ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ರಕ್ಷಿಸಿ

ಶುಕ್ರವಾರ, ಜೂಲೈ 19, 2019
29 °C

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ರಕ್ಷಿಸಿ

Published:
Updated:

ರಾಣೆಬೆನ್ನೂರು: ಸೂರ್ಯನಿಂದ ಹೊರ ಹೊಮ್ಮುವ  ಅಲ್ಟ್ರಾವೈಲೆಟ್ ಕಿರಣಗಳು ಮನುಷ್ಯನ ದೇಹದ ಮೇಲೆ ಬಿದ್ದಲ್ಲಿ, ಮನುಷ್ಯನ ಜೀವ ಕಣಗಳು ನಾಶವಾಗುವುದಲ್ಲದೇ, ರೋಗ ನಿರೋಧಕ ಶಕ್ತಿ ಕುಂಠಿತೊಳ್ಳುತ್ತದೆ ಎಂದು ಪ್ರಧಾನ ನ್ಯಾಯಾಧೀಶರಾದ ಉಷಾರಾಣಿ ಹೇಳಿದರು.ಪಟ್ಟಣದ ನಗರಸಭೆ ಡಾ.ಸರ್.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಗರಸಭೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಏರ್ಪಡಿಸಿದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅತಿನೇರಳೆ ಕಿರಣಗಳು ಭೂಮಿಯನ್ನು ಸ್ಪರ್ಶಿಸದಂತೆ ಹವಾಮಾನದಲ್ಲಿರುವ ಓಝೋನ್ ಪದರವು ತಡೆಯುತ್ತದೆ. ಈ ವಿಕಿರಣವನ್ನು ತಡೆಗಟ್ಟುವ ಸಲುವಾಗಿ ನಮ್ಮ ಪರಿಸರವನ್ನು ಕಾಪಾಡಲು, ಭೂಮಿಯ ತಾಪಮಾನ ಹೆಚ್ಚಾಗದಂತೆ ತಡೆಯಲು ಕಾಡನ್ನು ಬೆಳೆಸಿ ನಾಡನ್ನು ರಕ್ಷಿಸಬೇಕೆಂದರು.ಪೌರಾಯಕ್ತ ಎಂ.ಎಂ. ಕರಭೀಮಣ್ಣನವರ ಮಾತನಾಡಿ, 20 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಚೀಲದಂತಹ ಉತ್ಪಾದಿತ ವಸ್ತುಗಳಿಗೆ ನಿರ್ಬಂಧ ಜಾರಿಗೊಳಿಸಲಾಗಿದೆ. ಅದಕ್ಕಾಗಿ ಪ್ಲಾಸ್ಟಿಕ್ ಚೀಲ  ಉಪಯೋಗಿಸುವುದುನ್ನುವ್ಯಾಪಾರಸ್ಥರು ಕಡ್ಡಾಯವಾಗಿ ಇಂದಿನಿಂದಲೇ ತಿರಸ್ಕರಿಸಬೇಕು, ಪರಿಸರ ರಕ್ಷಣೆ ಹಾಗೂ ಜೀವ ಸಂಕುಲಕ್ಕೆ ಕುತ್ತು ತರುವ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕಾಗಿದೆ ಎಂದರು.ಹಿರಿಯ  ನ್ಯಾಯಾಧೀಶರಾದ ಎನ್.ಪಿ. ಕೋಪರ್ಡೆ, ಬಿ.ಎಸ್. ಹೊನ್ನುಸ್ವಾಮಿ, ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವಾನಂದ ಕುದರಿ ಮುರುಗೇಶ ಪರಿಸರ ದಿನಾಚರಣೆ ಕುರಿತು ಮಾತನಾಡಿದರು.

ನಗರಸಭಾ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲ ಆರ್.ಪಿ.ಹಿರೇಮಠ  ಪರಿಸರ ಮಾಲಿನ್ಯ ಕುರಿತು ಉಪನ್ಯಾಸ ನೀಡಿದರು.ಸಹಾಯಕ ಸರ್ಕಾರಿ ಅಭಿಯೋಜಕ ಮುರುಗೇಶ ಅಂಕದ, ಬಾಲಚಂದ್ರ. ಎಚ್.ಸಿ. ಶಿವಶರಣಯ್ಯ, ವಕೀಲರ ಸಂಘದ ಅಧ್ಯಕ್ಷ ವೀರನೌಡ ಪಾಟೀಲ, ಗಾಯತ್ರಮ್ಮ ಕುರುವತ್ತಿ, ಏಕಾಂತ ಮುದಿಗೌಡ್ರ, ನರಸಭಾ ಸದಸ್ಯೆ ಶಾರದಾ ಆನ್ವೇರಿ, ರವಿಕೀರ್ತಿ, ಜಗದೀಶಮ ಜಯದೇವಯ್ಯ ಸಾವಳಗಿಮಠ, ಮತ್ತಿತರರು ಉಪಸ್ಥಿತರಿದ್ದರು.

ವೀರೇಶ ಪ್ರಾರ್ಥಿಸಿದರು. ಕರಭೀಮಣ್ಣನವರ ಸ್ವಾಗತಿಸಿದರು. ಎಚ್. ಎಫ್. ಬಿದರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry