ಪ್ರೇಮ ಯುಗಳ

7

ಪ್ರೇಮ ಯುಗಳ

Published:
Updated:
ಪ್ರೇಮ ಯುಗಳ

ಸುವರ್ಣ ವಾಹಿನಿಯಲ್ಲಿ `ಚೆಲುವಿ~ ಮತ್ತು `ಪಲ್ಲವಿ ಅನುಪಲ್ಲವಿ~ ಎನ್ನುವ ಎರಡು ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ. ಜೂನ್ 25ರಿಂದ `ಚೆಲುವಿ~ ಸಂಜೆ 6ಕ್ಕೆ ಪ್ರಸಾರಗೊಳ್ಳಲಿದೆ. `ಪಲ್ಲವಿ ಅನುಪಲ್ಲವಿ~ ಜುಲೈ 2ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವತಿಯೊಬ್ಬಳು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತರುಣನನ್ನು ಮದುವೆಯಾಗುತ್ತಾಳೆ. ಆಕೆ ಊರಿನ ಸರಪಂಚರ ಮನೆತನಕ್ಕೆ ಸೊಸೆಯಾಗಿ ಹೋದ ನಂತರ ಎದುರಿಸುವ ಸವಾಲುಗಳ ಕಥೆ `ಚೆಲುವಿ~. ಸಿ.ಎಸ್. ಕಾರ್ತಿಕ್ ನಿರ್ದೇಶಿಸುತ್ತಿರುವ ಈ ಧಾರಾವಾಹಿ ಗ್ರಾಮೀಣ ಸೊಗಡು ಹೊಂದಿದೆಯಂತೆ.`ಪಲ್ಲವಿ ಅನುಪಲ್ಲವಿ~ ಧಾರಾವಾಹಿ ನಂದಿನಿ ಮತ್ತು ಕಿಶೋರ ಎನ್ನುವ ಯುವ ಜೋಡಿಯ ಬದುಕಿನಲ್ಲಿನ ವಿಧಿಯ ಕಣ್ಣಾಮುಚ್ಚಾಲೆಯ ಕಥೆ ಒಳಗೊಂಡಿದೆ. ಮಧುಸೂದನ್ ಈ ಧಾರಾವಾಹಿಯ ನಿರ್ದೇಶಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry