ಪ್ರೇಮಿಗಳ ದಿನಾಚರಣೆ: ಮುತಾಲಿಕ ಸಿಡಿಮಿಡಿ

7

ಪ್ರೇಮಿಗಳ ದಿನಾಚರಣೆ: ಮುತಾಲಿಕ ಸಿಡಿಮಿಡಿ

Published:
Updated:

ಲಕ್ಷ್ಮೇಶ್ವರ:  ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಇಂದು ಕೆಲವರು ದೇಶದಲ್ಲಿ ಸೆಕ್ಸ್‌ನ್ನು ಬೆಂಬಲಿಸಲಾಗುತ್ತಿದೆ. ಹೀಗಾಗಿ ಪವಿತ್ರ ಪ್ರೇಮಕ್ಕೆ ಅಪಚಾರವಾಗುವ ರೀತಿಯಲ್ಲಿ ಆಚರಿಸಲ್ಪಡುವ ಪ್ರೇಮಿಗಳ ದಿನಾಚರಣೆಯನ್ನು ಶ್ರೀರಾಮ ಸೇನೆ ಬಲವಾಗಿ ವಿರೋಧಿಸುತ್ತದೆ~ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಮತ್ತೊಮ್ಮೆ ಗುಡುಗಿದ್ದಾರೆ.ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲು ಆಗ ಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಭಾರತದಲ್ಲಿ ಪ್ರೀತಿ ಪ್ರೇಮಕ್ಕೆ ವಿಶಾಲವಾದ ಅರ್ಥವಿದೆ ಆದರೆ ವ್ಯಾಲೆಂಟೈನ್ ಎಂಬ ವಿದೇಶಿ ಪಾದ್ರಿ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಪ್ರೇಮಿಗಳ ದಿನಾ ಚರಣೆ ಹಿಂದೆ  ವ್ಯಾಪಾರೀ ಮನೋಭಾವ ಅಡಗಿದ್ದು ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯಂದು ಗುಲಾಬಿ ಹೂವು, ಗ್ರೀಟಿಂಗ್ಸ್ ಹಾಗೂ ಗಿಫ್ಟ್ ಖರೀದಿ ಹೆಸರಿನಲ್ಲಿ ಬರೋಬ್ಬರಿ ನೂರು ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅವರು ದೂರಿದರು.ಇದನ್ನು ಗಮನಸಿದರೆ ದಿನಾಚರಣೆ ನೆಪದಲ್ಲಿ ವಿದೇಶಿ ಕಂಪೆನಿಗಳು ಕೋಟ್ಯಂತರ ರೂಪಾಯಿ ದುಡ್ಡನ್ನು ಸಂಪಾದಿಸುವ ಸಂಚು ಅಡಗಿದೆ. ಜನತೆಯಲ್ಲಿ ಸೆಕ್ಸ್ ಹಾಗೂ ಡ್ರಗ್ಸ್‌ನ ಹುಚ್ಚನ್ನು ತುಂಬಿ ಆ ಮೂಲಕ ದೇಶದ ಯುವಶಕ್ತಿಯನ್ನು ನಾಶ ಮಾಡುವ ಹುನ್ನಾರ ಈ ದಿನಾಚರಣೆ ಉದ್ಧೇಶವಾಗಿದೆ ಎಂದು ಆರೋಪಿಸಿದರು. ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ  ಮಾಜಿ ಸಚಿವರ ವಿರುದ್ಧ ಕಿಡಿಕಾರಿದರು. `ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತ ಮತದಾರರು ಬಿಜೆಪಿಗೆ ಮತ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಜನತೆಯ ಆಶೋತ್ತರಗಳನ್ನು ಗಾಳಿಗೆ ತೋರಿ ಅವರನ್ನು ಭ್ರಮನಿರಶರನ್ನಾಗಿ ಮಾಡಿದೆ.ಇಂದು ಕರ್ನಾಟಕದಲ್ಲಿ ಸರ್ಕಾರ ನಗ್ನವಾಗಿದ್ದು ಇದರಿಂದ ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟು ಬಿದ್ದಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನತೆಯ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ಕೇವಲ ಅಧಿಕಾರದ ಅಮಲಿನಲ್ಲಿ ಬೀಗುತ್ತಿರುವ ಅದಕ್ಕೆ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ~ ಎಂದರು.ನಲವತ್ತು ವರ್ಷಗಳ ಹಿಂದೆ ಸಂಸ್ಥಾನ ಗಳನ್ನು ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರ ನೀಡುವುದಾಗ ಸರ್ಕಾರ ಘೋಷಿಸಿತ್ತು. ಆದರೆ ಇಷ್ಟು ವರ್ಷ ಕಳೆದರೂ ಸಂಸ್ಥಾನದ ವಂಶಸ್ಥರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಕಿತ್ತೂರು ಚನ್ನಮ್ಮನ ವಂಶಸ್ಥರ 11 ಕುಟುಂಬಗಳು ಇದ್ದು ಪ್ರತಿ ಕುಟುಂಬಕ್ಕೆ 10 ಕೋಟಿಯಂತೆ ಪರಿಹಾರ ನೀಡಬೇಕು~ ಎಂದು ಒತ್ತಾಯಿಸಿದರು.ಆನಂದ ದಾಸಪ್ಪನವರ, ರಾಜು ಖಾನಪ್ಪನವರ, ಚೆನ್ನಬಸನಗೌಡ ಚಿಕ್ಕಗೌಡ್ರ, ವಿರುಪಾಕ್ಷಗೌಡ ಹಿರೇಗೌಡ್ರ, ಮುತ್ತು ಪೂಜಾರ ಹಾಗೂ ಕಿತ್ತೂರ ಚನ್ನಮ್ಮನ ವಂಶಸ್ಥರಾದ ಕಾಶಿನಾಥ ಬಾಪುಸಾಹೇಬ ದೇಸಾಯಿ, ರಾಜಶೇಖರ ದಾದಾಸಾಹೇಬ ದೇಸಾಯಿ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry