ಪ್ಲಾಟಿನಂ ಪ್ರೀತಿ

7

ಪ್ಲಾಟಿನಂ ಪ್ರೀತಿ

Published:
Updated:

ನಿಜ ಪ್ರೀತಿ ಹೃದಯದಿಂದ ಹುಟ್ಟುತ್ತದೆ. ಅಂಥ ಪ್ರೀತಿ ಎಂದೆಂದಿಗೂ ಕೊನೆಯಾಗುವುದೇ ಇಲ್ಲ. ಮನಸ್ಸಿನೊಳಗೆ ಹುಟ್ಟುವ ಪ್ರೀತಿಯನ್ನು ವ್ಯಕ್ತಪಡಿಸದೇ ಒಳಗೊಳಗೇ ಸಾಯಲು ಬಿಡಬಾರದು.ಪ್ರೀತಿಸುತ್ತಿರುವ ಹುಡುಗ/ಹುಡುಗಿಯೊಂದಿಗೆ ಪ್ರೀತಿ ನಿವೇದನೆ ಮಾಡಿಕೊಂಡಾಗ ಪ್ರೇಮಕ್ಕೆ ಸಂಬಂಧದ ಬೆಸುಗೆ ಬೀಳುತ್ತದೆ. ಈಗ ಗ್ರೀಟಿಂಗ್ ಕಾರ್ಡ್, ಗುಲಾಬಿ ಹೂ ಕೊಟ್ಟು `ಐ ಲವ್ ಯೂ' ಎಂದು ಪ್ರೇಮ ನಿವೇದನೆ ಮಾಡಿಕೊಳ್ಳುವುದು ಔಟ್ ಆಫ್ ಪ್ಯಾಷನ್. ಪ್ರೀತಿಸುವರರಿಗೆ ಪ್ಲಾಟಿನಂ ಆಭರಣಗಳನ್ನು ನೀಡಿ ನಿಮ್ಮ ಪ್ರೀತಿ ನಿವೇದನೆ ಮಾಡಿಕೊಳ್ಳಿ...

-ಹೀಗಂತ ಪ್ರೀತಿಯ ಪಾಠ ಹೇಳಿದವರು ಯಾರೋ `ಲವ್ ಗುರು' ಅಲ್ಲ. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ. 

`ಪರಸ್ಪರ ಪ್ರೀತಿಸುತ್ತಿದ್ದೇವೆ ಎನ್ನುವುದನ್ನು ಕಂಡುಕೊಂಡ ನಂತರ ಜೀವನಪೂರ್ತಿ ಜತೆಯಲ್ಲಿ ಇರಬೇಕೆಂದು ಬಯಸಿದ ಕ್ಷಣದಲ್ಲಿ ಸ್ಫುರಿಸುವ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಂತಹ ನೈಜ ಪ್ರೀತಿಯನ್ನು ಪ್ಲಾಟಿನಂ ಆಭರಣದಿಂದ ಆರಂಭಿಸಿ' ಎಂದು ಹೇಳುತ್ತಾ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾಗೆ ಪ್ಲಾಟಿನಂ ಉಂಗುರ ತೊಡಿಸಿದರು.ಅಂದಹಾಗೆ, ಅದು ಮಹಾಲಕ್ಷ್ಮಿ ಲೇಔಟ್‌ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಆಭರಣ್ ಜ್ಯುವೆಲರ್ಸ್‌ ಆಯೋಜಿಸಿದ್ದ `ಪ್ಲಾಟಿನಂ ಡೇ ಆಫ್ ಲವ್' ಸಮಾರಂಭ. ಪತ್ನಿ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಂಬ್ಳೆ ಪ್ರೀತಿಯ ದಿನಾಚರಣೆಯಂದು ಚೇತನಾಗೆ ಆಕರ್ಷಕ ಪ್ಲಾಟಿನಂ ಉಂಗುರ ತೊಡಿಸಿದರು.ಚೇತನಾ ಕೂಡ ಪತಿಯ ಕೈಗೆ ಪ್ಲಾಟಿನಂ ಉಂಗುರವನ್ನು ತೊಡಿಸಿ ಕಣ್ಣಲ್ಲೇ `ಲವ್ ಯೂ' ಎಂದರು. ಹೆಂಡತಿಯ ಕಣ್ಣಲ್ಲಿ ಜಿನುಗುತ್ತಿದ್ದ ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಂಡ ಕುಂಬ್ಳೆ ಸಹ `ಮಿ ಟೂ ಡಿಯರ್' ಅಂತ ಕಣ್ಣಿನಲ್ಲೇ ಸಂದೇಶವನ್ನು ದಾಟಿಸಿದರು.`ಪ್ರತಿಯೊಬ್ಬರು ಕೂಡ ನಿಜ ಪ್ರೀತಿಯ ಅನ್ವೇಷಣೆಯಲ್ಲಿರುತ್ತಾರೆ. ಪರಸ್ಪರರನ್ನು ಅರ್ಥ ಮಾಡಿಕೊಂಡ ನಂತರವೇ ಸ್ನೇಹ ಸಲುಗೆಗೆ ತಿರುತ್ತದೆ. ಒಬ್ಬರನ್ನೊಬ್ಬರು ಬಿಟ್ಟು ಇರಲಾಗದ ಸ್ಥಿತಿ ತಲುಪಿದಾಗ ಪ್ರೀತಿಯ ನಿವೇದನೆ ಮಾಡಿಕೊಳ್ಳಬೇಕು. ಅಂತ್ಯವಿರದ ಪ್ರೀತಿಯ ಶಕ್ತಿಯ ಬಗ್ಗೆ ನನಗೆ ನಂಬಿಕೆ ಇದೆ.

ಪ್ರೀತಿಯನ್ನು ಶಾಶ್ವತಗೊಳಿಸುವ ಪ್ರೀತಿಯ ಆಚರಣೆಗೆ ಪ್ಲಾಟಿನಂ ಆಭರಣಕ್ಕಿಂತ ಬೇರೊಂದು ಆಯ್ಕೆ ಇಲ್ಲ. ಆಭರಣ್ ಜ್ಯುವೆಲರ್ಸ್‌ನ ಹೊಸ ಪ್ಲಾಟಿನಂ ಸಂಗ್ರಹದಲ್ಲಿ ಇಂದಿನ ತಲೆಮಾರಿಗೆ ಇಷ್ಟವಾಗುವ ವಿನೂತನ ವಿನ್ಯಾಸಗಳ ಅಪರೂಪದ ಸಂಗ್ರಹವಿದೆ' ಎಂದು ಕುಂಬ್ಳೆ ಪ್ರೀತಿಯ ವ್ಯಾಖ್ಯಾನ ಮಾಡಿದರು.

`ನನಗೆ ಪ್ಲಾಟಿನಂ ಎಂಬುದು ಪ್ರೀತಿಯ ಪ್ರತಿಫಲನ. ಈ ಪ್ಲಾಟಿನಂ ಲವ್ ಬ್ಯಾಂಡ್‌ಗಳು ಸುಂದರವಾಗಿದ್ದು ನನ್ನ ಹೃದಯ ಕದ್ದಿವೆ. ಪ್ಲಾಟಿನಂ ಆಭರಣಗಳ ಸಂಗ್ರಹದಲ್ಲಿ ನನಗೆ ನೆಕ್ಲೆಸ್, ಉಂಗುರ, ಬಳೆ, ಪೆಂಡೆಂಟ್ ಹಾಗೂ ಆಕರ್ಷಕ ಓಲೆ ಇವೆಲ್ಲವೂ ಇಷ್ಟವಾದವು. ಇವತ್ತು ಪತಿಯೊಂದಿಗೆ ಹಂಚಿಕೊಂಡ ವಿಶೇಷ ಪ್ರೀತಿ ನನ್ನ ಜೀವನದ ಕೊನೆ ಕ್ಷಣದವರೆಗೂ ನೆನಪಿನಲ್ಲಿ ಉಳಿದಿರುತ್ತದೆ' ಎಂದರು ಚೇತನಾ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry