ಪ್ಲೂಟೊಗೆ ಮತ್ತೊಬ್ಬ ಚಿಕ್ಕ ಚಂದ್ರಮ!

ಗುರುವಾರ , ಜೂಲೈ 18, 2019
28 °C

ಪ್ಲೂಟೊಗೆ ಮತ್ತೊಬ್ಬ ಚಿಕ್ಕ ಚಂದ್ರಮ!

Published:
Updated:

ವಾಷಿಂಗ್ಟನ್ (ಪಿಟಿಐ): ಹಿಮಭರಿತ ಕುಬ್ಜ ಗ್ರಹವಾದ ಪ್ಲೂಟೊದ ಐದನೇ ಹಾಗೂ ಅತಿಚಿಕ್ಕ ಗಾತ್ರದ ಚಂದ್ರನನ್ನು ಹಬಲ್ ದೂರದರ್ಶಕದ ನೆರವಿನಿಂದ ಪತ್ತೆಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ಪ್ರಕಟಿಸಿದ್ದಾರೆ.ದೂರದರ್ಶಕ ಸೆರೆಹಿಡಿದ ಛಾಯಾಚಿತ್ರಗಳಲ್ಲಿ ಕೇವಲ ಬೆಳಕಿನ ಬಿಂದುವಿನಂತೆ ತೋರುವ, ಆಕಾರ ಹೊಂದಿರದ ಈ ಕಿರು ಚಂದ್ರನ ಒಂದು ಬದಿಯಿಂದ ಇನ್ನೊಂದು ಬದಿಗೆ 10ರಿಂದ 25 ಕಿ.ಮೀ. ಅಂತರ ಇರಬಹುದು ಎನ್ನಲಾಗಿದೆ.ಪ್ಲೂಟೊ ಗ್ರಹ ಅಸ್ತಿತ್ವಕ್ಕೆ ಬಂದ ಹಾಗೂ ಆನಂತರ ಅದು ವಿಕಾಸಗೊಂಡ ಪ್ರಕ್ರಿಯೆಯನ್ನು ಅರಿಯಲು ಇದರಿಂದ ಸಾಧ್ಯವಾಗಬಹುದು ಎಂಬುದು ಸಂಶೋಧಕರ ಆಶಾಭಾವ.ಹಬಲ್ ದೂರದರ್ಶಕದ ವೈಡ್ ಫೀಲ್ಡ್ ಕ್ಯಾಮೆರಾ-3 ಈ ಚಂದ್ರಮನನ್ನು ಸೆರೆ ಹಿಡಿದಿದೆ. ಪ್ಲೂಟೊದಂತಹ ಚಿಕ್ರ ಗ್ರಹವೊಂದು ಸಂಕೀರ್ಣವಾದ ಉಪಗ್ರಹಗಳ ವ್ಯವಸ್ಥೆ ಹೊಂದಿರುವ ಬಗ್ಗೆ ವಿಜ್ಞಾನಿಗಳ ಅಚ್ಚರಿಯನ್ನು ಈ ಆವಿಷ್ಕಾರ ಮತ್ತಷ್ಟು ಹೆಚ್ಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry