ಪ್ಲಾಸ್ಟಿಕ್ ರಾಶಿಯೇ ಜಾನುವಾರು ಆಹಾರ!

7

ಪ್ಲಾಸ್ಟಿಕ್ ರಾಶಿಯೇ ಜಾನುವಾರು ಆಹಾರ!

Published:
Updated:
ಪ್ಲಾಸ್ಟಿಕ್ ರಾಶಿಯೇ ಜಾನುವಾರು ಆಹಾರ!

ಕೊಳ್ಳೇಗಾಲ: ಪಟ್ಟಣದ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಸಹಿತ ಕಸದ ರಾಶಿ ಇದ್ದು ಅದನ್ನೇ ಮೇವಿನಂತೆ ಜಾನುವಾರುಗಳು ತಿನ್ನುವ ಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಯು ನಗರಸಭೆ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಟ್ಟಣದಲ್ಲಿ ನೆಲೆ ನಿಂತು ಅಭಿವೃದ್ಧಿಗೆ ಶ್ರಮಿಸುವ ಪೌರಾಯುಕ್ತರು ಇಲ್ಲದೇ ಇದ್ದರಿಂದ ಆಡಳಿತಯಂತ್ರ ಕುಸಿದಿದೆ.ನಗರಸಭೆ ತ್ಯಾಜ್ಯವಿಲೇವಾರಿ ಘಟಕ ಸ್ಥಾಪಿಸಿದೆ. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತಪ್ಪಿಸಲು ಲಕ್ಷಾಂತರ ಹಣ ತೆತ್ತು ಖರೀದಿಸಿದ ಕಂಟೈನರ್‌ಗಳು ತ್ಯಾಜ್ಯ ಘಟಕದಲ್ಲಿ ಕೊಳೆಯುವಂತಾಗಿದೆ. ಕೆಲವು ಬಡಾವಣೆಗಳಲ್ಲಿ ಮಾತ್ರ ಕಸವಿಲೇವಾರಿ ಸಮಪರ್ಕವಾಗಿ ನಡೆಯುತ್ತಿದ್ದು, ಕೆಲವೆಡೆ ಕಸ ಬೀದಿಗಳಲ್ಲಿ ರಾಶಿರಾಶಿಯಾಗಿ ಬಿದ್ದಿದೆ. ವರಾಹ ಸಂಕುಲ ಹೊರಳಾಡಿ ವಾತಾವರಣ ಹದಗೆಡಿಸುತ್ತಿವೆ.ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಕಸ ಸಂಗ್ರಹಕ್ಕೆ ನಗರಸಭೆ ಚಾಲನೆ ನೀಡಿದ್ದು, ಇದು ಈಗ ಸ್ಥಗಿತಗೊಂಡಿದೆ. ಬಸ್ತೀಪುರದಲ್ಲಿ ಮಾತ್ರ ಕಸ ವಿಲೇವಾರಿ ನಡೆಯುತ್ತಿದೆ.ಪಟ್ಟಣದಲ್ಲಿ ಬೀಡಾಡಿ ಜಾನುವಾರು ಹೆಚ್ಚಾಗಿದ್ದು ಇವುಗಳ ನಿಯಂತ್ರಣಕ್ಕೆ ನಗರಸಭೆ ಯಾವುದೇ ಕ್ರಮಕೈಗೊಂಡಿಲ್ಲ.ಸ್ವಚ್ಛತೆ ಬಗ್ಗೆ ನಗರಸಭೆಯಿಂದ ನಾಗರಿಕರಿಗೆ ತಿಳುವಳಿಕೆ ಮೂಡಿಸಿದ್ದು ಕಡಿಮೆ. ಸ್ವಚ್ಛತಾ ಅರಿವು ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ. ಪ್ಲಾಸ್ಟಿಕ್ ಚೀಲದ ಜತೆ ಜನರು ಎಸೆಯುವ ಬಲ್ಬ, ಗಾಜಿನ ಚೂರು ಬ್ಲೇಡ್ ಇನ್ನಿತರ ವಸ್ತುಗಳು ಪ್ರಾಣಿಗಳ ಹೊಟ್ಟೆ ಸೇರುವಂತಾಗಿದೆ.ಕೂಡಲೇ ನಗರಸಭೆ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳುವ ಮೂಲಕ ಮೂಕ ಜಾನುವಾರುಗಳನ್ನು ರಕ್ಷಿಸಬೇಕು ಎಂಬುದು ಪ್ರಾಣಿ ದಯಾಸಂಘ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry