ಪ್ರೊ ಬಿ.ಆರ್.ರಾಮಚಂದ್ರೇಗೌಡ ನಿಧನ

7

ಪ್ರೊ ಬಿ.ಆರ್.ರಾಮಚಂದ್ರೇಗೌಡ ನಿಧನ

Published:
Updated:

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ ಬಿ.ಆರ್. ರಾಮಚಂದ್ರೇಗೌಡ (74) ಅವರು ಶನಿವಾರ ನಿಧನರಾದರು. ಅವರು ಪತ್ನಿ, ವಾರ್ತಾ ಇಲಾಖೆ ಜಂಟಿ ನಿರ್ದೇಶಕಿ ಬಿ.ಆರ್.ಮಮತಾ ಸೇರಿದಂತೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು.ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ಕೆಲ ವರ್ಷ ಕಾಲ  ಬೆಂಗಳೂರಿನ  ಸರ್ಕಾರಿ ಕಲಾ  ಕಾಲೇಜಿನ  ಪ್ರಾಂಶುಪಾಲರಾಗಿದ್ದರು.  ಹಾಸನ, ತುಮಕೂರು ಸರ್ಕಾರಿ ಕಾಲೇಜುಗಳಲ್ಲಿಯೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.ಮೃತರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮದಲ್ಲಿ ಭಾನುವಾರ (ಅ.23) ಮಧ್ಯಾಹ್ನ ನಡೆಯಲಿದೆ. ಕುಟುಂಬದವರ ಸಂಪರ್ಕಕ್ಕೆ: 99800 82368.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry