ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾದ ಪುರಸಭೆ

7

ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾದ ಪುರಸಭೆ

Published:
Updated:
ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾದ ಪುರಸಭೆ

ಗಜೇಂದ್ರಗಡ: ಸರ್ಕಾರದ ಆದೇಶ ಮೀರಿ ಪ್ಲಾಸ್ಟಿಕ್  ಬಳಕೆಯಲ್ಲಿ ನಿರತರಾಗಿದ್ದ ಪಟ್ಟಣದ 20ಕ್ಕೂ ವ್ಯಾಪಾರಿ ಮಳಿಗೆಗಳ ಮೇಲೆ ಸೋಮವಾರ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ, ಪ್ಲಾಸ್ಟಿಕ್ ಕೈಚೀಲ  ವಶಪಡಿಸಿಕೊಂಡಿಕೊಂಡು ಸರ್ಕಾರಿ ಆದೇಶವನ್ನು ಪಾಲಿಸುವಂತೆ ಸೂಚಿಸಿದರು.ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವಂತೆ ಪುರಸಭೆ ಇಲ್ಲಿನ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಲ್ಲಿ ವ್ಯಾಪಾರಿಗಳ ಪಾತ್ರ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿತ್ತು.ಹೀಗಿದ್ದರೂ ಪಟ್ಟಣದ ವ್ಯಾಪಾರಿಗಳು ಮಾತ್ರ ಪುರಸಭೆ ಮನವಿಗೆ ಕವಡೆಕಾಸಿನ ಕಿಮತ್ತು ನೀಡಿರಲ್ಲಿಲ್ಲ. ಬದಲಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿರಾತಂಕವಾಗಿ ಮುಂದುವರೆಸಿದ್ದರು. ಇದರಿಂದ ಕುಪಿತಗೊಂಡ ಪುರಸಭೆ ಆಡಳಿತ ಗಜೇಂದ್ರಗಡದಲ್ಲಿ ಪ್ಲಾಸ್ಟಿಕ್ ಬಳಕೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.  ಚಿಕನ್ ಸೆಂಟರ್, ದಿನಸಿ ಅಂಗಡಿ, ಬಟ್ಟೆ ಅಂಗಡಿಗಳು ಸೇರಿದಂತೆ ಬಹುತೇಕ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಕೈಚೀಲ ಗಳನ್ನು  ವಶಪಡಿಸಿಕೊಳ್ಳಲಾಯಿತು.ಹಿರಿಯ ಆರೋಗ್ಯ ನಿರೀಕ್ಷಕ ಎಂ.ಬಿ.ನಿಡಶೇಸಿ, ಸಮುದಾಯ ಸಂಘಟನಾಧಿಕಾರಿ ಕೆ.ಓ.ಮುಲ್ಲಾ, ಎಂ.ಬಿ.ವಂಟಿ, ಶಿಲ್ಪಾಶ್ರೀ  ಉಪಸ್ಥಿತರಿದ್ದರು.ವ್ಯಾಪಾರಗಳಿಗೆ ಎಚ್ಚರಿಕೆ

ಪ್ಲಾಸ್ಟಿಕ್ ಬಳಸದಂತೆ ಪಟ್ಟಣದ ಎಲ್ಲ ವ್ಯಾಪಾರಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಪ್ಲಾಸ್ಟಿಕ್ ಬಳಕೆಗೆ ಮುಂದಾಗುವ ವ್ಯಾಪಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.ವಿರೋಧ: ಪ್ಲಾಸ್ಟಿಕ್  ನಿಷೇಧದ ಹಿನ್ನೆಲೆಯಲ್ಲಿ ಸೋಮವಾರ ಪುರಸಭೆ ಸಿಬ್ಬಂದಿ ವಿವಿಧ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ವಶಪಡಿಕೊಳ್ಳಲು ಮುಂದಾದಾಗ ಕೆಲ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿರೋಧ ನಡುವೆಯೂ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದರು. ಪ್ಲಾಸ್ಟಿಕ್ ಕೈ ಚೀಲ ಬಳಕೆಯ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry