ಪ್ಲಾಟ್‌ಫಾರ್ಮ್‌ ಅಭಿವೃದ್ಧಿಗೆ ರೂ 1.98 ಕೋಟಿ

7
ರಾಷ್ಟ್ರೀಯ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಅಧ್ಯಕ್ಷ ಚಲುವಾದಿ ನಾರಾಯಣ ಸ್ವಾಮಿ

ಪ್ಲಾಟ್‌ಫಾರ್ಮ್‌ ಅಭಿವೃದ್ಧಿಗೆ ರೂ 1.98 ಕೋಟಿ

Published:
Updated:

ಗದಗ: ನಗರದ ರೈಲು ನಿಲ್ದಾಣ ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್  ಅಭಿವೃದ್ಧಿಗೆ ಕೇಂದ್ರ ಸರಕಾರ ರೂ. 1.90 ಕೋಟಿ ಅನುದಾನ ನೀಡಿದೆ ಎಂದು ರಾಷ್ಟ್ರೀಯ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಅಧ್ಯಕ್ಷ ಚಲುವಾದಿ ನಾರಾ ಯಣ ಸ್ವಾಮಿ ಹೇಳಿದರು.ನಗರದ ರೈಲು ನಿಲ್ದಾಣಕ್ಕೆ ಗುರು ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ರೈಲ್ವೆ ಪ್ರಯಾಣಿಕರಿಗೆ ನಿಲ್ದಾಣದ ಕುಂದುಕೊರತೆ  ಪರಿಶೀಲಿಸಿ ರೈಲ್ವೆ ಸೌಲಭ್ಯಗಳನ್ನು  ಒದಗಿಸಿ ಕೊಡು ವುದು ಸಮಿತಿ ಉದ್ದೇಶವಾಗಿದೆ.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅಧಿ ಕಾರಿಗಳ ಜತೆ ಚರ್ಚಿಸಿ  ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸು ತ್ತಾರೆ ಎನ್ನುವ ಭರವಸೆ  ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ರಾಜ್ಯದ ಕೆಲ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕುಡಿ ಯವ ನೀರು, ಶೌಚಾಲಯ ಹಾಗೂ ಇತರೆ ಸೌಲಭ್ಯ ಕೊಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದರು. ಬಳಿಕ ಗದಗ ರೈಲು ನಿಲ್ದಾಣದಲ್ಲಿನ ಅಂಗಡಿಗಳು, ಟಿಕೆಟ್ ಕೌಂಟರ್‌, ಕಾಯ್ದಿರಿಸುವ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಕೇವಲ ನೀರಿನ ಬಾಟಲ್‌ಗಳಲ್ಲದೆ  ಪ್ರಯಾಣಿಕರಿಗೆ ಬೇಕಾಗುವ ತಿಂಡಿ–ತಿನಿಸುಗಳನ್ನು ಸಹ ಇಡಬೇಕು ಎಂದು ಸೂಚಿಸಿದರು.

ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವು ದನ್ನು ಕಂಡು ಬೇಸರಗೊಂಡರು. ಶೌಚಾಲಯಕ್ಕೆ ಬೀಗ ಹಾಕಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಚಾರಣೆ ಕೌಂಟರ್‌ ನಲ್ಲಿ ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ ಹಾಗೂ ಟಿಕೆಟ್‌ ಕೌಂಟರ್‌ಗಳನ್ನು ಹೆಚ್ಚಿಸಬೇಕು ಎಂಬ ಪ್ರಯಾಣಿಕರಿಗೆ ಮನವಿಗೆ ಸ್ಪಂದಿಸಿದ ನಾರಾಯಣ ಸ್ವಾಮಿ, ನಾಲ್ಕು ಟಿಕೆಟ್ ಕೌಂಟರ್‌ ಗಳನ್ನು ಹೆಚ್ಚಿಸುವಂತೆ ಮೇಲಾಧಿಕಾರಿಗಳಿಗೆ ಸೂಚಿಸಲಾ ಗುವುದು ಎಂದು ಭರವಸೆ ನೀಡಿದರು.ಸಮಿತಿ ಸದಸ್ಯ ಅಲಂಖಾನ, ರೈಲ್ವೆ ಹೋರಾಟ ಸಮಿತಿಯ ನಿಸಾರ್‌ ಅಹಮದ್‌ ಖಾಜಿ ಸೇರಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry