ಬುಧವಾರ, ನವೆಂಬರ್ 13, 2019
25 °C

ಪ್ರೇಮ ವಿವಾಹಕ್ಕೆ ವಿರೋಧ: ಆತ್ಮಹತ್ಯೆ

Published:
Updated:

ಕೋಲಾರ: ಪ್ರೇಮಿಸದ ಯುವಕನೊಡನೆ ಮದುವೆಯಾಗಲು ಪೋಷಕರು ಒಪ್ಪಲಿಲ್ಲವೆಂಬ ಕಾರಣಕ್ಕೆ ಯುವತಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೋಟಿಗಾನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಈ. ಶ್ವೇತ (18) ಮೃತ ಯುವತಿ. ಗ್ರಾಮದ ಯುವಕನೊಬ್ಬನನ್ನು ಆಕೆ ಪ್ರೇಮಿಸುತ್ತಿದ್ದು, ಇಬ್ಬರ ಮದುವೆಗೆ ತನ್ನ ಮನೆಯವರು ಒಪ್ಪಲಿಲ್ಲವೆಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.ಗುರುವಾರ ಯುವಕ ಯುವತಿಯ ಮನೆಗೆ ಬಂದು ಮದುವೆಯ ವಿಚಾರವನ್ನು ಪ್ರಸ್ತಾಪಿಸಿದ್ದ. ಅದನ್ನು ಯುವತಿಯ ಮನೆಯವರು ವಿರೋಧಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)