ಪ್ರೇಮಿಗಳ ದಿನ: ಆಫರ್ರೋ ಆಫರ್ರು

7
ಚೆಲ್ಲಾಪಿಲ್ಲಿ

ಪ್ರೇಮಿಗಳ ದಿನ: ಆಫರ್ರೋ ಆಫರ್ರು

Published:
Updated:
ಪ್ರೇಮಿಗಳ ದಿನ: ಆಫರ್ರೋ ಆಫರ್ರು

`ಪ್ರೇಮಿಗಳ ದಿನ'ವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಪ್ರೇಮಿಗಳು ಸಜ್ಜಾಗುತ್ತಿದ್ದಾರೆ. ಪ್ರೀತಿಸುವ ಹೃದಯಗಳ ಪ್ರೀತಿ ನಿವೇದನೆಗೆ ರಂಗು ತುಂಬಲು ಹಲವು ಐಷಾರಾಮಿ ಹೋಟೆಲ್‌ಗಳು, ಬೇಕರಿಗಳು, ವಿವಿಧ ಕಂಪೆನಿಗಳು ತರಹೇವಾರಿ ಆಫರ್‌ಗಳನ್ನು ಹರಿಬಿಟ್ಟಿವೆ. ತಮಗಿಷ್ಟವಾದವರಿಗೆ ಉಡುಗೊರೆ, ತಿಂಡಿ ತಿನಿಸುಗಳನ್ನು ನೀಡಿ ಸಂತುಷ್ಟ ಪಡಿಸಲು ಪ್ರೇಮಿಗಳಿಗೆ ಕೆಲವು ಆಯ್ಕೆಗಳು ಇಲ್ಲಿವೆ.ಇಂದಿರಾ ನಗರದಲ್ಲಿರುವ ಬಾರ್ಬೆಕ್ಯೂ ರೆಸ್ಟೋರೆಂಟ್ ಹಾಗೂ ಗೋಲ್ಡನ್ ಲೋಟಸ್ ಹೋಟೆಲ್ ಪ್ರೇಮಿಗಳ ದಿನಕ್ಕಾಗಿ `ಹಾರ್ಟಿ ಮೀಲ್' ಎಂಬ ವಿಶೇಷ ಮೆನು ಸಿದ್ಧಪಡಿಸಿದೆ. ಬಾರ್ಬೆಕ್ಯೂ ಬಫೆಯಲ್ಲಿ ಪ್ರೇಮಿಗಳಿಬ್ಬರೂ ಮನತಣಿಯುವಷ್ಟು ಆಹಾರವನ್ನು ರಿಯಾಯಿತಿ ಬೆಲೆಯಲ್ಲಿ ಸವಿಯಬಹುದು. ಹಿನ್ನೆಲೆಯಲ್ಲಿ ತೇಲಿಬರುವ `ವ್ಯಾಲೆಂಟೈನ್ ಲೈವ್ ಬ್ಯಾಂಡ್'ನ ಸಂಗೀತ ಸುಧೆ ಊಟಕ್ಕೆ ವಿಶೇಷ ಸ್ವಾದ ನೀಡುತ್ತದೆ. ಫೆ.13 ಮತ್ತು 14ರಂದು ಪಾಲ್ಗೊಳ್ಳುವ ಪ್ರೇಮಿಗಳಿಗೆ ವಿಶೇಷ ಆಕರ್ಷಣೆಗಳು ಇಲ್ಲಿವೆ. ಹುಡುಗಿಯರು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದ್ದರೆ, ಲಕ್ಕಿ ಡ್ರಾನಲ್ಲಿ ವಿಜೇತರಾದ ಜೋಡಿ ಬ್ಯಾಂಕಾಕ್ ಹಾರುವ ಅವಕಾಶ ಪಡೆದುಕೊಳ್ಳಲಿದ್ದಾರೆ.ಬಹು ಖಾದ್ಯಗಳ ರೆಸ್ಟೋರಾ `ಗೋಲ್ಡನ್ ಲೋಟಸ್' ಪ್ರೇಮಿಗಳಿಗೆ ಬಾರ್ ಮೆನುವಿನಲ್ಲಿ ಬೈ ಒನ್ ಗೆಟ್ ಒನ್ ಡ್ರಿಂಕ್‌ನ ಆಕರ್ಷಣೆ ಒಡ್ಡಿದೆ. ಈ ಕೊಡುಗೆ ಫೆ.16ರವರೆಗೆ ಮಾತ್ರ.ವೈಟ್‌ಫೀಲ್ಡ್‌ನ ಬೆಂಗಳೂರು ಮ್ಯಾರಿಯೇಟ್ ಹೋಟೆಲ್‌ನಲ್ಲಿರುವ `ಎಂ ಕೆಫೆ' ರೆಸ್ಟೋರೆಂಟ್ ಕೂಡ ವಿಶೇಷ ಮೆನು ಸಿದ್ಧಪಡಿಸಿದೆ. ಪಾನ್ ಸಿಯರ್ಡ್‌ ಫೋ ಗ್ರಾಸ್, ಚಾಕೊಲೇಟ್ ಮಾಕ್ವೀಸ್, ಅಮರ್‌ನಾಥ್ ಸ್ವೀಟ್ ಕಸ್ಟರ್ಡ್, ಸ್ಕಾಟಿಷ್ ಸಾಲಮನ್ ಮೊದಲಾದವುಗಳ ತಿನಿಸುಗಳನ್ನು ಇಲ್ಲಿ ಸವಿಯಬಹುದು. ಇಲ್ಲೂ ಲೈವ್ ಬ್ಯಾಂಡ್‌ನ ಸದ್ದು ಕೇಳಲಿದೆ. ಲಕ್ಕಿ ಡ್ರಾನಲ್ಲಿ ಆಯ್ಕೆಯಾದವರು ಈ ಐಷಾರಾಮಿ ಹೋಟೆಲ್‌ನಲ್ಲಿ ಒಂದು ದಿನ ತಂಗುವ ಅವಕಾಶ ತಮ್ಮದಾಗಿಸಿಕೊಳ್ಳಲಿದ್ದಾರೆ. ಫೆ.14ರಂದು ಪಾಲ್ಗೊಳ್ಳಬಹುದಾದ ಈ ವಿಶೇಷ ಊಟದ ಪ್ಯಾಕೇಜ್‌ನ ಬೆಲೆ ರೂ. 2500.ಆಗಸದಲ್ಲಿ ಮೂಡಿರುವ ಚಂದಿರ ಹಾಗೂ ನಕ್ಷತ್ರಗಳನ್ನು ನೋಡುತ್ತಾ ಮೇಣದಬತ್ತಿ ಬೆಳಕಲ್ಲಿ ಡಿನ್ನರ್ ಮಾಡುವ ಅವಕಾಶವನ್ನು ಈ ಹೋಟೆಲ್ ಕಲ್ಪಿಸಿದೆ. ಇಲ್ಲಿನ `ಎಂ ಬಾರ್' ರೆಸ್ಟೋರಾ ನೀಡಿರುವ ಪ್ಯಾಕೆಜ್‌ನ ಬೆಲೆ ಪ್ರತಿ ಜೋಡಿಗೆ ರೂ. 75,000. ಈ ಪ್ಯಾಕೇಜ್ ಯುವ ಜೋಡಿಗಳಿಗೆ ಜೀವಮಾನವಿಡೀ ಮರೆಯಲಾಗದಂಥ ಒಂದು ಸುಮಧುರ ಅನುಭವ ನೀಡುತ್ತದೆ ಎಂದು ಹೇಳಿಕೊಂಡಿದೆ ಹೋಟೆಲ್.ರೋಮಿಯೊ ಜೂಲಿಯೆಟ್ ಚಾಕೊಲೇಟ್!

ನಲ್ಲೆಗೆ ಚಾಕೊಲೇಟ್ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಹಳೆಯ ಪ್ರೇಮವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವ ಉದ್ದೇಶ ನಿಮಗಿದ್ದರೆ `ದಿವಿನಾ'ದ ಚಾಕೊಲೇಟ್ ವೈವಿಧ್ಯ ನಿಮಗಿಷ್ಟವಾದೀತು.ಸ್ಟ್ರಾಬೆರಿ ಸ್ವಿರ್ಲ್‌ ಕೇಕ್‌ನಿಂದ ಚಾಕೊಲೇಟ್ ಫ್ರೇಮ್‌ಗಳು, ದಿವಿನಾ ಲಿಕ್ಕರ್ ಚಾಕೊಲೇಟ್‌ಗಳು ಹೀಗೆ ಅಪರೂಪದ ಸಂಗ್ರಹ `ದಿವಿನಾ'ದಲ್ಲಿದೆ. ಪ್ರೇಮಿಗಳ ದಿನಕ್ಕೆಂದೇ ವಿನ್ಯಾಸಗೊಳಿಸಿರುವ ರೋಮಿಯೊ ಜೂಲಿಯೆಟ್ ಚಾಕೊಲೇಟ್ ಪ್ರೇಮಿಗಳಿಗೆ ಇಷ್ಟವಾಗದೇ ಇರದು ಎಂದಿದೆ `ದಿವಿನಾ'.ಜಯನಗರ ನಾಲ್ಕನೇ ಬ್ಲಾಕ್‌ನ 10ನೇ ಎ ಮುಖ್ಯರಸ್ತೆಯಲ್ಲಿರುವ `ದಿವಿನಾ'ದ ಸಂಪರ್ಕಕ್ಕೆ: 4277 7333, 97400 25477/ www.edenpark.co.in.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry