದ್ದು, ಭಾರತಿಯ ತಲೆ ರೈಲಿನ ಗಾಲಿಗೆ ಸಿಕ್ಕಿದೆ. ಸುಮಾರು 10 ಅಡಿ ದೂರದಲ್ಲೇ ಯಲ್ಲಾಲಿಂಗನ ತಲೆಗೆ ರೈಲು ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ~ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry