ಪ್ರೇಮ ಬರಹ

7
ಪಿಕ್ಚರ್ ಪ್ಯಾಲೆಸ್

ಪ್ರೇಮ ಬರಹ

Published:
Updated:
ಪ್ರೇಮ ಬರಹ

ಪ್ರೀತಿ ಎಂಬ ಎರಡಕ್ಷರದ ಪದದಲ್ಲಿ ಏನೆಲ್ಲಾ ಇದೆ. ಪ್ರೇಮದ ಸಂಬಂಧದಲ್ಲಿ ಒಲವಿದೆ, ಮಧುವಿದೆ, ನಗುವಿದೆ, ತುಡಿತವಿದೆ. ಹಾಗೆಯೇ, ನೋವೂ ಇದೆ. ಪ್ರೇಮಿಗಳು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುವಾಗ ಅವರ ಮನಸ್ಸು `ದಾರಿ ಮುಗಿಯದಿರಲಿ' ಎಂದು ಪ್ರಾರ್ಥಿಸುತ್ತದೆ.ಮತ್ತೆ ಕೆಲವು ಪ್ರೇಮಿಗಳು ಪ್ರೀತಿಯನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ಬಂಡೆ, ಮರಗಳ ಮೇಲೆ ಹೃದಯದಾಕಾರದಲ್ಲಿ ಕೆತ್ತಿ ಅಜರಾಮರವಾಗಿಸಲು ಪ್ರಯತ್ನಿಸುತ್ತಾರೆ. ಕೆಲವರ ಪ್ರೀತಿ ಹುಟ್ಟುವುದಕ್ಕಿಂತ ಮುನ್ನವೇ ಸಾಯುತ್ತದೆ. ಮನದ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲಾಗದೆ ಒದ್ದಾಡುವ ಪ್ರೇಮಿಗಳೂ ಅಸಂಖ್ಯ. ಪ್ರೇಮದ ಉರಿಯಲ್ಲಿ ಬೇಯುತ್ತಿರುವ ಭಗ್ನ ಪ್ರೇಮಿಗಳಿಗೆ ಮೈಯೊಡ್ಡುತ್ತವೆ ಪಾರ್ಕಿನ ಬಂಡೆಗಳು ಮತ್ತು ಮರಗಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry