ಸೋಮವಾರ, ಮೇ 10, 2021
21 °C

ಪ್ರೋತ್ಸಾಹಧನ ಕಡಿತ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಆಶಾ~ ಕಾರ್ಯಕರ್ತೆಯರ ಪ್ರೋತ್ಸಾಹಧನದ ರೂ 650ರಲ್ಲಿ ರೂ 200ನ್ನು ಸರ್ಕಾರ ಈಚೆಗೆ ಕಡಿಮೆ ಮಾಡಿರುವುದು ಖಂಡನೀಯ ಎಂದು ನಗರದಲ್ಲಿ ಮಂಗಳವಾರ `ಆಶಾ~ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.ಕನಿಷ್ಠ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾದ ಸರ್ಕಾರವೇ, ಪ್ರೋತ್ಸಾಹಧನದಲ್ಲೂ ಕಡಿತ ಮಾಡಿದೆ. ಇದು ಖಂಡನೀಯ. ಹಗಲು-ರಾತ್ರಿ ಎನ್ನದೇ ಗ್ರಾಮೀಣ ಭಾಗಗಳಲ್ಲಿ ತಾಯಿ-ಮಗುವಿನ ಆರೋಗ್ಯ ಕಾಪಾಡುತ್ತಿರುವ `ಆಶಾ~ ಕಾರ್ಯಕರ್ತೆಯರಿಗೆ ಸರ್ಕಾರ ಸಾಮಾಜಿಕ ಭದ್ರತೆ ಮತ್ತು ಕನಿಷ್ಠ ವೇತನ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಾರ್ಯಕರ್ತೆಯರ ಖಾತೆಗೆ ತಪ್ಪದೇ ಪ್ರತಿತಿಂಗಳು 5ನೇ ತಾರೀಖಿನ ಒಳಗೆ ಪ್ರೋತ್ಸಾಹಧನ ಜಮೆ ಮಾಡಬೇಕು. ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆ ನೌಕರರೆಂದು ಪರಿಗಣಿಸಬೇಕು. ಪ್ರೋತ್ಸಾಹಧನ ಬದಲಿಗೆ ಪ್ರತಿ ತಿಂಗಳು ರೂ 3ಸಾವಿರ ಸಂಬಳ ನಿಗದಿಪಡಿಸಬೇಕು.ಇಂಡಿಯನ್ ಲೇಬರ್ ಆರ್ಗನೈಸೇಷನ್ ನಿಗದಿಪಡಿಸಿರುವ ಕನಿಷ್ಠ ಕೂಲಿಯನ್ನು ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿತ್ತು. ನಂತರ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಫೆಡರೇಷನ್‌ನ ಅಧ್ಯಕ್ಷ ಆವರಗೆರೆ ವಾಸು, ಸಂಘಟನಾ ಕಾರ್ಯದರ್ಶಿ ಕೆ. ನೀಲಾಂಬಿಕಾ, ಐರಣಿ ಚಂದ್ರು, ಮಹಮ್ಮದ್ ಬಾಷಾ, ಮಮತಾ, ರೂಪಾ, ಹಾಲಮ್ಮ, ಗೀತಾ, ಲಕ್ಷ್ಮೀದೇವಿ, ಮಂಜುಳಾ, ಗಿರಿಜಮ್ಮ, ಕೊಟ್ರಪ್ಪ ರೆಡ್ಡಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.