ಪ್ರೊ .ಗೋವಿಂದ ವರದಿ ಸಲ್ಲಿಸಿಲ್ಲ- ಸಚಿವ ಕಾಗೇರಿ

7

ಪ್ರೊ .ಗೋವಿಂದ ವರದಿ ಸಲ್ಲಿಸಿಲ್ಲ- ಸಚಿವ ಕಾಗೇರಿ

Published:
Updated:

ಶಿರಸಿ: `ದೇಶದಲ್ಲಿ ಏಕ ಶಿಕ್ಷಣ ವ್ಯವಸ್ಥೆ ರೂಪಿಸುವ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಕ್ಕೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆ ಅಧ್ಯಯನಕ್ಕೆ ರಚಿಸಿರುವ ಪ್ರೊ. ಆರ್. ಗೋವಿಂದ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ವರದಿಯ ಕರಡು ಪ್ರತಿ ಮಾತ್ರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.ರಾಜಕೀಯ ವ್ಯಕ್ತಿಗಳು, ಕೆಲ ಸಾಹಿತಿಗಳು ಆತುರದಲ್ಲಿ ಸಭೆ ಸೇರಿ ಈ ವರದಿ ತಿರಸ್ಕರಿಸಬೇಕು ಎಂದು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವುದಾಗಿ ಅವರು ಹೇಳಿದರು.ಪ್ರೊ. ಗೋವಿಂದ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಶಿಕ್ಷಣ ವ್ಯವಸ್ಥೆ ಕುರಿತು ಸಲಹೆ ನೀಡಿದ ಅನುಭವ ಹೊಂದಿದ್ದಾರೆ. ಅವರ ನೇತೃತ್ವದ ಸಮಿತಿಯು ವಿವಿಧ ಹಂತಗಳಲ್ಲಿ ತಜ್ಞರ ಜೊತೆ ಚರ್ಚಿಸಿ ಕರಡು ಸಿದ್ಧಪಡಿಸಿದೆ.  ಕರಡು ಪ್ರತಿ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.`ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಪೂರ್ವದಲ್ಲೇ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಕೆಲ ಸಾಹಿತಿಗಳು ಸಭೆ ಸೇರಿ ವರದಿ ತಿರಸ್ಕರಿಸಬೇಕು ಎಂಬ ನಿರ್ಣಯಕ್ಕೆ ಬಂದಿದ್ದಾರೆ.

 

ಈ ವರದಿ ಕೇವಲ ಶಾಲೆ ವಿಲೀನಕ್ಕೆ ಮಾತ್ರ ಸೀಮಿತವಾಗಿಲ್ಲ. ಒಟ್ಟಾರೆ ಶಾಲಾ ಶಿಕ್ಷಣ ವ್ಯವಸ್ಥೆ ಕುರಿತ ವರದಿ ಇದಾಗಲಿದೆ. ಕರ್ನಾಟಕದಲ್ಲಿ ವ್ಯವಸ್ಥಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದು, ಹೊಸ ಪದ್ಧತಿಗೆ  ತಾತ್ವಿಕ ಒಪ್ಪಿಗೆ ನೀಡಿಲ್ಲ. ಏಕಾಏಕಿ ಬದಲಾವಣೆ ಕೂಡ ಸಾಧ್ಯವಿಲ್ಲ. 3-4 ವರ್ಷಗಳಲ್ಲಿ ಹೊಸ ಪದ್ಧತಿ ಜಾರಿಗೊಳಿಸಲಾಗುವದು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ~ ಎಂದು ಕಾಗೇರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry