ಶುಕ್ರವಾರ, ಜನವರಿ 24, 2020
21 °C

ಪ್ಲ್ಯಾನ್ ಪ್ಲಸ್ ತಂತ್ರಾಂಶ ಅನುಷ್ಠಾನ: ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪ್ಲ್ಯಾನ್ ಪ್ಲಸ್ ತಂತ್ರಾಂಶ ಅನುಷ್ಠಾನ ಕುರಿತ ತರಬೇತಿ ಶಿಬಿರವು ನಗರದ ಹೊರವಲಯದ ನೌಬಾದ್‌ನಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆರಂಭಗೊಂಡಿತು.ಪ್ಲ್ಯಾನ್ ಪ್ಲಸ್ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಶಾಂತವೀರ ಪಾಟೀಲ್ ಉದ್ಘಾಟಿಸಿದರು. ಪ್ಲ್ಯಾನ್ ಪ್ಲಸ್ ತಂತ್ರಾಂಶದ ಮಹತ್ವ ಮತ್ತು ಅನುಷ್ಠಾನದ ಕುರಿತು ಮಾಹಿತಿ ನೀಡಿದರು.ರಾಜ್ಯಮಟ್ಟದ ಎನ್.ಐ.ಸಿ. ಅಧಿಕಾರಿ ರೀಬೆ, ಜಿಲ್ಲಾ ಯೋಜನಾಧಿಕಾರಿ ಸಿದ್ಧಮ್ಮ ಪಾಟೀಲ್, ಗುತ್ತಿಗೆದಾರ ಶಶಿಕುಮಾರ, ಪ್ರಮುಖರಾದ ಶ್ರೀನಿವಾಸ, ವಿನಯ್ ಉಪಸ್ಥಿತರಿದ್ದರು. ಶಾಂತಕುಮಾರ ಪಾಟೀಲ್ ಸ್ವಾಗತಿಸಿದರು. ಬಿ.ಎನ್. ಸ್ವಾಮಿ ವಂದಿಸಿದರು.  ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಏರ್ಪಡಿಸಲಾಗಿದೆ.

ಪ್ರತಿಕ್ರಿಯಿಸಿ (+)