ಶುಕ್ರವಾರ, ಜೂನ್ 18, 2021
23 °C

ಪ್ರೇಯಸಿಯ ಇರಿದು ಕೊಂದ ಪ್ರಿಯಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದಿರಾನಗರದ ನ್ಯೂ ಬಿನ್ನಮಂಗಲದಲ್ಲಿ ಗುರುವಾರ ಶೋಭಾ (36) ಎಂಬುವರಿಗೆ  ಆಕೆಯ ಪ್ರಿಯಕರ ಮಂಜುನಾಥ್‌ (42)  ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಕೂಲಿ ಕಾರ್ಮಿಕ ಮಾರಪ್ಪ ಎಂಬು­ವರನ್ನು ವಿವಾಹವಾಗಿದ್ದ ಶೋಭಾ, ವರ್ಷಗಳ ಹಿಂದೆ ಅವರಿಂದ ದೂರಾಗಿ ಮಂಜುನಾಥ್‌ ಜತೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಂಜುನಾಥ್‌ ಮತ್ತು ಶೋಭಾ ಮಧ್ಯೆ ಜಗಳವಾಗಿತ್ತು. ಗುರುವಾರ ರಾತ್ರಿ ಮದ್ಯಪಾನ

ಮಾಡಿ ಮನೆಗೆ ಬಂದಿರುವ ಮಂಜುನಾಥ್‌, ಶೋಭಾ ಜತೆಗೆ ಜಗಳ ತೆಗೆದಿದ್ದಾನೆ.

 

ಜಗಳ ವಿಕೋಪಕ್ಕೆ ತಿರುಗಿದಾಗ ಆತ ಚಾಕುವಿನಿಂದ ಶೋಭಾ  ಅವರ ಹೊಟ್ಟೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವವಾಗಿದ್ದ ಶೋಭಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. ಘಟನೆ ನಂತರ ತಲೆಮರೆಸಿ­ಕೊಂಡಿರುವ ಮಂಜುನಾಥ್‌ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.