ಪ್ರೇಮ ಪುನೀತ!

7

ಪ್ರೇಮ ಪುನೀತ!

Published:
Updated:

ಒಬ್ಬೊಬ್ಬ ನಿರ್ದೇಶಕರು ಒಂದೊಂದು ರೀತಿಯಲ್ಲಿ ಪ್ರೀತಿಯನ್ನು ಅರ್ಥೈಸಿದ್ದಾರೆ. ಆದರೆ ನಾನು ಪ್ರೀತಿಯ ಮತ್ತೊಂದು ಆಯಾಮವನ್ನು ಚಿತ್ರದಲ್ಲಿ ತೆರೆದಿಟ್ಟಿದ್ದೇನೆ. ಯುವ ಜನಾಂಗ ಇದನ್ನು ಖಂಡಿತಾ ಇಷ್ಟಪಡುತ್ತದೆ- ನಿರ್ದೇಶಕ ನೀಲ್‌ಕಮಲ್ ಅವರ ಆತ್ಮವಿಶ್ವಾಸದ ಮಾತಿದು.ಒಂದು ವರ್ಷದ ಹಿಂದೆಯೇ ಸೆಟ್ಟೇರಿದ್ದ ಅವರ `ಪುನೀತ್~ ಫೆಬ್ರುವರಿ ಕೊನೆಯ ವಾರದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಪ್ರೀತಿಯ ಕುರಿತ ಮನಮುಟ್ಟುವ ಸಂಭಾಷಣೆಗಳು ಚಿತ್ರದ ಜೀವಾಳ ಎಂಬುದು ನೀಲ್ ಅಭಿಪ್ರಾಯ. ಇದು ಕುಟುಂಬದೊಳಗೇ ನಡೆಯುವ ಪ್ರೇಮ ಕಥೆ.ಊಟಿಯಲ್ಲಿ ಕಾಲೇಜು ಓದುತ್ತಿದ್ದ ನಾಯಕ ಜಮೀನು ನೋಡಿಕೊಳ್ಳಲು ಊರಿಗೆ ವಾಪಸ್ಸು ಬರುತ್ತಾನೆ. ಅಲ್ಲಿ ಕಾಲೇಜು ವಿದ್ಯಾರ್ಥಿನಿಯಾದ ನಾಯಕಿಯೊಂದಿಗೆ ಪ್ರೀತಿ ಹುಟ್ಟುತ್ತದೆ. ಇದು ಚಿತ್ರಕಥೆಯ ಸಾರಾಂಶ. ಪ್ರತಿಯೊಬ್ಬರ ಜೀವನದಲ್ಲೂ ಮೊದಲ ಪ್ರೀತಿ ಮೂಡಿರುತ್ತದೆ. ಅದನ್ನು ಎಷ್ಟು ವರ್ಷಗಳಾದರೂ ಮರೆಯಲು ಸಾಧ್ಯವೇ ಇಲ್ಲ. ಚಿತ್ರವೂ ಇಂತಹದೇ ನವಿರು ಪ್ರೇಮವನ್ನು ನೆನಪಿಸುತ್ತದೆ ಇದುವರೆಗಿನ ಯಾವ ಚಿತ್ರಗಳಲ್ಲೂ ಕಾಣದ ಕ್ಲೈಮ್ಯಾಕ್ಸ್ ಈ ಚಿತ್ರದಲ್ಲಿದೆ. ಅಂತ್ಯದಲ್ಲಿ ಊಹಿಸಲಾಗದ ತಿರುವನ್ನು ನೀಡಿದ್ದೇವೆ ಎಂದರು ಅವರು.ಇದು ಪ್ರೇಮಿಗಳಿಗಾಗಿ ಪ್ರೀತಿಯಿಂದ ಮಾಡಿದ ಸಿನಿಮಾ ಅಂದರು ನಾಯಕ ನಟ ದಿಲೀಪ್ ಪೈ. ರೋಡ್ ರೋಮಿಯೋ ಚಿತ್ರದಲ್ಲಿ ನಾಯಕನ ಪಟ್ಟ ಗಿಟ್ಟಿಸಿಕೊಂಡ ನಂತರ ಹಿರಿತೆರೆಯಲ್ಲಿ ಅವರು ಅಷ್ಟೇನೂ ಸದ್ದು ಮಾಡಿರಲಿಲ್ಲ. ಈಗ ಪುನೀತ್ ಮೂಲಕ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ ಅವರು. ಶೀರ್ಷಿಕೆಗೆ ತಕ್ಕಂತೆ ಆ ಚಿತ್ರದಲ್ಲಿ ರೋಡ್ ರೋಮಿಯೋ ಆಗಿದ್ದೆ. ಈ ಚಿತ್ರದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿದ್ದೇನೆ ಎನ್ನುವುದು ದಿಲೀಪ್‌ರ ಪುಳಕ.ಬೆಂಗಳೂರು, ಊಟಿ ಮತ್ತು ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಸಂಗೀತ ನಿರ್ದೇಶಕ ಕಬೀರ್‌ರಾಜ್ ಅವರಿಗೂ ಇದು ಮೊದಲ ಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry