ಬುಧವಾರ, ಆಗಸ್ಟ್ 21, 2019
22 °C

ಪ್ರೇರಣಾ ಟ್ರಸ್ಟ್: ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

Published:
Updated:

ಬೆಂಗಳೂರು: ಪ್ರೇರಣಾ ಸಂಸ್ಥೆಯು ಸರಳಾ ಟ್ರಸ್ಟ್ ಸಹಯೋಗದಲ್ಲಿ ಶೈಕ್ಷಣಿಕ ನೆರವು ಪಡೆದುಕೊಂಡು ಸಾಧನೆಗೈದ ವಿದ್ಯಾರ್ಥಿನಿಯರನ್ನು ಗೌರವಿಸುವ ಕಾರ್ಯಕ್ರಮವನ್ನು ಈಚೆಗೆ ನಗರದ ಬಾಪು ಶಾಲೆಯಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್ ಕುಲಕರ್ಣಿ, `ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳ  ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದು, ಎಲ್ಲರಿಗೂ ಉತ್ತಮ ಉದ್ಯೋಗ ದೊರೆತಿದೆ' ಎಂದು ಸಂತಸ ಹಂಚಿಕೊಂಡರು. ಟ್ರಸ್ಟ್‌ನ ಸರಳಾ ಟಂಡನ್, `ಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕಾಗಿ ಅಲ್ಲ.

ಅದು ಜೀವನದ ಪರಿವರ್ತನೆ. ಜೀವನವೀಡಿ ಕಲಿಯುವಂತದ್ದು ಬಹಳಷ್ಟಿರುತ್ತದೆ. ಹಾಗಾಗಿ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ' ಎಂದು ಕಿವಿಮಾತು ಹೇಳಿದರು. ಈ ಎರಡು ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ 5 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ. ಪ್ರತಿ ವರ್ಷ 300 ರಿಂದ 400 ವಿದ್ಯಾರ್ಥಿಗಳು ಪ್ರೇರಣಾದಿಂದ ನೆರವು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

Post Comments (+)