ಪ್ರೇಮ ಸಪ್ತಾಹದಲ್ಲಿ...

7

ಪ್ರೇಮ ಸಪ್ತಾಹದಲ್ಲಿ...

Published:
Updated:

ಅಂದ ಹಾಗೆ, ವ್ಯಾಲೆಂಟೈನ್ಸ್ ಡೇಗೆ ಈಗ ಸಪ್ತಾಹದ ಖದರು ಅಂದೆನಲ್ಲ? ಫೆ. 7ಕ್ಕೆ ಆರಂಭವಾಗಿ ಫೆ. 14ರ ವರೆಗೆ ನಡೆಯುವ ಪ್ರೇಮ ಸಪ್ತಾಹದಲ್ಲಿ ಯಾವ ದಿನ ಏನು ಕಾರ್ಯಕ್ರಮ?ಸೋಮವಾರ ’ಪುಷ್ಪಾರ್ಚನೆ’, ಮಂಗಳವಾರ ಪ್ರೇಮ ನಿವೇದನೆ, ಬುಧವಾರ ಚಾಕೊಲೇಟ್ ಅರ್ಪಣೆ, ಗುರುವಾರ ಉಡುಗೊರೆ, ಶುಕ್ರವಾರ ಬದ್ಧತಾ ವಚನ ಸ್ವೀಕಾರ, ಶನಿವಾರ ಪ್ರೇಮಾಲಿಂಗನ (ಹಗ್ಗಿಂಗ್ ಡೇ), ಭಾನುವಾರ ಮತ್ತೇರಿಸುವ ಮುತ್ತಿನ ಅರ್ಚನೆ (ಕಿಸ್ಸಿಂಗ್ ಡೇ), ಸೋಮವಾರ ಅಧಿಕೃತ ಪ್ರೇಮೋತ್ಸವ.ಈ ಗುಲಾಬಿಯು ನಿನಗಾಗಿ

ಇದು ಚೆಲ್ಲುವ ಪರಿಮಳ ನಿನಗಾಗಿ

ಈ ಹೂವಿನಂಥಾ ಪ್ರೇಯಸಿಎಂದು ಅವನು ಪ್ರೇಮಪುಷ್ಪ ಗುಲಾಬಿಯನ್ನು ಸೋಮವಾರ ಅವಳ ಕೈಗಿತ್ತು ರಂಗಾಗುವ ಹೊತ್ತಿಗೆ ಸೂರ್ಯ ನೆತ್ತಿ ಮೇಲೆ ಬಿಸಿಲ ಮಳೆಗರೆದಿದ್ದ. ಅವಳು ಚೆಂಗುಲಾಬಿಯ ಪಕಳೆಯೆಂಬೋ ಕೆನ್ನೆ ಸವರಿದಾಗ ಅವನು ಕೆಂಪಾದ... ಕೆಂಪಾದವೋ ಎಲ್ಲ ಕೆಂಪಾದವೋ...‘ನಮ್ಮ ಪ್ರೇಮ,ಪ್ರದರ್ಶನಕ್ಕಿರುವ ಬಾಬತ್ತು ಅಲ್ಲ; ಅದಕ್ಕೆ ಒಂದು ದಿನ, ಮತ್ತೊಂದು ಸಪ್ತಾಹದ ಚೌಕಟ್ಟು ಬೇಡ. ನಮ್ಮದು ನಿತ್ಯ ನೂತನ ಪ್ರೇಮ; ಮುಕ್ಕಾಗದ, ಸುಕ್ಕೇ ಇರದ ಪ್ರೀತಿಯಿಂದ ಕಟ್ಟಿದ ಪ್ರೇಮಸೌಧ ನಮ್ಮದು’ ಎಂದು ಒಟ್ಟೊಟ್ಟಿಗೇ ರಂಗೇರುವ ಜೋಡಿಗಳು ಕೆಂಗುಲಾಬಿಯ ಗೋಜಿಗೇ ಹೋಗಲಿಲ್ಲವೆನ್ನಿ.ಅವರಿಗೆ ಬಾಳಿನುದ್ದಕ್ಕೂ ನಿತ್ಯ ವಸಂತದ ಪ್ರತೀಕ್ಷೆ... ಮಹತ್ವಾಕಾಂಕ್ಷಿ ವ್ಯಾಲೆಂಟೈನ್‌ಗಳು! ಹೌದಲ್ಲ?ನಾನು ಬಡವ, ಆಕೆ ಬಡವಿ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕುಎಂದ ವರಕವಿ ಬೇಂದ್ರೆ ಅವರ ಜೀವನಸಾರವೂ, ಕಾವ್ಯಸಾರವೂ ಅದೇ ಆಗಿತ್ತಲ್ಲ? ಜಾತಿ ನೀತಿಯನ್ನು ಲೆಕ್ಕಿಸದ ಪ್ರೀತಿಗೆ ಆಸ್ತಿ ಅಂತಸ್ತಿನ ಹಂಗು ಬೇಕಿಲ್ಲ ನಿಜ. ಹೀಗಾದಾಗಲೇ ನಿಜದ ಸಂತಸದಲ್ಲಿ ಮಲ್ಲಿಗೆ ಬಿರಿಯಬಲ್ಲದು, ಪ್ರೇಮದ ಕಂಪು ಬೀರಬಲ್ಲದು... ಏನಂತೀರಾ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry