ಗುರುವಾರ , ಮೇ 13, 2021
35 °C

ಪ್ಲಾಸ್ಟಿಕ್ ಬಾಟಲಿ ನೀರಿನಿಂದ ಭವಿಷ್ಯದ ಪೀಳಿಗೆಗೆ ಕ್ಯಾನ್ಸರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಪ್ಲಾಸ್ಟಿಕ್ ಬಾಟಲಿ ನೀರು ಸೇವಿಸುವ ಗರ್ಭಿಣಿಯರಿಗೆ ಜನಿಸುವ ಮಗು ಮುಂದೆ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚು ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.ಪ್ಲಾಸ್ಟಿಕ್ ಬಾಟಲಿ ಇಲ್ಲವೇ ಸೂಪ್ ಬೌಲ್, ಸೂಪ್ ಕ್ಯಾನ್ ಇತ್ಯಾದಿ ಪ್ಲಾಸ್ಟಿಕ್ ಪರಿಕರಗಳಲ್ಲಿ ನೀರು, ಪಾನೀಯ, ಸೂಪ್ ಇತ್ಯಾದಿ ದ್ರವ ಪದಾರ್ಥಗಳನ್ನು ಸೇವಿಸುವ ಗರ್ಭಿಣಿಯರಿಗೆ ಜನಿಸುವ ಮಗುವು ಭವಿಷ್ಯದಲ್ಲಿ ಪ್ರಾಸ್ಟೇಟ್ (ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿ)  ಕ್ಯಾನ್ಸರ್‌ಗೆ ತುತ್ತಾಗುವ ಸಂಭವ ಹೆಚ್ಚು. ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಕಂಡುಬರುವ ಬಿಸ್‌ಫೆನೊಲ್ ಎಂಬ  ರಾಸಾಯನಿಕದ ದುಷ್ಪರಿಣಾಮವೇ ಇದಕ್ಕೆ ಕಾರಣ ಎಂದು ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.ಇಲಿಗಳ ದೇಹದೊಳಕ್ಕೆ ಮನುಷ್ಯನ್ ಪ್ರಾಸ್ಟೇಟ್ ಆಕರ ಕೋಶಗಳನ್ನು ಕಸಿ ಮಾಡಿ, ನಂತರ ಆ ಕೋಶಗಳಿಗೆ ಬಿಸ್‌ಫೆನಾಲ್ ಅಂಶ ಸೇರುವಂತೆ ಮಾಡಲಾಯಿತು. ಹೀಗೆ ಮಾಡಿದ ಕೆಲವು ವಾರಗಳ ನಂತರ ಆ ಪ್ರಾಸ್ಟೇಟ್ ಆಕರ ಕೋಶಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಕ್ಯಾನ್ಸರ್ ಸಂಭವನೀಯತೆಯು ಸಾಮಾನ್ಯ ಪ್ರಾಸ್ಟೇಟ್‌ಗಿಂತ ಮೂರು ಪಟ್ಟು ಹೆಚ್ಚು ಇದ್ದುದು ದೃಢಪಟ್ಟಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.