ಪ್ರೇಮಿಗಳ ದಿನ; ರೂ 12 ಸಾವಿರ ಕೋಟಿ ವ್ಯಾಪಾರ ನಿರೀಕ್ಷೆ

7

ಪ್ರೇಮಿಗಳ ದಿನ; ರೂ 12 ಸಾವಿರ ಕೋಟಿ ವ್ಯಾಪಾರ ನಿರೀಕ್ಷೆ

Published:
Updated:
ಪ್ರೇಮಿಗಳ ದಿನ; ರೂ 12 ಸಾವಿರ ಕೋಟಿ ವ್ಯಾಪಾರ ನಿರೀಕ್ಷೆ

ನವದೆಹಲಿ (ಐಎಎನ್‌ಎಸ್): ಪ್ರೇಮಿಗಳ ದಿನ ಆಚರಣೆಯ ಹಿನ್ನೆಲೆಯಲ್ಲಿ ಒಂದು ವಾರದವರೆಗೆ  ವ್ಯಾಪಾರ- ವಹಿವಾಟು ಭರ್ಜರಿಯಾಗಿಯೇ ನಡೆಯಲಿದ್ದು, ಈ   ಬಾರಿ (ಫೆ. 7ರಿಂದ 14ರವರೆಗೆ) ಸುಮಾರು ರೂ 12 ಸಾವಿರ ಕೋಟಿಗಳಷ್ಟು ವ್ಯಾಪಾರ ನಡೆಯುವ ಸಾಧ್ಯತೆ ಇದೆ.  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ತಿಳಿದು ಬಂದಿದೆ. ‘ಪ್ರೀತಿ ಬಲು ದುಬಾರಿ’ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷ್ಯ ಬೇಕೆ? ಎನ್ನುತ್ತಿವೆ ಈ ಸಮೀಕ್ಷೆಯ ಅಂಕಿ ಅಂಶಗಳು.

‘ಪ್ರೇಮಿಗಳ ದಿನ’ ಎಂದರೆ  ರಸ್ತೆ ಬದಿಯಲ್ಲಿ ಹೂ ಮಾರುವ ವ್ಯಾಪಾರಿಯಿಂದ ಹಿಡಿದು, ದೂರವಾಣಿ ಕಂಪೆನಿಗಳು, ಹೋಟೆಲ್, ರೆಸ್ಟೋರೆಂಟ್‌ಗಳು, ಉಡುಗೊರೆ ಮಳಿಗೆಗಳು, ಚಿನ್ನಾಭರಣ ಅಂಗಡಿಗಳು, ಪುಷ್ಪೋದ್ಯಮಿಗಳು  ಎಲ್ಲರಿಗೂ ಲಾಭದ ದಿನ.‘ಅಸೋಚಾಂ’ ದೇಶದ 10 ಪ್ರಮುಖ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, ಯುವ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಹೆಚ್ಚಿನ ಹಣ  ಖರ್ಚು ಮಾಡುತ್ತಾರೆ ಎಂಬುದು   ದೃಢಪಟ್ಟಿದೆ. ಪ್ರಿಯತಮ/ಮೆಯನ್ನು ಮೆಚ್ಚಿಸಲು ದುಬಾರಿ ಉಡುಗೊರೆಗಳನ್ನು ನೀಡುವುದರ ಮೂಲಕ ಈ ದಿನವನ್ನು ನೆನಪಿನಲ್ಲಿ ಚಿರಸ್ಥಾಯಿಯಾಗಿರುವಂತೆ ನೋಡಿಕೊಳ್ಳುತ್ತಾರೆ.  ಪ್ರೇಮ ಸಪ್ತಾಹ: ಫೆಬ್ರುವರಿ 7 ರಂದು ರೋಸ್ ಡೆ, 8ರಂದು ಪ್ರಪೊಸಲ್ ಡೆ, 9ರಂದು ಚಾಕ್ಲೇಟ್ ಡೆ, 10ರಂದು ಟೆಡ್ಡಿ ಡೆ, 11ರಂದು ಪ್ರಾಮೀಸ್ ಡೆ, 12ರಂದು ಕಿಸ್ ಡೆ, 13ರಂದು ಹಗ್ ಡೆ, ಕೊನೆಯಲ್ಲಿ 14ರಂದು ವ್ಯಾಲಂಟೈನ್ಸ್ ಡೆ ಇರುವುದರಿಂದ ಈ ‘ಪ್ರೇಮ ಸಪ್ತಾಹ’ದಲ್ಲಿ  ವ್ಯಾಪಾರ  ಜೋರಾಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನರ ಆರ್ಥಿಕ ಮಟ್ಟ  ಹೆಚ್ಚಿರುವುದರಿಂದ  ಶೇ 120ರಷ್ಟು ವ್ಯಾಪಾರ ಹೆಚ್ಚಲಿದೆ.ಶುಭಾಶಯ ಪತ್ರಗಳು, ಮುದ್ದಾದ ಗೊಂಬೆಗಳು, ಚಿನ್ನ, ವಜ್ರಾಭರಣಗಳು, ಮೊಬೈಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹೀಗೆ ಕಣ್ಣಿಗೆ ಕಂಡಿದ್ದೆಲ್ಲವೂ ಈ ದಿನ ಆಪ್ಯಾಯಮಾನವಾಗಿ ಕಾಣುವುದರಿಂದ ಬೇಡಿಕೆ ಹೆಚ್ಚು.ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಸುಮಾರು 1,200 ಜನರನ್ನು ‘ಅಸೋಚಾಂ’ ಸಂದರ್ಶಿಸಿದ್ದು, ಇವರಲ್ಲಿ ಅನೇಕರು ್ಙ 5,000 ದಿಂದ ್ಙ1.5 ಲಕ್ಷದವರೆಗೆ  ಖರ್ಚು ಮಾಡಲು ಸಿದ್ಧರಿರುವುದಾಗಿ ಹೇಳಿದ್ದಾರೆ.‘ಪ್ರೇಮಿಗಳ ದಿನ’ದ ಅಂಗವಾಗಿ ಗುಲಾಬಿ ಆಮದು-ರಫ್ತು ವಹಿವಾಟು ಕೂಡ ಹೆಚ್ಚಿದೆ.  ಚೀನಾದಿಂದ ಗರಿಗರಿಯಾದ ಕೃತಕ ಗುಲಾಬಿ ಭಾರತಕ್ಕೆ ಬಂದಿಳಿದಿವೆ. ಥಾಯ್ಲೆಂಡ್‌ನಿಂದ ಲಿಲ್ಲಿ ಹೂವು ಸೇರಿದಂತೆ ಅನೇಕ ವೈವಿಧ್ಯಮಯ ಪುಷ್ಪಗಳು ಮಾರುಕಟ್ಟೆಗೆ ಬಂದಿವೆ. 2010-11ನೇ ಸಾಲಿನ ಏಪ್ರಿಲ್-ಜೂನ್ ಅವಧಿಯಲ್ಲಿ ಗುಲಾಬಿ ರಫ್ತು ವಹಿವಾಟು 1.70 ಕೋಟಿಯನ್ನು ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry