ಪ್ಲೇ ಆಫ್ ಹಂತಕ್ಕೆ ಡೇರ್‌ಡೆವಿಲ್ಸ್

7

ಪ್ಲೇ ಆಫ್ ಹಂತಕ್ಕೆ ಡೇರ್‌ಡೆವಿಲ್ಸ್

Published:
Updated:
ಪ್ಲೇ ಆಫ್ ಹಂತಕ್ಕೆ ಡೇರ್‌ಡೆವಿಲ್ಸ್

ನವದೆಹಲಿ (ಪಿಟಿಐ): ಮಾಹೇಲ ಜಯವರ್ಧನೆ (56, 49ಎಸೆತ, 8 ಬೌಂಡರಿ) ಅವರ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಕಿಂಗ್ಸ್ ಇಲೆವೆನ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಇದರ ಜೊತೆಗೆ ಪ್ಲೇ ಆಫ್ ಹಂತಕ್ಕೂ ಲಗ್ಗೆ ಇಟ್ಟಿತು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 136 ರನ್ ಪೇರಿಸಿತು. ಡೇರ್‌ಡೆವಿಲ್ಸ್ 19 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು.

ಡೇರ್‌ಡೆವಿಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗನೇ ಪೆವಿಲಿಯನ್ ಹಾದಿ ತುಳಿದರೂ, ಜಯವರ್ಧನೆ ತಂಡಕ್ಕೆ ಆಸರೆಯಾದರು. ನಮನ್ ಓಜಾ (34, 29ಎಸೆತ, 3ಬೌಂಡರಿ, 2 ಸಿಕ್ಸರ್) ಇದಕ್ಕೆ ಸಾಥ್ ನೀಡಿದರು. ಕೇವಲ 22 ರನ್ ನೀಡಿ ಮೂರು ವಿಕೆಟ್ ಪಡೆದ ಪರ್ವಿಂದರ್ ಅವಾನಾ ಡೇರ್‌ಡೆವಿಲ್ಸ್ ತಂಡವನ್ನು ಅಲ್ಪ ಸಂಕಷ್ಟಕ್ಕೆ ಸಿಲುಕಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಉಮೇಶ್ ಯಾದವ್ (21ಕ್ಕೆ 3) ಮತ್ತು ವರುಣ್ ಆ್ಯರನ್ (19ಕ್ಕೆ 2) ಅವರ ಸಮರ್ಥ ಬೌಲಿಂಗ್ ಮುಂದೆ ಪರದಾಟ ನಡೆಸಿತು.

ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಡೇರ್‌ಡೆವಿಲ್ಸ್ ಬೌಲರ್‌ಗಳ ಬಿಗುವಾದ ದಾಳಿಯ ಕಾರಣ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ಆಗಲಿಲ್ಲ. ನಾಯಕ ಡೇವಿಡ್ ಹಸ್ಸಿ (ಅಜೇಯ 40, 35 ಎಸೆತ, 5 ಬೌಂ, 1 ಸಿಕ್ಸರ್) ಮಾತ್ರ ಅಲ್ಪ ಹೋರಾಟ ನಡೆಸಿದರು.

ಕಿಂಗ್ಸ್ ಇಲೆವೆನ್ ತಂಡಕ್ಕೆ ಮೊದಲು ಆಘಾತ ನೀಡಿದ್ದು ಆ್ಯರನ್. ಅವರು ಮನ್‌ದೀಪ್ ಸಿಂಗ್ (21) ಮತ್ತು ಶಾನ್ ಮಾರ್ಷ್ (13) ಅವರನ್ನು ಪೆವಿಲಿಯನ್‌ಗಟ್ಟಿದರು. ಆ ಬಳಿಕ ತಂಡ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ರನ್‌ವೇಗ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಹಸ್ಸಿಗೆ ತನ್ನ ಸಾಥ್ ನೀಡುವಲ್ಲಿ ಇತರ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ  8 ವಿಕೆಟ್‌ಗೆ 136

ಮನ್‌ದೀಪ್ ಸಿಂಗ್ ಸಿ ಸೆಹ್ವಾಗ್ ಬಿ ವರುಣ್ ಆ್ಯರನ್  21

ಶಾನ್ ಮಾರ್ಷ್ ಸಿ ಓಜಾ ಬಿ ವರುಣ್ ಆ್ಯರನ್  13

ನಿತಿನ್ ಸೈನಿ ಸಿ ಸೆಹ್ವಾಗ್ ಬಿ ಉಮೇಶ್ ಯಾದವ್  15

ಡೇವಿಡ್ ಹಸ್ಸಿ ಔಟಾಗದೆ  40

ಡೇವಿಡ್ ಮಿಲ್ಲರ್ ರನೌಟ್  04

ಅಜರ್ ಮಹಮೂದ್ ಸಿ ಪಠಾಣ್ ಬಿ ಉಮೇಶ್    ಯಾದವ್  09

ಗುರುಕೀರತ್ ಸಿಂಗ್ ಸ್ಟಂಪ್ ಓಜಾ ಬಿ ಪವನ್ ನೇಗಿ  08

ಪಿಯೂಷ್ ಚಾವ್ಲಾ ಸಿ ಓಜಾ ಬಿ ಉಮೇಶ್ ಯಾದವ್ 10

ಪ್ರವೀಣ್ ಕುಮಾರ್ ರನೌಟ್  08

ಪರ್ವಿಂದರ್ ಅವಾನಾ ಔಟಾಗದೆ  04

ಇತರೆ: (ಲೆಗ್‌ಬೈ-3, ವೈಡ್-1) 04

ವಿಕೆಟ್ ಪತನ: 1-24 (ಮಾರ್ಷ್; 3.1), 2-43 (ಮನ್‌ದೀಪ್; 5.3), 3-54 (ಸೈನಿ; 7.2), 4-63 (ಮಿಲ್ಲರ್; 9.4), 5-80 (ಅಜರ್; 11.5), 6-88 (ಗುರುಕೀರತ್; 12.5), 7-117 (ಚಾವ್ಲಾ; 17.1), 8-126 (ಪ್ರವೀಣ್; 18.1)

ಬೌಲಿಂಗ್: ಇರ್ಫಾನ್ ಪಠಾಣ್ 4-0-24-0, ವೈ. ವೇಣುಗೋಪಾಲ್ ರಾವ್ 1-0-13-0, ಮಾರ್ನ್ ಮಾರ್ಕೆಲ್ 4-0-32-0, ವರುಣ್ ಆ್ಯರನ್ 4-0-19-2, ಪವನ್ ನೇಗಿ 3-0-24-1, ಉಮೇಶ್ ಯಾದವ್ 4-0-21-3.

ಡೆಲ್ಲಿ ಡೇರ್‌ಡೆವಿಲ್ಸ್ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 140

ಡೇವಿಡ್ ವಾರ್ನರ್  ಸಿ ಅಜರ್ ಮಹಮೂದ್ ಬಿ ಪ್ರವೀಣ್ ಕುಮಾರ್  14

ವೀರೇಂದ್ರ ಸೆಹ್ವಾಗ್ ಬಿ ಪರ್ವಿಂದರ್ ಅವಾನಾ  08

ವೈ. ವೇಣುಗೋಪಾಲ್‌ರಾವ್ ಸಿ ನಿತಿನ್ ಸೈನಿ ಬಿ ಪರ್ವಿಂದರ್ ಅವಾನಾ  07

ಮಾಹೇಲ ಜಯವರ್ಧನೆ ಔಟಾಗದೆ  56

ರಾಸ್ ಟೇಲರ್ ಸಿ ನಿತಿನ್ ಸೈನಿ ಬಿ ಪರ್ವಿಂದರ್ ಅವಾನಾ  00

ನಮನ್ ಓಜಾ ಸಿ ಮನ್‌ದೀಪ್ ಸಿಂಗ್ ಬಿ ಪಿಯೂಷ್ ಚಾವ್ಲಾ  34

ಇರ್ಫಾನ್ ಪಠಾಣ್ ಔಟಾಗದೆ 19

ಇತರೆ: (ಲೆಗ್ ಬೈ-1, ವೈಡ್-1)  02

ವಿಕೆಟ್ ಪತನ: 1-21 (ವಾರ್ನರ್; 2.1), 2-28 (ಸೆಹ್ವಾಗ್; 3.1), 3-37 (ವೇಣುಗೋಪಾಲ್; 5.2), 4-37 (ಟೇಲರ್; 5.4), 5-(ಓಜಾ; 95).

ಬೌಲಿಂಗ್: ಪ್ರವೀಣ್ ಕುಮಾರ್ 4-0-28-1, ಅಜರ್ ಮಹಮೂದ್ 4-0-34-0, ಪರ್ವಿಂದರ್ ಅವಾನಾ 4-0-22-3, ಪಿಯೂಷ್ ಚಾವ್ಲಾ 4-1-33-1, ಹರ್ಮಿತ್ ಸಿಂಗ್ 3-0-22-0.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 5 ವಿಕೆಟ್ ಜಯ.

ಪಂದ್ಯ ಶ್ರೇಷ್ಠ: ಉಮೇಶ್ ಯಾದವ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry