ಸೋಮವಾರ, ಮೇ 17, 2021
31 °C

ಪ್ರೇಮ ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಚಿತ್ರಕ್ಕೆ ಹೂಡಿರುವ ಬಂಡವಾಳ ಶೇ 60ರಷ್ಟಾದರೂ ವಾಪಸು ಬರಲಿ'. ಲಹರಿ ಕಂಪನಿಯ ವೇಲು ಅವರ ಮಾತಿನಲ್ಲಿ ಹಲವು ಅರ್ಥಗಳಿದ್ದವು. ಅವರು ಮಾತನಾಡುತ್ತಿದ್ದುದು `ಪ್ರೇಮಾಧಿಪತಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ.ಮಾಲೂರು ತಾಲ್ಲೂಕಿನ ದೊಡ್ಡಹಾನವಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ನಾರಾಯಣ ಸ್ವಾಮಿ ಚಿತ್ರದಲ್ಲಿ `ಪ್ರೇಮಾಧಿಪತಿ'. ನಾಯಕ ಪಾತ್ರದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನೂ ರಚಿಸುವ ಮೂಲಕ ಅವರು ಚಿತ್ರಾಧಿಪತಿಯೂ ಆಗಿದ್ದಾರೆ.

ಚಿತ್ರಕ್ಕೆ ಬಂಡವಾಳ ಹೂಡಿರುವುದು ಅವರ ಕುಟುಂಬವೇ. ನಟನೆಯ ಅನುಭವವಿಲ್ಲದ ನಾರಾಯಣ ಸ್ವಾಮಿ, ಚಿತ್ರರಂಗದಲ್ಲಿ ಕಣಕ್ಕಿಳಿಯುವ ಬಯಕೆಯಿಂದಲೇ ಸಮರಸಿಂಹ ರೆಡ್ಡಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ.50 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಕೋಲಾರ, ಬಂಗಾರ ಪೇಟೆ, ಮಾಲೂರು ಸುತ್ತಮುತ್ತ ದೃಶ್ಯ ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ಒಂದು ಕೋಟಿ ರೂಪಾಯಿ ಹೂಡಲಾಗಿದೆ.

ಚಿತ್ರದ ವಸ್ತು ಪ್ರೇಮ ಕಥಾನಕವಾದರೂ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ, ಹೆಣ್ಣಿನ ಬಗ್ಗೆ ತಾತ್ಸಾರ ಮನೋಭಾವ ಸಲ್ಲ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ... ಹೀಗೆ ಸದಾಶಯದ ಅಂಶಗಳನ್ನು ಹೇಳಲು ಚಿತ್ರವನ್ನು ಬಳಸಿಕೊಳ್ಳಲಾಗಿದೆ ಎಂದು ಸಮರಸಿಂಹ ರೆಡ್ಡಿ ಹೇಳಿದರು.ಈ ತಿಂಗಳ ಕೊನೆಯಲ್ಲಿ ಇಲ್ಲವೇ ಜುಲೈ ಆರಂಭದಲ್ಲಿ `ಪ್ರೇಮಾಧಿಪತಿ' ಬಿಡುಗಡೆ ಆಗಲಿದೆಯಂತೆ. ಚಿತ್ರದ ನಾಯಕಿ ಆಶಾ. ಕೀಬೋರ್ಡ್ ಪ್ಲೇಯರ್ ಮಾಲೂರು ಮಂಜು ಸಂಗೀತ ನೀಡುವ ಮೂಲಕ ಬಡ್ತಿ ಪಡೆದಿದ್ದಾರೆ. ಸಾಲೋಮಾನ್ ನಿರ್ದೇಶಿಸಿರುವ ಚಿತ್ರದಲ್ಲಿ ಸತ್ಯಜಿತ್, ವೀಣಾ ಸುಂದರ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್ ಮತ್ತಿತರರು ನಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.