ಪ್ರೌಢಶಾಲೆಯೊಂದಿಗೆ ಪಿಯು ಶಿಕ್ಷಣದ ಸಮಗ್ರೀಕರಣ

7

ಪ್ರೌಢಶಾಲೆಯೊಂದಿಗೆ ಪಿಯು ಶಿಕ್ಷಣದ ಸಮಗ್ರೀಕರಣ

Published:
Updated:

ದಾವಣಗೆರೆ: ಪ್ರೌಢಶಾಲಾ ಶಿಕ್ಷಣ ವ್ಯಾಪ್ತಿಯಲ್ಲಿಯೇ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಒಳಗೊಳಿಸಲು (ಸಮಗ್ರೀಕರಣ) ರಾಜ್ಯ ಸರ್ಕಾರ ಮುಂದಾಗಿದೆ.ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ರಚನಾತ್ಮಕ ಬದಲಾವಣೆ ಸಂಬಂಧ ನವದೆಹಲಿಯ ನ್ಯೂಫಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್. ಗೋವಿಂದ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಪ್ರಸ್ತುತ, 11 ಮತ್ತು 12ನೇ ತರಗತಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. 16ರಿಂದ 18 ವಯೋಮಾನದವರು ಈ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಯಸ್ಸು ಸೂಕ್ಷ್ಮ ಸಂವೇದನೆಯ, ಅತಿ ನವಿರಾದ ಭಾವನೆಗಳ ಕಾಲವಾಗಿದ್ದು, ಸೂಕ್ತ ಮಾರ್ಗದರ್ಶನ ವ್ಯಕ್ತಿಗತ ಸಲಹೆ ಬೇಕಾಗುತ್ತದೆ. ಪದವಿಪೂರ್ವ ಶಿಕ್ಷಣ ಅತ್ತ ಶಾಲಾ ಶಿಕ್ಷಣವೂ ಅಲ್ಲ; ಇತ್ತ ಪದವಿ ಶಿಕ್ಷಣವೂ ಅಲ್ಲ. ಇದೊಂದು ಅತಂತ್ರ ಸ್ಥಿತಿ. ಭಾವನೆಗಳ ತಾಕಲಾಟಕ್ಕೆ ಪಕ್ಕಾಗುವ ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆಪ್ತಸಲಹೆ ಅಗತ್ಯ. ಆದ್ದರಿಂದ ಶಾಲಾ ಶಿಕ್ಷಣದ ವ್ಯಾಪ್ತಿಗೆ ಪಿಯು ಶಿಕ್ಷಣ ಒಳಪಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.ಏಕೆ ಈ ಚಿಂತನೆ?

ಪ್ರಸ್ತುತ ಪಿಯು ವ್ಯವಸ್ಥೆ ಏಕಾಂಗಿಯಾಗಿ ಉಳಿದಿರುವುದರಿಂದ, ವಿದ್ಯಾರ್ಥಿಗಳು ಮಾನಸಿಕ ಕ್ಷೇಮ, ಅನುಕೂಲಕರ ವಾತಾವರಣ ಹೊಂದಲಾರರು. ಹೀಗಾಗಿ, 11 ಮತ್ತು 12ನೇ ತರಗತಿಗಳು  9 ಮತ್ತು 10ನೇ ತರಗತಿಗಳ ಜತೆ ನಡೆಯಬೇಕು. ಇದರಿಂದ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲ ಆಗುತ್ತದೆ. ಪೋಷಕರು, ಮಕ್ಕಳನ್ನು 10ನೇ ತರಗತಿ ನಂತರ ಬೇರೆಡೆ ಸೇರಿಸುವ ಆತಂಕವೂ ದೂರಾಗಲಿದೆ. ಈ ಸಮಗ್ರೀಕರಣದಿಂದ ಔದ್ಯೋಗಿಕ ಶಿಕ್ಷಣ, ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳಿಗೆ ಅಡೆತಡೆ ಇಲ್ಲದ ಪ್ರದೇಶದಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.11 ಮತ್ತು 12ನೇ ತರಗತಿ, ಸೇವಾಕ್ಷೇತ್ರದ ಉದ್ಯೋಗಗಳಿಗೆ ಜಿಗಿಹಲಗೆ. ಐಟಿಐ ಸರ್ಟಿಫಿಕೆಟ್‌ಗೆ, ಪಾಲಿಟೆಕ್ನಿಕ್‌ಗಳಿಗೆ, ಶಿಕ್ಷಕ ತರಬೇತಿಗೆ, ತೋಟಗಾರಿಕೆ ಇಲಾಖೆ ಡಿಪ್ಲೊಮಾ ಮೊದಲಾದ ಸಮಾನ ಶಿಕ್ಷಣ ಕ್ರಮಗಳಿಗೆ ಬಾಗಿಲಾಗಿದೆ. ಪದವಿ ಶಿಕ್ಷಣಕ್ಕೆ ಪ್ರವೇಶ ದ್ವಾರವಾಗಿದೆ. ಹೀಗಾಗಿ, ಇದನ್ನು `ಪದವಿ ಪೂರ್ವ~ ಎಂಬ ಹೆಸರಿನಿಂದ ಮುಕ್ತಿಗೊಳಿಸಬೇಕಿದೆ. ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ಈಗಾಗಲೇ ನಡೆಯುತ್ತಿದ್ದರೆ ಅಂತಹ ಕಾಲೇಜುಗಳಿಗೆ 9 ಮತ್ತು 10ನೇ ತರಗತಿ ತೆರೆಯಲು ಅನುಮತಿ ನೀಡಬಹುದು. 9,10, 11 ಮತ್ತು 12 ತರಗತಿ ಹೊಂದಿದವು `ಸಂಯುಕ್ತ ಉನ್ನತ ಪ್ರೌಢಶಾಲೆ~ ಎನಿಸಿಕೊಳ್ಳುತ್ತವೆ.ರಾಜ್ಯದಲ್ಲಿ 1,846 ಅನುದಾನರಹಿತ ಪಿಯು ಕಾಲೇಜುಗಳಿವೆ. ಇವುಗಳಲ್ಲಿ 951 ಕಾಲೇಜುಗಳು ಸ್ವತಂತ್ರ ಪ್ರೌಢಶಾಲೆಗಳು, 371 ಸಂಯುಕ್ತ (ಪದವಿ ಕಾಲೇಜಿನ ಆವರಣದಲ್ಲಿರುವವು). ಉಳಿದ 164 ಪಿಯು ಕಾಲೇಜುಗಳು ವಿಭಜಿತ (ಪದವಿ ಕಾಲೇಜುಗಳಿಂದ ಬೇರೆಯಾದವು). ಅವು ಸಹ ಸ್ವತಂತ್ರ ಪಿಯು ಕಾಲೇಜುಗಳೇ. ಕೆಲ ಪಿಯು ಕಾಲೇಜು ಆವರಣದಲ್ಲಿ ಪ್ರೌಢಶಾಲೆಗಳೂ ಸಹ ನಡೆಯುತ್ತವೆ. ಪ್ರೌಢಶಾಲಾ ವಿಭಾಗವಿಲ್ಲದ ಪಿಯು ಕಾಲೇಜುಗಳಿಗೆ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಬಹುದು. ಇವು `ಉನ್ನತ ಪ್ರೌಢಶಾಲೆ~ಗಳಾಗುತ್ತವೆ ಎಂದು ವಿವರಿಸಲಾಗಿದೆ.ಏನೇನು ಬದಲಾವಣೆ?


* ಸ್ನಾತಕೋತ್ತರ ಪದವಿಯುಳ್ಳ ಉಪನ್ಯಾಸಕರಿಗೆ ಬಿ.ಇಡಿ ಕಡ್ಡಾಯವಾಗಬೇಕು

* ಉನ್ನತ ಪ್ರೌಢಶಾಲೆಯ ಪ್ರಾಂಶುಪಾಲರು, 11 ಮತ್ತು 12ನೇ ತರಗತಿ ಬೋಧಕ ವರ್ಗದವರೇ ಆಗಿರಬೇಕು. ಆಡಳಿತಕ್ಕೆ ಅವರೇ ಹೊಣೆ. ಉಪ ಪ್ರಾಂಶುಪಾಲರು 9 ಮತ್ತು 10ನೇ ತರಗತಿ ಮೇಲ್ವಿಚಾರಣೆ ನಡೆಸಬೇಕು

* ಉಪ ಪ್ರಾಂಶುಪಾಲರು 9 ಮತ್ತು 10ನೇ ತರಗತಿ ಬೋಧಕರಿಂದಲೇ ಬರಬೇಕು

* ಪದವಿ ಕಾಲೇಜುಗಳಲ್ಲಿ ನಡೆಯುತ್ತಿರುವ ಪಿಯು ಕಾಲೇಜುಗಳ ಉನ್ನತ ಪ್ರೌಢಶಾಲೆಗಳ ಮೂಲಸೌಕರ್ಯ ಪ್ರತ್ಯೇಕವಾಗಿ ಕಲ್ಪಿಸಬೇಕು

* ಮಧ್ಯಾಹ್ನದ ಬಿಸಿಯೂಟ ಮೊದಲಾದ ವಿದ್ಯಾರ್ಥಿ ಪ್ರೇರಕ ಚಟುವಟಿಕೆಗಳನ್ನು 11 ಮತ್ತು 12ನೇ ತರಗತಿಗೂ ವಿಸ್ತರಿಸಬೇಕು

* 10ನೇ ತರಗತಿ ವಾರ್ಷಿಕ ಪರೀಕ್ಷೆ ಶಾಲಾ ಹಂತದಲ್ಲಿಯೇ ನಡೆಸಬಹುದು

* ತರಗತಿಗಳಿಗೆ ಆಧುನಿಕ ಬೋಧನಾ ಉಪಕರಣಗಳನ್ನು ಅಳವಡಿಸಬೇಕು. ಕಂಪ್ಯೂಟರ್‌ಗಳು, ಡಿಜಿಟನ್ ಬೋರ್ಡ್‌ಗಳು, ಅಂತರ್ಜಾಲ ಸೌಲಭ್ಯವಿರಬೇಕು

* ಬಿ.ಇಡಿ ತರಬೇತಿ ಹೊಂದದ ಉನ್ನತ ಪ್ರೌಢಶಾಲೆ ಶಿಕ್ಷಕರಿಗೆ ಕಿರು ಅವಧಿಯ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು. ಇದಕ್ಕಾಗಿ ಪ್ರತ್ಯೇಕ ಘಟಕ ತೆರೆಯಬೇಕುಒಂದೇ ಮಂಡಳಿ!

ಎಸ್ಸೆಸ್ಸೆಲ್ಸಿ ಮತ್ತು ಪಿಯುಗೆ ಒಂದೇ ಪರೀಕ್ಷಾ ಮಂಡಳಿ ಇರುವುದು ಅವಶ್ಯ. ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಉತ್ತರಪ್ರದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ವರದಿಯಲ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry